ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಲಿಗಾಡೆ ಕನ್ನಡದ ಕಣ್ಮಣಿ: ಹಾದಿಮನಿ

Lingaraj Badiger
Updated On : 31 May 2014, 12:16 pm

ಗದಗ: ಜಯದೇವಿತಾಯಿ ಲಿಗಾಡೆಯವರು ಸಮಾಜಮುಖಿಯಾಗಿ ಸೇವೆಯನ್ನು ಮಾಡುತ್ತ, ಕನ್ನಡದ ಏಕೀಕರಣಕ್ಕಾಗಿ, ಕನ್ನಡದ ಉಳಿವಿಗಾಗಿ, ಏಳ್ಗೆಗಾಗಿ, ಗಡಿನಾಡಿನಲ್ಲಿ ನಿಂತು ಹೋರಾಟವನ್ನು ಮಾಡುವ ಮೂಲಕ ಕನ್ನಡಿಗರ ಮನದಲ್ಲಿ ಕನ್ನಡದ ಕಣ್ಮಣಿಯಾಗಿ ಬಾಳಿದವರು ಎಂದು ಶಿಕ್ಷಕ ಎಸ್.ಎಂ. ಹಾದಿಮನಿ ಹೇಳಿದರು. ಅವರು ನಗರದ ಒಕ್ಕಲಗೇರಿ ಓಣಿಯ ಮಹದೇವಪ್ಪ ಹೊಂಬಳ ನಿವಾಸದಲ್ಲಿ ಗದಗ ತಾಲೂಕು ಶರಣ ಸಾಹಿತ್ಯ ಪರಿಷತ್ ಹಾಗೂ ಬಸವದಳದ ಆಶ್ರಯದಲ್ಲಿ ಈಚೆಗೆ ಜರುಗಿದ ಬಸವದಳದ 1073ನೇ ಶರಣ ಸಂಗಮ ಕಾರ್ಯಕ್ರಮದ ಅಡಿಯಲ್ಲಿ ಜಯದೇವಿಯಾತಿ ಲಿಗಾಡೆ ಅವರ ಜಯಂತಿ ಹಾಗೂ ಪರಮೇಶ್ವರಪ್ಪ ಹೊಂಬಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ  ಉಪನ್ಯಾಸ ನೀಡಿದರು. ಎ.ಬಿ. ಲಿಂಗದಾಳ ಅಧ್ಯಕ್ಷತೆ ವಹಿಸಿದ್ದರು. ಎಂ.ಎ. ಹಂಚಿನಾಳ, ಎಂ.ಬಿ. ಸುಂಕದ ಮಾತನಾಡಿದರು. ಷಟಸ್ಥಲ ಧ್ವಜಾರೋಹಣವನ್ನು ಪಾರ್ವತೆಮ್ಮ ಹೊಂಬಳ ನೇರವೇರಿಸಿದರು. ಪ್ರಕಾಶ ಕರಿಸೋಮನಗೌಡರ, ಎಸ್.ಎನ್. ಹಕಾರಿ, ಶೇಖಪ್ಪ ಹೊಂಬಳ, ಕೆ.ವಿ. ಗೋಣಿ, ಶಂಕ್ರಪ್ಪ ಅಂಗಡಿ, ವಿ.ಕೆ. ಕರೆಗೌಡ್ರ, ಕಿರಣ ತಿಪ್ಪಣ್ಣವರ, ಮಹದೇವಪ್ಪ ಹೊಂಬಳ, ಎ.ಎಸ್. ಚವಡಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement