ನರೇಂದ್ರ ಮೋದಿ ಪ್ರಧಾನಿ: ವಿಜಯೋತ್ಸವ
ಗದಗ: ದೇಶದ 15ನೇ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ನಿಮಿತ್ಯ ಈಚೆಗೆ ಹೊಂಬಳ ಗ್ರಾಪಂ ಬಿಜೆಪಿ ಸದಸ್ಯರು ಹಾಗೂ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.
ಗ್ರಾಪಂ ಸದಸ್ಯ ಬಸವರಾಜ ಹುಣಸಿಮರದ ಮಾತನಾಡಿ, ದೇಶದ ಅಭಿವೃದ್ದಿ ಶಾಖೆ ಮೋದಿಯವರಿಂದ ಆರಂಭವಾಗಿದೆ. ಎಲ್ಲ ಬಡವರ ಮನೆಗೆ ಸರ್ಕಾರಿ ಸೌಲಭ್ಯಗಳು ಸರಿಯಾಗಿ ಸಿಗುವ ಕಾಲ ಬಂದಿದೆ. ಸಾರ್ಕ ರಾಷ್ಟ್ರಗಳ ನಾಯಕರನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿ ದೇಶದ ಪ್ರಧಾನ ಮಂತ್ರಿ ಗದ್ದುಗೆಯನ್ನು ಅಲಕಂರಿಸಿ, ಮೋದಿಯವರು ಹೊಸ ಇತಿಹಾಸ ಸೃಷ್ಠಿಸಿದ್ದಾರೆ ಎಂದರು.
ನಾಗಪ್ಪ ಅರಹುಣಸಿಯವರ, ಡಿ.ಆರ್. ಬಾಪೂನವರ, ಸೂಡಿ, ಎಸ್.ಎಸ್. ಬಾಣಿ, ರಂಗನಾಥ, ಶ್ರೀನಿವಾಸ ಕುಲಕರ್ಣಿ, ಎನ್.ಬಿ. ಅರಹುಣಸಿ, ಶೋಭಾ ರಘು. ಹುಣಶಿಮರದ, ಜಯಶ್ರೀ ಹಡಗಲಿ, ಲಲಿತಾ ಸರ್ವೋದಿ, ಶೇಖವ್ವ ಕುರಹಟ್ಟಿ, ಶೇಖಣ್ಣ ಉಮಚಗಿ, ಅಂದಪ್ಪ ಹುಂಬಿ, ಎಸ್.ಕೆ. ಬಾಪೂನವರ, ಕೆ.ಸಿ. ಕುರಹಟ್ಟಿ, ಯಲ್ಲಪ್ಪ ಪದ್ಮನ್ನವರ, ಬಸವರಾಜ ಹಸಬಿ, ಮಲ್ಲಪ್ಪ ಹುಣಶಿಕಟ್ಟಿ, ಮಾಬುಸಾಬ ಸಂದಿಮನಿ, ಬಸಪ್ಪ ಹುಣಶಿಮರದ, ವೀಣಾ ಬೈಲಿ, ಜ್ಯೋತಿ. ಕುಲಕರ್ಣಿ, ಶಾಂತಾ ಸೋಮಣ್ಣವರ, ಬಸವರಾಜ ಹುಲ್ಲನ್ನವರ ಉಪಸ್ಥಿತರಿದ್ದರು.