ದಿಂಗಾಲೇಶ್ವರ ಮಠ ಲೋಕಾರ್ಪಣೆ ಇಂದು
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 22
ಸಮೀಪದ ಬಾಲೆಹೊಸೂರಿನ ನೂತನ ದಿಂಗಾಲೇಶ್ವರಮಠ ಹಾಗೂ ದಾಸೋಹ ಭವನದ ಲೋಕಾರ್ಪಣೆ ಕಾರ್ಯಕ್ರಮವು ಮೇ 23ರಂದು ಬೆಳಗ್ಗೆ 10.30 ಗಂಟೆಗೆ ಜರುಗಲಿದೆ.
ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಸಮಾರಂಭದ ಸಾನ್ನಿಧ್ಯ ವಹಿಸುವರು. ಶಿವಮೊಗ್ಗ ಜಿಲ್ಲೆ ಆನಂದಪುರಂದ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರಘರಾಜೇಂದ್ರ ಶ್ರೀಗಳು ಪಾವನ ಸಾನ್ನಿಧ್ಯ ವಹಿಸುವರು. ಶಿರಹಟ್ಟಿಯ ಫಕ್ಕೀರಸಿದ್ಧರಾಮ ಶ್ರೀಗಳು ಶ್ರೀಮಠದ ಕಳಸಾರೋಹಣ ನೆರವೇರಿಸಲಿದ್ದಾರೆ. ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹಾಗೂ ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ನೇತೃತ್ವ ವಹಿಸುವರು.
ಗದಗ ಜಿಲ್ಲಾ ಉಸ್ತುವಾರಿ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಎಚ್.ಕೆ. ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಶ್ರೀಮಠದ ಉದ್ಘಾಟನೆ ನೆರವೇರಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ 'ಸಾವಿಲ್ಲದ ಹಾಡು' ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಚಿವ ಸಿ.ಎಂ. ಉದಾಸಿ 'ಸಮಾಜ ಜೀವಿ' ಗ್ರಂಥ ಬಿಡುಗಡೆ ಮಾಡುವರು. ಶಾಸಕ ರಾಮಕೃಷ್ಣ ದೊಡ್ಡಮನಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸುವರು. ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ ದೃಶ್ಯ ಹಾಗೂ ಧ್ವನಿತಟ್ಟೆ ಬಿಡುಗಡೆ ಮಾಡುವರು.
ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯಕ ಭಕ್ತ ನಿವಾಸ ಉದ್ಘಾಟಿಸುವರು. ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮೂಜಗಂ ಸಭಾ ಮಂಟಪ ಉದ್ಘಾಟಿಸುವರು. ಸಂಸದ ಶಿವಕುಮಾರ ಉದಾಸಿ ಫಕ್ಕಿರೇಶ್ವರ ದಾಸೋಹ ಮನೆ ಉದ್ಘಾಟಿಸುವರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಸಮಾರಂಭ ಕುರಿತು ಪ್ರಾಸ್ತಾವಿಕ ಮಾತನಾಡುವರು. ಮುಖ್ಯ ಅತಿಥಿಗಳಾಗಿ ವಿಪ ಸದಸ್ಯ ವೀರಣ್ಣ ಮತ್ತಿಕಟ್ಟಿ, ಸಂಸದ ಸುರೇಶ ಅಂಗಡಿ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಸಚಿವ ವರ್ತೂರು ಪ್ರಕಾಶ, ಶಾಸಕ ಯು.ಬಿ. ಬಣಕಾರ, ಡಾ. ವಿಶ್ವನಾಥ ಪಾಟೀಲ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಇತರರು ಆಗಮಿಸಲಿದ್ದಾರೆ.
ಮೇ 23ರಂದು ಬೆಳಗ್ಗೆ 5.30ಕ್ಕೆ ದೀಕ್ಷೆ ಅಯ್ಯಾಚಾರ ಕಾರ್ಯಕ್ರಮವನ್ನು ಕೂಡಲದ ಗುರುನಂಜೇಶ್ವರಮಠದ ಗುರುನಂಜೇಶ್ವರ ಶ್ರೀಗಳು ನೆರವೇರಿಸುವರು. 8ಕ್ಕೆ 1111 ತ್ರಿವರ್ಣಧ್ವಜ ಹೋಲುವ ಕ್ಷೀರಕುಂಭೋತ್ಸವವು ನೂರಾರು ಹಳ್ಳಿಗಳ ಭಜನೆ, ಡೊಳ್ಳು, ಝಾಂಜ್ ಮೇಳ, ನಂದಿಕೋಲು, ವಾಧ್ಯ ವೈಭವಗಳೊಂದಿಗೆ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಶ್ರೀಮಠಕ್ಕೆ ಬಂದು ತಲುಪುತ್ತದೆ.
ಸಂಜೆ 6ಕ್ಕೆ ಒಂದು ತಿಂಗಳ ಕಾಲ ಜರುಗಿದ ಶರಣರ ಚರಿತಾಮೃತ ಪ್ರವಚನ ಮಂಗಲ ಕಾರ್ಯಕ್ರಮ ಜರುಗುವುದು.
ಶ್ರೀಶೈಲ ಪೀಠದ ಜ. ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾದಂಗಳು ಸಾನ್ನಿಧ್ಯ ವಹಿಸುವರು. ಬಳ್ಳಾರಿಯ ಕೊಟ್ಟೂರೇಶ್ವರ ಸಂಸ್ಥಾನಮಠದ ನಿರಂಜನ ಸಂಗನಬಸವ ಶ್ರೀಗಳು ವಹಿಸುವರು.
ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಅಧ್ಯಕ್ಷತೆ ವಹಿಸುವರು. ಹುಲಕೋಟಿಯ ಕೈಲಾಸ ಆಶ್ರಮದ ವಿದ್ಯಾನಂದಪುರಿ ಶ್ರೀಗಳು ನೇತೃತ್ವ ವಹಿಸುವರು.
ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ, ಶಾಸಕ ಮನೋಹರ ತಹಸೀಲ್ದಾರ್, ಕೆ.ಬಿ. ಕೋಳಿವಾಡ, ನೆಹರು ಯುವ ಕೇಂದ್ರದ ನಿರ್ದೇಶಕ ಸಲೀಂ ಅಹ್ಮದ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕ ಶಿವರಾಜ ಸಜ್ಜನರ, ಶಂಕ್ರಣ್ಣ ಮುನವಳ್ಳಿ, ಮಲ್ಲಿಕಾರ್ಜುನ ಸಾಹುಕಾರ ಆಗಮಿಸಲಿದ್ದಾರೆ.
ಇದೇ ವೇಳೆ ಸಂಜನಾ ಸವಣೂರ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯುತ್ತದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.