ಗ್ರಾಮೀಣರಲ್ಲಿ ನಿರುದ್ಯೋಗ ಸಮಸ್ಯೆ
ಲಕ್ಷ್ಮೇಶ್ವರ: ಗ್ರಾಮೀಣ ಪ್ರದೇಶದ ಯುವಕರಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪದವಿ ಜತೆಗೆ ವೃತ್ತಿ ಸಂಬಂಧಿ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಪಟ್ಟಣದ ಪುರಸಭೆಯ ಉಮಾ ಮಹಾವಿದ್ಯಾಲದಲ್ಲಿ ಜನನಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಫಾಸ್ಟ್ಕ್ಲಿಕ್ ಕಂಪ್ಯೂಟರ್ ಅಕಾಡೆಮಿ ಸೆಂಟರ್ ಆಶ್ರಯದಲ್ಲಿ ಜರುಗಿದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಸ್ಥಳೀಯ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಸಮಾಜದಲ್ಲಿರುವ ನಿರುದ್ಯೋಗವನ್ನು ಕಡಿಮೆ ಮಾಡುವ ಹಾಗೂ ನಿರುದ್ಯೋಗಿಗಳಿಗೆ ಮಾರ್ಗದರ್ಶನ ಮಾಡುವ ಕಾರ್ಯ ಮಾಡಬೇಕು ಎಂದರು.
ಮೇಳದಲ್ಲಿ ಟೆಕ್ನೋವೆರ್ಟೆಕ್ಸ್, ಹುಬ್ಬಳ್ಳಿಯ ಬೆಲ್ಲದ ಮೋಟರ್ಸ್, ಜಿಂದಾಲ್ ಕಂಪನಿ, ನವಭಾರತ ಫರ್ಟಿಲೈಜರ್ಸ್, ಪ್ಯೂಚರ್ ಫೈನಾನ್ಸ್ ಕಂಪನಿ, ಟೆಕ್ ಮಹಿಂದ್ರಾ, ಫಸ್ಟ್ ಸೋರ್ಸ್ ಇಂಡೋಟೆಕ್, ಸೇಫ್ಟಿ ಸಲ್ಯೂಷನ್, ಐಸಿಐಸಿಐ ಬ್ಯಾಂಕ್, ಪಿಟೆಕ್ಸ್ ಸೇರಿದಂತೆ ಹಲವಾರು ಕಂಪನಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಜಿ.ಎಸ್.ಮಹಾಜನಶೆಟ್ಟರ, ಪುರಸಭೆ ಸದಸ್ಯ ರಾಜು ಕುಂಬಿ, ಕಿರಣ ನವಲೆ, ಐಟಿಐ ಕಾಲೇಜಿನ ಪ್ರಾ. ಕೆ.ನಾಗರಾಜಪ್ಪ, ರಮೇಶ ಬಿರಾದಾರ, ಪ್ರಾ. ಬಸವರಾಜ ಮಲ್ಲೂರ, ಐ.ಆರ್.ದ್ಯಾವನಗೌಡರ ಹಾಜರಿದ್ದರು.