ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಕಾಶವಾಣಿಯಲ್ಲಿ ಸರಣಿ ಕಾರ್ಯಕ್ರಮ

Srinivasa Murthy VN
Updated On : 22 Aug 2013, 10:06 am

ಹಾಸನ: ಹಾಸನದ ಆಕಾಶವಾಣಿ ಕೇಂದ್ರವು ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಯೋಜಕತ್ವದಲ್ಲಿ ಪ್ರತಿ ಭಾನುವಾರ ಬೆಳಗ್ಗೆ 8.40 ರಿಂದ ಶಿಕ್ಷಣವೇ ಪ್ರಗತಿಗೆ ಹಾದಿ ಕಾರ್ಯಕ್ರಮ ಸರಣಿಯನ್ನು  ಆ.25 ರಿಂದ  ಪ್ರಸಾರ ಮಾಡಲಿದೆ.  ಹೊರಾಂಗಣ ಧ್ವನಿ ಮುದ್ರಣ, ತಜ್ಞರೊಂದಿಗೆ ಸಂದರ್ಶನ ಹಾಗೂ ಶಿಕ್ಷಣದ ಮಹತ್ವವನ್ನು ಸಾರುವ ಗೀತೆಗಳನ್ನು ಅಳವಡಿಸಿಕೊಂಡಿರುವ ವೈಶಿಷ್ಟ್ಯಪೂರ್ಣ ಸರಣಿ ಇದಾಗಿದೆ. ಇದರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವ ಶಿಕ್ಷಣ ಅಭಿಯಾನ ಯೋಜನೆಯ ನಾನಾ ಕಾರ್ಯಕ್ರಮಗಳು, ಜಿಲ್ಲೆಯ ಶೈಕ್ಷಣಿಕ ಪ್ರಗತಿ, ಫಲಾನುಭವಿಗಳೊಂದಿಗೆ ಸಂದರ್ಶನ, ಶಾಲಾ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ನೇರ ಸಂವಾದ, ಎಸ್ಸೆಸ್ಸೆಲ್ಸಿ  ಹಾಗೂ ಇತರೆ ತರಗತಿಗಳ ವಿದ್ಯಾರ್ಥ್ಥಿಗಳಿಗೆ ಸಲಹೆ, ಸೂಚನೆ, ಮಾರ್ಗದರ್ಶನ ಇತ್ಯಾದಿ ವಿಷಯಗಳನ್ನು ಬಿತ್ತರಿಸಲಾಗುವುದು. ಆಕಾಶವಾಣಿ ಹಾಸನ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ನಾರಾಯಣ ಎಂ. ಭಟ್ ಹಾಗೂ ಬೇಂದ್ರೆ ಮಂಜುನಾಥ ಪ್ರಸ್ತುತ ಪಡಿಸಲಿದ್ದಾರೆ.

ನಾಳೆ ವಿದ್ಯುತ್ ವ್ಯತ್ಯಯ
ಹಾಸನ:
ವಿದ್ಯುತ್ ಪ್ರಸರಣ ಮಾರ್ಗದ ತುರ್ತು ನಿರ್ವಹಣಾ ಕಾಮಗಾರಿಯನ್ನು ಆ.24 ರಂದು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಮಗ್ಗೆ, ಬಾಳ್ಳುಪೇಟೆ, ಸಕಲೇಶಪುರ, ಹಾನುಬಾಳು ಮತ್ತು ಅರೇಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಅಂದು ಬೆಳಗ್ಗೆ 10ರಿಂದ 4ರವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುತ್ತದೆ. ಸಾರ್ವಜನಿಕರು ಸಹಕರಿಸಬೇಕೆಂದು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ಪ್ರಸರಣ ಮಾರ್ಗಗಳ ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement