ಲಿಡಕರ್ ಅಂಗಡಿಗಳನ್ನು ಒದಗಿಸಲು ಆಗ್ರಹಿಸಿ ಚಮ್ಮಾರರ ಮನವಿ
ಗದಗ: ಮಾದರ ಜನಾಂಗದ ಮೂಲ ವೃತ್ತಿಯಾದ ಚರ್ಮಗಾರಿಕೆಗೆ ಲಿಡಕರ್ ಅಂಗಡಿಗಳನ್ನು ಪೂರೈಸುವಂತೆ ಆಗ್ರಹಿಸಿ ಈಚೆಗೆ ಜೈಭೀಮ ಸಂಘರ್ಷ ಸಮಿತಿಯ ವತಿಯಿಂದ ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಶಹರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕೂಡ ಮಾದರ ಜನಾಂಗದ ಮೂಲ ವೃತ್ತಿಯಾದ ಚರ್ಮದ ವಿವಿಧ ವಸ್ತುಗಳನ್ನು ಸಿದ್ಧಪಡಿಸುವ ನುರಿತ ಅನುಭವಿಕರು ತಲತಲಾಂತರದಿಂದ ಗ್ರಾಮೀಣ ಮತ್ತು ನಗರ ಪ್ರದೇಶಧಲ್ಲಿ ಮಾದಿಗ ಜನಾಂಗದವರು ಚಪ್ಪಲಿ ಹೊಲಿಯುವುದು ಹಾಗೂ ಚರ್ಮ ಹದಮಾಡುವುದನ್ನು ತಮ್ಮ ಕುಲಕಸುಬಾಗಿ ಮಾಡಿಕೊಂಡಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಸರ್ಕಾರದ ಸಹಕಾರವಿಲ್ಲದೇ ಅವರ ಅರ್ಹತೆ ಯಾರಿಗೂ ಗೊತ್ತಾಗುತ್ತಿಲ್ಲ.
ಗ್ರಾಮೀಣ ಮತ್ತು ಶಹರ ಪ್ರದೇಶದಲ್ಲಿ ಮಾದಿಗ ಜನಾಂಗದವರು ಲೀಡಕರ ಕಂಪನಿಯವರು ನಡೆಸಿಕೊಡುವ ಚರ್ಮಗಾರಿಕಾ ತರಬೇತಿಗಳನ್ನು ಪಡೆದು ಪ್ರಮಾಣಪತ್ರ ಪಡೆದುಕೊಂಡ ಮಾದಿಗ ಜನಾಂಗದವರು ಸಾಕಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ. ಅಂತವರನ್ನು ಉದ್ಯೋಗಿಗಳನ್ನಾಗಿಸಲು ನಗರಸಭೆಯ ಶೇ. 22.77 ರ ಅಡಿಯಲ್ಲಿ ಲೀಡಕರ ಮಾದರಿಯ ತಗಡಿನ ಅಂಗಡಿಗಳನ್ನು ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಸಮಿತಿಯ ರಾಜ್ಯ ಕಾರ್ಯದರ್ಶಿ ಅಶೋಕ ಹಾದಿಮನಿ, ಸುಂಕಪ್ಪ ಗುತ್ತಿ, ಮಂಜುನಾಥ ಬಳ್ಳಾರಿ, ಪರಶುರಾಮ ಬಳ್ಳಾರಿ, ನರಸಪ್ಪ ನಾನಬಾಲ ಉಪಸ್ಥಿತರಿದ್ದರು.