ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮಾಜ್ನ ಕಟ್ಟುವ ಕೆಲಸ ಶ್ಲಾಘನೀಯ

Rashmi Kasaragodu
Updated On : 26 May 2014, 12:11 pm

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 25
ಜಗತ್ತಿನಲ್ಲಿ ಕೆಟ್ಟ ಮಕ್ಕಳು ಸಿಗಬಹುದಾಗಿದೆ. ಆದರೆ, ಕೆಟ್ಟ ತಾಯಿ ಸಿಗುವುದಿಲ್ಲವೆಂಬ ಮಾತು ಸತ್ಯವಾಗಿದೆ. ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮಿಗಳು ನಾಡಿನ ಉದ್ಧಾರಕ್ಕಾಗಿ ಮಠ್ನ ಕಟ್ಟುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಸ್ವಾಮಿಗಳು ಹೇಳಿದರು.
ಸಮೀಪದ ಬಾಲೆಹೊಸೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದಿಂಗಾಲೇಶ್ವರಮಠ ಹಾಗೂ ದಾಸೋಹ ಭವನದ ಉದ್ಘಾಟನಾ ಕಾರ್ಯಕ್ರಮದ ಅಂತಿಮ ದಿನವಾದ ಭಾನುವಾರ 5001 ಮುತ್ತೈದೆಯರಿಗೆ ಉಡಿ ತುಂಬುವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮಾಜದ ಉದ್ಧಾರಕ್ಕಾಗಿ ಮಠ-ಮಾನ್ಯಗಳು ಕೆಲಸ ಮಾಡಬೇಕು. ಜನರಲ್ಲಿರುವ ದುಶ್ಚಟಗಳನ್ನು ಬಿಡಿಸಿ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುವ ದಿಂಗಾಲೇಶ್ವರ ಶ್ರೀಗಳು ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಸ್ವಾಮಿಗಳು ಸಮಾಜದ ಉನ್ನತಿಗಾಗಿ ಸದಾ ಮಿಡಿಯುತ್ತಿರಬೇಕು, ಮಾತೃ ಹೃದಯವನ್ನ್ನು ಉಡಿ ತುಂಬುವ ಮೂಲಕ ಗೌರವಿಸುತ್ತಿರುವುದು ಮೆಚ್ಚಬೇಕಾದ ಸಂಗತಿಯಾಗಿದ್ದು, ಜತೆಯಲ್ಲಿ ತೆಂಗಿನ ಹಾಗೂ ಮಾವಿನ ಸಸ್ನಿ ನೀಡುವ ಮೂಲಕ ಹಸಿರ್ನು ಉಳಿಸಿ, ಬೆಳೆಸುವ ಕಾರ್ಯವನ್ನ್ನು ದಿಂಗಾಲೇಶ್ವರ ಶ್ರೀಗಳು ಮಾಡುತ್ತಿರುವುದು ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದಾರೆ ಎಂದರೆ ತಪ್ಪಾಗಲಾರದು ಎಂದರು.
ತೋಟಗಾರಿಕೆ ಹಾಗೂ ಮಾರುಕಟ್ಟೆ ಸಚಿವ ಶ್ಯಾಮನೂರ ಶಿವಶಂಕರಪ್ಪ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು.
ಸಮಾರಂಭದಲ್ಲಿ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಂಸದ ವಿಜಯ ಸಂಕೇಶ್ವರ, ಶಾಸಕರಾದ ಯು.ಬಿ. ಬಣಕಾರ, ರಾಮಕೃಷ್ಣ ದೊಡ್ಡಮನಿ, ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ, ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀ, ಶಿರಹಟ್ಟಿಯ ಫಕ್ಕೀರಸಿದ್ಧರಾಮ ಸ್ವಾಮೀಜಿ ಮಾತನಾಡಿದರು. ಹುಬ್ಬಳ್ಳಿಯ ಮೂರುಸಾವಿರ ಮಠದ ಡಾ, ಗುರುಸಿದ್ಧರಾಜಯೋಗೀಂದ್ರ ಶ್ರೀ, ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮಿಗಳು, ಜಮಖಂಡಿಯ ಓಲೆಮಠದ ಡಾ. ಚನ್ನ್ನಬಸವ ಶ್ರೀಗಳು, ನೀರಲಗಿಯ ಶ್ರೀ, ದುಂಡಸಿಯ ಶ್ರೀ, ಅಕ್ಕಲಕೋಟಿಯ ಶ್ರೀ, ಗಡಿಗೌಡಗಾವಂದ ಶ್ರೀ, ಸೊರಟೂರು ಶ್ರೀ, ಕಪ್ಪತ್ತಗುಡ್ಡದ ನಂದಿವೇರಿಮಠದ ಶ್ರೀಗಳು ಹಾಜರಿದ್ದರು.
ಇದಕ್ಕೂ ಮುನ್ನ ಶಿರಹಟ್ಟಿಯ ಫಕ್ಕೀರಸಿದ್ದರಾಮ ಶ್ರೀಗಳು ದಾಸೋಹ ಭವನ ಉದ್ಘಾಟಿಸಿದರು. ನಂತರ 5001 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ್ನ ನೆರವೇರಿಸಲಾಯಿತು. ಬಳಿಕ ಮುತ್ತೈದೆಯರ ಮೇಲೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡುವ ಮೂಲಕ ಹರಸಲಾಯಿತು. ಲಕ್ಷಾಂತರ ಭಕ್ತರು ಉಡಿ ತುಂಬುವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement