ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸೌಲಭ್ಯ: ಹಾಸ್ಟೆಲ್ ಬೀಗ ಹಾಕಿ ಪ್ರತಿಭಟನೆ

Vishwanath S
Updated On : 22 May 2014, 10:54 am

ರೋಣ: ಶುದ್ಧ ಕುಡಿಯುವ ನೀರು, ವೇಳೆ ಸರಿಯಾಗಿ ಉಪಾಹಾರ, ಊಟ, ಸ್ನಾನಕ್ಕೆ ಸಮರ್ಪಕ ನೀರು, ಶೌಚಾಲಯ, ಬೆಳಕಿನ ವ್ಯವಸ್ಥೆ, ಕ್ರೀಡಾ ಸಾಮಗ್ರಿ ಸೇರಿದಂತೆ ಅಗತ್ಯ ಸೌಲಭ್ಯಕ್ಕಾಗಿ ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆಯ ಮೇಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಬುಧವಾರ ಎಬಿವಿಪಿ ತಾಲೂಕು ಘಟಕ ನೇತೃತ್ವದಲ್ಲಿ ಹಾಸ್ಟೆಲ್‌ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಸುಮಾರು 15 ದಿನಗಳಿಂದ ಸರಿಯಾದ ಸಮಯಕ್ಕೆ ಉಪಾಹಾರ, ಊಟ ವಿತರಿಸುತ್ತಿಲ್ಲ. ಸದ್ಯ ಪರೀಕ್ಷೆ ನಡೆದಿದ್ದು, ಸಮಯಕ್ಕೆ ಸರಿಯಾಗಿ ಹೋಗದಿದ್ದಲ್ಲಿ ಪರೀಕ್ಷೆಯಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಾಗಿದೆ. ನಿತ್ಯ ಬೆಳಗ್ಗೆ 9ಕ್ಕೆ ಉಪಾಹಾರ ನೀಡುವ ಬದಲು 11ಕ್ಕೆ ತಯಾರಿಸುತ್ತಾರೆ. ಇದರಿಂದ ಉಪವಾಸ ಹೋಗಬೇಕಾದ ಪರಿಸ್ಥಿತಿಯಿದೆ. ಅಲ್ಲದೆ ಕಳೆದ 20 ದಿನಗಳಿಂದ ಇಲ್ಲಿ ನೀರಿಲ್ಲದ್ದರಿಂದ ಸ್ನಾನ ಮಾಡಲು ಬೇರೆಡೆಯಿಂದ ಬಾಕೀಟ್ ಮೂಲಕ ತಂದು ಸ್ನಾನ ಮಾಡಲಾಗುತ್ತಿದೆ. ಬಟ್ಟೆ ತೋಳೆದುಕೊಳ್ಳಲು ನೀರಿಲ್ಲ. ಶೌಚಾಲಯ ಸ್ವಚ್ಛತೆಯಿಲ್ಲದ್ದರಿಂದ ಗಲೀಜು ತುಂಬಿ ಗಬ್ಬು ನಾರುತ್ತಿದೆ. ಸೊಳ್ಳೆ ಕಾಟ ಹೆಚ್ಚಾಗಿದೆ ಎಂದು ಪ್ರತಿಭಟನಾನಿತರ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 2 ತಿಂಗಳಿನಿಂದ ಅಡುಗೆ ತಯಾರಿಸಲು ಅಶುದ್ಧ ನೀರು ಬಳಕೆ ಮಾಡಲಾಗುತ್ತಿದೆ. ಇದರಿಂದ ನಿತ್ಯ ಹೊಟ್ಟೆ ನೋವು, ವಾಂತಿಭೇದಿ ಹಾಗಾಗ್ಗೆ ಇಲ್ಲಿನ ಅನೇಕರಲ್ಲಿ ಕಾಣಿಸಿಕೊಳ್ಳುತ್ತಿದೆ. ನಮ್ಮ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಹಾಸ್ಟೆಲ್ ವಾರ್ಡನ್ ಆಗಲಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ. ಈ ಕುರಿತು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಎಲ್.ವಿ. ಮೇಸ್ತಾ ಅವರನ್ನು ಕೇಳಿದರೆ, 4-5 ದಿನ ತೊಂದರೆಯಾದಲ್ಲಿ ಅಡ್ಜಸ್ಟ್ ಮಾಡ್ಕೋಬೇಕು. ನಿಮ್ಮ ಮನೆಯಲ್ಲಿ ಹೀಗಾದಲ್ಲಿ ಪ್ರತಿಭಟನೆ ಮಾಡುತ್ತೀರಾ  ಊಟ ಸರಿಯಿಲ್ಲ ಅಂದ್ರೇ ಏನಾಯ್ತು.. ಎರಡು ದಿವಸಪ್ಪಾ.... ಅದನ್ನ ತಿಂದ್ರೇ ದಿಢೀರ್ ಯಾರು ಸಾಯಲ್. ಎಲ್ಲವೂ ದಿಢೀರ್ ಬೇಕು ಅಂದ್ರೆ ಕೋಡೊಕೆ ಆಗಲ್ಲ ಎಂದು ನಮ್ಮನ್ನೆ ಗದರಿಸುತ್ತಾರೆ ಎಂದು ಆರ್.ಎಸ್. ತಳವಾರ, ನೀಲರಾಜ ಮಾದರ, ಹನುಮಂತಪ್ಪ ಲಮಾಣಿ, ಮಂಜುನಾಥ ಮಾದರ, ಕೆ.ಎಸ್. ಕಾಳೆ, ಕಿರಣಕುಮಾರ ನಾಯಕ ಆರೋಪಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿ ತಾಲೂಕು ಮುಖಂಡ ಅನೀಲ ನವಲಗುಂದ, ವಿದ್ಯಾರ್ಥಿಗಳಾದ ರವಿ ಮಾದರ, ಕೆ.ಎಸ್. ಕಾಳೆ, ವೈ.ಎಂ. ಪೂಜಾರ, ಡಿ.ಎಸ್. ಮಹಾರಾಜನವರ, ಆರ್.ಎಸ್. ತಳವಾರ, ನೀಲರಾಜ ಪೂಜಾರ, ಸಿ.ವಿ. ಅವ್ವನ್ನವರ, ಯಲ್ಲಪ್ಪ ಮಾದರ, ಬಸವರಾಜ ನಾಯ್ಕರ, ಎನ್.ಎಸ್. ಗುಡಿಮನಿ, ಶೇಖಪ್ಪ ಮಾದರ, ಪರಶುರಾಮ ನಾಯ್ಕರ, ಮಂಜುನಾಥ ಮಾದರ ಮುಂತಾದವರು ಉಪಸ್ಥಿತರಿದ್ದರು.
3 ವಿದ್ಯಾರ್ಥಿಗಳು ಅಸ್ವಸ್ಥ
ರೋಣದ ಹಾಸ್ಟೆಲ್‌ನಲ್ಲಿನ ಕಳಪೆ ಮಟ್ಟದ ಆಹಾರ ಸೇವನೆಯಿಂದಾಗಿ ಕಳೆದ ನಾಲ್ಕು ದಿನಗಳಿಂದ ವಾಂತಿಭೇದಿ ತೊಂದರೆ ಅನುಭವಿಸಿದ ಕೆಲ ವಿದ್ಯಾರ್ಥಿಗಳ ಪೈಕಿ ಪ್ರತಿಭಟನೆಯಲ್ಲಿ ಕುಳಿತ ವಿದ್ಯಾರ್ಥಿಗಳಲ್ಲಿ ಹನುಮಂತಪ್ಪ ಲಮಾಣಿ, ಕಿರಣಕುಮಾರ ನಾಯಕ, ಯಲ್ಲಪ್ಪ ಮಾದರ ಇವರಿಗೆ ದಿಢೀರ್ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಸ್ಥಳದಲ್ಲಿಯೇ ಕುಸಿದು ಬಿದ್ದರು. ತಕ್ಷಣ ವಿದ್ಯಾರ್ಥಿಗಳು ಅವರನ್ನು ಸ್ಥಳೀಯ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement