ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಕಲ ಜೀವಿಗಳ ಒಳಿತಿನಿಂದ ಉತ್ತಮ ಜೀವನ: ಶಿವಾಚಾರ್ಯ ಶ್ರೀ

Rashmi Kasaragodu
Updated On : 26 May 2014, 12:11 pm

ಗಜೇಂದ್ರಗಡ: ಜೀವಿಗಳಲ್ಲಿ ಶ್ರೇಷ್ಠತೆ ಹೊಂದಿರುವ ಮಾನವ ಜೀವಿ ಸೃಷ್ಟಿಯ ಸಕಲ ಜೀವಿಗಳಿಗೆ ಒಳಿತು ಮಾಡುವ ಉದ್ದೇಶ ಹೊಂದಿ ಬದುಕು ಸಾಗಿಸಿದಾಗ ಮಾತ್ರ ಮಾನವೀಯತೆ ಸಾರ್ಥಕಗೊಳ್ಳುತ್ತದೆ ಎಂದು ಶಿವಲಿಂಗ ಶಿವಾಚಾರ್ಯ ಶ್ರೀ ಹೇಳಿದರು.
ಅವರು ಸಮೀಪದ ಕಲ್ಲಿಗನೂರ ಗ್ರಾಮದ ಶ್ರೀ ಹುಚ್ಚಿರೇಶ್ವರ ಮಠದ ಆವರಣದಲ್ಲಿನ ಅರಿವಾನಾಲಯ ಮಂಟಪದಲ್ಲಿ ರಾಜ್ಯ ಚೇತಾತ್ಮಗಳ ಸಮಾವೇಶ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪತ್ರಕರ್ತ ಮಂಜುನಾಥ ರಾಠೋಡ್‌ಗೆ ಮುಕ್ತಿವಾಹಿನಿ ಆತ್ಮ ಕಲ್ಯಾಣ ಅಭಿಯಾನದಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆಂಧ್ರಪ್ರದೇಶದ ಮುಕ್ತಿ ವಾಹಿನಿ ಆತ್ಮ ಕಲ್ಯಾಣ ಅಭಿಯಾನ ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಸಿ. ಪೂಜಾರ,ಉಪನ್ಯಾಸಕಿ ಜಯಲಕ್ಷ್ಮಿ ಚಳಗೇರಿ, ನೆಲ್ಲೂರ-ಪ್ಯಾಟಿಯ ಧರ್ಮರಮಠದ ಸಕ್ರಪ್ಪಜ್ಜನವರು, ಪ್ರೋ. ಬಿ.ಕೆ. ಮಾದಿ, ತಾ.ಪಂ. ಸದಸ್ಯ ಆರ್.ಕೆ. ಚವ್ಹಾಣ, ಮಂಜುಳಾ ಇಟಗಿ, ರಾಮಕೃಷ್ಣ ಯು.ಬಿ. ಪವಿತ್ರಾ ಪುರದ, ಎಸ್.ಎಸ್. ಬಾಣದ, ಈರಣ್ಣ ಅಂಗಡಿ, ರಫೀಕ ತೊರಗಲ್, ಸಿದ್ಧಲಿಂಗಯ್ಯ ಮಾಲಗಿತ್ತಿ, ಬಾಲರಾಜ ಹಾದಿಮನಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement