ಸಿಂಡಿಕೇಟ್ ಎಲ್ಲರ ಮೆಚ್ಚಿನ ಬ್ಯಾಂಕ್: ಇಲ್ಲೂರ
ಮುಂಡರಗಿ: 1970ರಿಂದ ಮುಂಡರಗಿ ಪಟ್ಟಣದಲ್ಲಿ ಪ್ರಾರಂಭವಾದ ಸಿಂಡಿಕೇಟ್ ಬ್ಯಾಂಕ್ ಈ ಭಾಗದ ಹಿರಿಯ ಬ್ಯಾಂಕ್ ಆಗಿದೆ. ಗ್ರಾಹಕರ ಮತ್ತು ರೈತರ ಸಹಕಾರದಿಂದ ಬ್ಯಾಂಕಿನ ವಹಿವಾಟು ಹೆಚ್ಚಾಗಿ ಬ್ಯಾಂಕ್ ಎಲ್ಲರ ಮೆಚ್ಚಿನ ಬ್ಯಾಂಕ್ ಆಗಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾರಾಯಣಪ್ಪ ಇಲ್ಲೂರ ಹೇಳಿದರು.
ಪಟ್ಟಣದ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಹಮ್ಮಿಕೊಂಡಿರುವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕ್ ಶಾಖಾ ಪ್ರಬಂಧಕ ಎಂ.ಡಿ. ಹಾದಿಮನಿ ಮಾತನಾಡಿ, ಕೇವಲ 8 ಸಾವಿರ ಡಿಪಾಸಿಟ್‌ನಿಂದ ಪ್ರಾರಂಭವಾದ ಬ್ಯಾಂಕ್ ಇಂದು ಸಾಕಷ್ಟು ಅಂಗ ಸಂಸ್ಥೆ ಹೊಂದಿದೆ. ಇಂದು ಎಲ್ಲ ಸಂಸ್ಥೆಗಳಲ್ಲೂ ಸೇರಿ ಒಟ್ಟು ರು. 8 ಸಾವಿರ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಡರಗಿ ಶಾಖೆ ಸಿಬ್ಬಂದಿಯ ಕೊರತೆ ಇದ್ದರೂ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸುತ್ತಿದೆ. ಒಟ್ಟು ರು. 90 ಕೋಟಿ ವಹಿವಾಟು ಹೊಂದಿದ ಮುಂಡರಗಿ ಬ್ಯಾಂಕ್ ಮನೆಸಾಲ, ಬೆಳೆಸಾಲ, ಕೃಷಿ ಸಾಲ, ಉದ್ಯೋಗ ಸಾಲ ನೀಡುವಲ್ಲಿ ಉತ್ತಮ ಸೇವೆ ನೀಡುತ್ತಿದೆ ಎಂದರು. ಬ್ಯಾಂಕ್‌ನ ಕೃಷಿ ಅಭಿವೃದ್ಧಿ ಅಧಿಕಾರಿ ಪ್ರವೀಣ, ಮಾಜಿ ಸೈನಿಕ ಹನುಮಂತಪ್ಪ ಶಿರಬಡಗಿ, ಪ್ರಗತಿಪರ ರೈತ ಚಂದ್ರಶೇಖರ ಮೋರನಾಳ ಹಾಗೂ ಗ್ರಾಹಕರ ಪರವಾಗಿ ಆರ್.ಬಿ. ಹಕ್ಕಂಡಿ, ಜಿ.ಎಂ. ಕುಲಕರ್ಣಿ, ಕೃಷಿ ಪಡಿತ ಈಶ್ವರಪ್ಪ ಹಂಚಿನಾಳ, ಪ್ರೊ.ಎಸ್.ಆರ್. ಬಸಾಪುರ, ಕೆ.ಎಫ್. ಮೇಟಿ ಮಾತನಾಡಿದರು. ಪವನ ಚೋಪ್ರಾ, ತುಳಸಪ್ಪ ಸೋಯಿನಹಳ್ಳಿ, ಶರತ್‌ಕುಮಾರ, ಬಾಲಾಜಿ, ಎಸ್.ಬಿ. ಕುರಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಾಖಾ ಪ್ರಬಂಧಕ ಎಂ.ಡಿ. ಹಾದಿಮನಿ ಸ್ವಾಗತಿಸಿದರು. ವೈ.ಎಸ್. ನಾಯಕ ನಿರೂಪಿಸಿದರು.