ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಹಾಯಧನಕ್ಕಾಗಿ ಪ್ರತಿಭಟನೆ

Vishwanath S
Updated On : 27 May 2014, 11:00 am

ಶಿರಹಟ್ಟಿ: 2012-13ನೇ ಸಾಲಿನ ವಾಜಪೇಯಿ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದ ಸುಮಾರು 260 ಫಲಾನುಭವಿಗಳಲ್ಲಿ ಮೇ 2012ರಂದು ನಡೆದ ಆಶ್ರಯ ಯೋಜನೆಯ ಸಾಮಾನ್ಯ ಸಭೆಯಲ್ಲಿ ಸಾಮಾನ್ಯ ಮತದಿಂದ ಠರಾವು ಪಾಸು ಮಾಡಿ 200 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಮನೆ ಕಟ್ಟಿಕೊಂಡವರಿಗೆ ಇಲ್ಲಿವರೆಗೂ ಸಹಾಯಧನದ ಚೆಕ್ ನೀಡದಿರುವುದನ್ನು ವಿರೋಧಿಸಿ ಫಲಾನುಭವಿಗಳು ಪಪಂ ಅಧ್ಯಕ್ಷರ ಕೊಠಡಿಯೊಳಗೆ ನುಗ್ಗಿ ಸೋಮವಾರ ಪ್ರತಿಭಟನೆ ನಡೆಸಿದರು.
ಫಲಾನುಭವಿಗಳು ಮಾತನಾಡಿ, 2 ವರ್ಷಗಳಿಂದ ಪಪಂ ಕಾರ್ಯಾಲಯಕ್ಕೆ ಸಹಾಯಧನದ ಚೆಕ್ ನೀಡುವಂತೆ ಅಲೆದಾಡಿ ಸಾಕಾಗಿದೆ. ಖಾಸಗಿ ಲೇವಾದೇವಿ ವ್ಯವಹಾರ ಮಾಡುವವರಲ್ಲಿ ಮನೆ ಕಟ್ಟಿಕೊಳ್ಳಲು ಬಡ್ಡಿ ರೂಪದಲ್ಲಿ ಸಾಲ ಪಡೆದಿದ್ದು, ಸಾಲ ನೀಡಿದವರು ನಿತ್ಯ ಕಿರುಕುಳ ನೀಡುತ್ತಿದ್ದು, ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸದ್ಯ ಮಳೆ ಸುರಿಯಲಾರಂಭಿಸಿದರೆ ಕಟ್ಟಿಕೊಂಡ ಮನೆಗಳು ನೆಲಸಮವಾಗುವ ಸಾಧ್ಯತೆ ಇದ್ದು, ಸಹಾಯಧನದ ಚೆಕ್ ನೀಡುವಂತೆ ಆಗ್ರಹಿಸಿದರು. ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಸದಸ್ಯ ಚಾಂದಸಾಬ ಮುಳಗುಂದ, ಚನ್ನವೀರಯ್ಯ ಲಕ್ಕುಂಡಿಮಠ, ನಿಸಾರಅಹ್ಮದ್ ಖತೀಬ, ಚಾಂದ್ ಮುಳಗುಂದ, ಹನೀಫ್ ಪಠಾಣ, ಅಬ್ಬು ಬೈರೆಕದಾರ, ಬುಡ್ಡಾ ಮುಳಗುಂದ, ನೀಲಪ್ಪ ರಡ್ಡೇರ, ನಿಂಗಪ್ಪ ಹುಬ್ಬಳ್ಳಿ, ನಾಗಪ್ಪ ಗಾಣಗೇರ ಪ್ರತಿಭಟನೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement