ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ತೆರಿಗೆ ಹಣ ದುರುಪಯೋಗ: ಆರೋಪ

Lingaraj Badiger
Updated On : 24 May 2014, 11:34 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 23
ಸ್ಥಳೀಯ ಪುರಸಭೆ ಆಡಳಿತ ಸಾರ್ವಜನಿಕರ ತೆರಿಗೆ ಹಣ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿ ಪೌರಾಡಳಿತ ನಿಯಮ ಉಲ್ಲಂಘಿಸಿದ್ದಾರೆ. ಜಿಲ್ಲಾಡಳಿತ ಈ ಕುರಿತು ತನಿಖೆಗೆ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಶುಕ್ರವಾರ ಮುಖ್ಯಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘಟನೆ ತಾಲೂಕಾಧ್ಯಕ್ಷ ನಿಂಗಪ್ಪ ಹೊನ್ನಾಪುರ ಮಾತನಾಡಿ, ಗಜೇಂದ್ರಗಡ ಪುರಸಭೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಸಾರ್ವಜನಿಕ ತೆರಿಗೆ ಹಣವನ್ನು ಜನರ ಕಲ್ಯಾಣಕ್ಕಾಗಿ ವಿನಿಯೋಗಿಸದೆ ತಮಗೆ ಬೇಕಾದವರು ಎನ್ನುವ ಕಾರಣದಿಂದಾಗಿ ಕರ್ನಾಟಕ ಜನಹಿತ ವೇದಿಕೆಗೆ ರು. 1 ಲಕ್ಷ ದಾನ ಮಾಡಿದ್ದಾರೆ. ಅಧ್ಯಕ್ಷೆ ಕವಿತಾ ಜಾಲಿಹಾಳರಿಗೆ ಆ ಸಂಘಟನೆ ಬಗ್ಗೆ ಅಭಿಮಾನವಿದ್ದರೆ ತಮ್ಮ ಸ್ವಂತದ ದುಡ್ಡು ನೀಡಿ ಹೆಸರು ಪಡೆಯಬೇಕಾಗಿತ್ತು ಎಂದು ದೂರಿದರು.
ಘಟನೆ ನಡೆದು ವಾರ ಕಳೆದರೂ ಇಲ್ಲಿವರೆಗೂ ಜಿಲ್ಲಾಡಳಿತ ಚಕಾರ ಎತ್ತದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳು ಮೂಡುತ್ತಿವೆ. ಕೂಡಲೇ ಹಣ ಪಡೆದುಕೊಂಡ ಸಂಘಟನೆಯಿಂದ ಹಣ ಮರು ಪಾವತಿಸಿ ಜತೆಗೆ ಹಣ ನೀಡಿದ ಅಧ್ಯಕ್ಷೆ ಹಾಗೂ ಇದರಲ್ಲಿ ಶಾಮೀಲಾದವರ ಸದಸ್ಯತ್ವ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಕರವೇ ಸಾರ್ವಜನಕರ ಸಹಕಾರದೊಂದಿಗೆ ಪುರಸಭೆಗೆ ಬೀಗ ಜಡಿದು ಉಗ್ರ ಪ್ರತಿಭಟನೆಗೆ ಮುಂದಾಗಲಿದೆ ಎಂದರು.
ತಾಲೂಕು ಉಪಾಧ್ಯಕ್ಷ ಮುರ್ತುಜಾ ಒಂಟಿ, ನಗರ ಘಟಕ ಅಧ್ಯಕ್ಷ ರಜಾಕ ಡಾಲಾಯತ್ ಮಾತನಾಡಿದರು. ಪ್ರಭಾರಿ ಮುಖ್ಯಾಧಿಕಾರಿ ಬಿ.ಟಿ. ಬಂಡಿವಡ್ಡರ ಸಂಘಟಕರಿಂದ ಮನವಿ ಸ್ವೀಕರಿಸಿ, ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗೆ ಮನವಿ ಕಳಿಸುವುದಾಗಿ ತಿಳಿಸಿದರು. ನರೇಗಲ್ ಘಟಕ ಅಧ್ಯಕ್ಷ ಮೌಲಾಸಾಬ ಕುಂದಗೋಳ, ರಮೇಶ ಕಾಟಿ, ಶಿವರಾಜ ಕಲ್ಗುಡಿ, ಹುಸೇನ ಕವಲೂರ, ರಾಜು ಕ್ವಾಟಿ, ಕುಮಾರ ರಾಠೋಡ್, ಯುಸೂಫ ಹಿರೇಹಾಳ, ದಾದೇಸಾಬ ತಾಳಿಕೋಟಿ, ಮೇಘರಾಜ ಇಟಗಿ, ಶಹಬಾಜ ಗೊಲಗೇರಿ ಇತರರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement