ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂಗೀತದಿಂದ ಮಾನಸಿಕ ನೆಮ್ಮದಿ: ಗೋಡಖಿಂಡಿ

Rashmi Kasaragodu
Updated On : 26 May 2014, 12:11 pm

ಗದಗ: ಸಂಗೀತ ಗಂಧರ್ವ ವಿದ್ಯೆಯಾಗಿದ್ದು, ಮಾನಸಿಕ ಶಾಂತಿ ನೀಡುವ ಶಕ್ತಿ ಇದೆ. ಸಂಗೀತವನ್ನು ಹಾಡುವ, ಕೇಳುವ ಎಲ್ಲರಿಗೂ ನೆಮ್ಮದಿ ನೀಡುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಆನಂದ ಗೋಡಖಿಂಡಿ ಹೇಳಿದರು.ಇಲ್ಲಿನ ಶ್ರೀ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಈಚೆಗೆ ನರೇಗಲ್ಲದ ರಾಜಶ್ರೀ ಕುಲಕರ್ಣಿಯವರಿಂದ ನಡೆದ ಸಂಗೀತ ಸೌರಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದು ಸಂಗೀತದ ನೆಲೆಬೀಡು. ಇಲ್ಲಿನ ಪಂ. ಪಂಚಾಕ್ಷರಿ ಗವಾಯಿಗಳವರು, ಭಾರತರತ್ನ ಡಾ. ಪಂ. ಭೀಮಸೇನ ಜೋಷಿಯವರು, ಪಂ. ಪುಟ್ಟರಾಜ ಗವಾಯಿಗಳವರು ಬೆಳೆಸಿರುವ ಸಂಗೀತದ ಪರಂಪರೆಯು ಇಡೀ ಜಗತ್ತಿನಲ್ಲಿ ಇಂದಿಗೂ ಬೆಳಗುತ್ತಿದೆ. ಅವರ ಆಶೀರ್ವಾದದಿಂದ ಅನೇಕ ಸಂಗೀತ ಪ್ರತಿಭೆಗಳು ಈ ಜಿಲ್ಲೆಯಲ್ಲಿ ತಮ್ಮ ಸಂಗೀತದ ಮೂಲಕ ಸಂಗೀತ ಝೇಂಕಾರವನ್ನು ಹೊರಡಿಸುತ್ತಿವೆ ಎಂದರು. ದ.ರಾ. ಬೇಂದ್ರೆಯವರ ಭಾವ ಗೀತೆಗಳನ್ನೂ, ಆನಂದ ಕಂದರವರ ಜಾನಪದ ಗೀತೆಗಳನ್ನೂ ಹಾಡಿ ನೆರೆದ ಶ್ರೋತೃಗಳ ಮನ ತಣಿಸಿದರು. ರಾಜಶ್ರೀ ಕುಲಕರ್ಣಿ ಸನ್ಮಾನಿಸಲಾತು. ಎಂ.ವಿ. ಕೋಳಿವಾಡ, ಕಳಕಮಲ್ಲಯ್ಯ ಅಣ್ಣಿಗೇರಿಮಠ ಹಾಜರಿದ್ದರು. ರಾಮಚಂದ್ರ ಮೋನೆ ನಿರ್ವಹಿಸಿದರು. ಜಿ.ವಿ. ಕೌಜಲಗಿ ಸ್ವಾಗತಿಸಿದರು. ಅನಿಲ ವೈದ್ಯ ವಂದಿಸಿದರು.
ಪರಿಶ್ರಮದಿಂದ ಯಶಸ್ಸು: ಸಿ.ಜಿ. ಹುಡೇದಗಡ್ಡಿ
ನರೇಗಲ್ಲ: ನರೇಗಲ್ಲದ ಸೈಬರ್ ಟೆಕ್ ಕಂಪ್ಯೂಟರ್‌ನ 14ನೇ ವಾರ್ಷಿಕೋತ್ಸವ, ಉಚಿತ ಕಂಪ್ಯೂಟರ್ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದ ಮತ್ತು 2013-14ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಹಾಗೂ ಎಸ್‌ಎ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಸಿ.ಜಿ. ಹುಡೇದಗಡ್ಡಿ ಅವರ ನಿವೃತ್ತಿ ನಿಮಿತ್ತ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮ ನೆರವೇರಿತು. ಪ್ರಾದ್ಯಾಪಕ ಸಿ.ಜಿ. ಹುಡೇದಗಡ್ಡಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮನುಷ್ಯ ಜೀವನದಲ್ಲಿ ಸಾಧನೆಗೈಯಲು ದೃಢ ಸಂಕಲ್ಪ ನಿರಂತರ ಪ್ರಯತ್ನ ಪಾಲಕರ ಸಹಕಾರವಿದ್ದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಅಂಥ ಸಾಧನೆ ನಮ್ಮೂರಿನ ಮಗು ಮಾಡಿದ್ದು ಹೆಮ್ಮೆ ಎಂದರು. ಸನ್ಮಾನ ಸ್ವೀಕರಿಸಿದ ಅಭಿಲಾಷಾ ಮಾತನಾಡಿದರು. ವೈ.ಸಿ. ಪಾಟೀಲ ಪರೀಕ್ಷೆ ಮತ್ತು ಫಲಿತಾಂಶದ ಬಗ್ಗೆ ಮಾತನಾಡಿದರು. ಅರುಣ ಕುಲಕರ್ಣಿ ವಿಷಯ ಮಂಡಿಸಿದರು. ನಂದೀಶ ಅಚ್ಚಿ ಅಧ್ಯಕ್ಷತೆ ವಹಿಸಿದ್ದರು. ಮುತ್ತಣ್ಣ ಕಡಗದ, ಬಿ.ಕೆ. ಕಂಬಳಿ, ಜಯಕಾಂತ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement