ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಲೀಂ ಸೋಲಿಗೆ ಎಚ್ಕೆ ಕಾರಣ: ಆರೋಪ ಸುಳ್ಳು

Lingaraj Badiger
Updated On : 24 May 2014, 11:35 am

ಕನ್ನಡಪ್ರಭ ವಾರ್ತೆ, ಗದಗ, ಮೇ 23
ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಸೋಲಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕಾರಣ ಎನ್ನುವ ರೀತಿಯ ಹೇಳಿಕೆಗಳು ಸತ್ಯಕ್ಕೆ ದೂರವಾದದ್ದು ಎಂದು ಅಂಜುಮನ್ ಕಮಿಟಿ ಅಧ್ಯಕ್ಷ ಸಾಧಿಕ ನರಗುಂದ ಹೇಳಿದರು.
ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಲೀಂ ಅಹ್ಮದ ಸೋಲಿನ ಬಗ್ಗೆ ಈಗ ವ್ಯಾಖ್ಯಾನ ಮಾಡುತ್ತಿರುವವರು ಮೊದಲೇ ಅವರ ಗೆಲುವಿಗಾಗಿ ಶ್ರಮಿಸಿದ್ದರೆ ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ. ಸಚಿವ ಎಚ್.ಕೆ. ಪಾಟೀಲ ಹಾಗೂ ಡಿ.ಆರ್. ಪಾಟೀಲ ತಮ್ಮ ಚುನಾವಣೆಗಿಂತಲೂ ಹೆಚ್ಚಿನ ಶ್ರಮ ವಹಿಸಿದ್ದಾರೆ. ಆದರೆ, ಮೋದಿ ಅಲೆಗೆ ಎಲ್ಲಾ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಇದು ಹಾವೇರಿ ಕ್ಷೇತ್ರದಲ್ಲಿ ಮಾತ್ರ ಈ ಬಗ್ಗೆ ಚರ್ಚೆಯಾಗುತ್ತಿದೆ. ಇದು ಕೆಲವರು ಕ್ಷುಲ್ಲಕ ಟೀಕೆಯಾಗಿದೆ ಎಂದರು. ಹಾಗಾದರೆ ಸೋಲಿಗೆ ಕಾರಣವಾದರೂ ಏನು ಎಂದಾಗ, ಅವರು ಮೋದಿಯ ಅಲೆಯಿಂದ ಸೋಲಿಗೆ ಕಾರಣ ಎಂದ ಅವರು, 2 ದಿನಗಳಿಂದ ಗದಗ ಜಿಲ್ಲಾದ್ಯಂತ ಕೋಳಿವಾಡ ಅವರ ಹೇಳಿಕೆ ಕುರಿತು ಪ್ರತಿಭಟನೆ ನಡೆಸುತ್ತಿರುವವರು ಕಾಂಗ್ರೆಸ್ ಪಕ್ಷದವರಲ್ಲ ಎಂದರು.
ಅಕ್ಬರ್‌ಸಾಬ್ ಬಬರ್ಚಿ, ಶಫಿ ಕುದರಿ, ಮುನ್ನಾ ರೇಷ್ಮಿ, ನವಾಬ ಮೇಸ್ತ್ರಿ, ತೈಯಬ್ ಕುನ್ನಿಭಾವಿ, ಜಾಕಿರ ಮುಜಾವರ, ಉಮರ್‌ಫಾರೂಕ್ ಹುಬ್ಬಳ್ಳಿ, ಅನ್ವರ್ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement