ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪುರಭವನ ನೌಕರರೊಂದಿಗೆ ರಕ್ಷಾ ಬಂಧನ

Srinivasa Murthy VN
Updated On : 22 Aug 2013, 10:06 am

ಕ.ಪ್ರ.ವಾರ್ತೆ ಸಕಲೇಶಪುರ ಆ. 22
ತಾಲೂಕು ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ತಾಲೂಕಿನ ನಾನಾ ಗ್ರಾಮಗಳು ಹಾಗೂ ಪಟ್ಟಣದ ಹಲವು ಬಡಾವಣೆಗಳಲ್ಲಿ ರಕ್ಷಾ ಬಂಧನ ಆಚರಿಸಲಾಯಿತು.               
ಪಟ್ಟಣದ ಕೌಡಳ್ಳಿಯ ಬಂಧೀಖಾನೆಯಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ್ ಮಾತನಾಡಿ, ಈಗಿನ ಕಾಲದಲ್ಲಿ ಯುವ ಜನತೆ ಪ್ರೇಮಿಗಳ ದಿನ, ಅಪ್ಪ - ಅಮ್ಮಂದಿರ ದಿನ ಎಂದು ಆಚರಿಸುತ್ತಾರೆ. ಇದೆಲ್ಲಾ ವಿದೇಶಿ ಆಚರಣೆಗಳಾಗಿವೆ. ವಿವೇಕಾನಂದರು ಚಿಕಾಗೋ ಸಮ್ಮೇಳನದಲ್ಲಿ ಹೇಳಿದ ವಿಶ್ವ ಭ್ರಾತೃತ್ವ ಕಲ್ಪನೆ ಇರುವುದು ನಮ್ಮ ದೇಶದಲ್ಲಿ ಮಾತ್ರ. ಯುವ ಜನತೆ ಈ ರಕ್ಷಾ ಬಂಧನ ಆಚರಿಸುವಾಗ ಸಂಭ್ರಮ ಪಡಬೇಕು. ರಕ್ಷಾ ಬಂಧನ ಆಚರಣೆ ಸಹೋದರ ಸಹೋದರಿಯರ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.
ಕುಡುಗರಹಳ್ಳಿ ಬಡಾವಣೆ: ಜೈಲಿನಲ್ಲಿರುವ ನಮ್ಮ ಸಹೋದರರು ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಜೈಲಿಗೆ ಬರುವಂತಾಗಿದ್ದು, ರಕ್ಷಾ ಬಂಧನದ ಈ ಸಂದರ್ಭದಲ್ಲಿ ನಾವೆಲ್ಲ ರಕ್ಷೆ ಧರಿಸಿ ಭಾರತ ಮಾತೆಯ ರಕ್ಷಣೆಗೆ ನಮ್ಮ ಮುಂದಿನ ಜೀವನ ಮೀಸಲಾಗಿರಿಸಿ ಸುಂದರ ಬದುಕನ್ನು ಕಟ್ಟಿಕೊಳ್ಳುವ ಸಂಕಲ್ಪ ಮಾಡಬೇಕೆಂದು ತಿಳಿಸಿದರು.  
ಇದೇ ಸಂದರ್ಭದಲ್ಲಿ ಪಟ್ಟಣದ ಕುಡುಗರಹಳ್ಳಿ ಬಡಾವಣೆಯಲ್ಲಿರುವ ಮಿಲಿಟರಿ ಕ್ಯಾಂಪ್‌ನಲ್ಲಿ ಸಹ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ಸಂಘಟನೆಯ ಪ್ರಮುಖ ರಘು, ಶಿವಪ್ರಸಾದ್, ಕಾರ್ತೀಕ್, ಸಂತೋಷ್, ಕುಶಾಲನಗರ ರಾಜಣ್ಣ ಇತರರು ಇದ್ದರು.
ಮನೆ, ಮನಗಳಲ್ಲಿ: ಅಣ್ಣ,ತಂಗಿಯರ ಬಾಂಧವ್ಯ ಹೆಚ್ಚಿಸುವ ರಕ್ಷಾ ಬಂಧ್ನ ಕಾರ್ಯಕ್ರಮ ಮನೆಮನಗಳಲ್ಲಿ ಆಚರಿಸುವಂತಾಗ ಬೇಕು ಎಂದು ಶ್ರೀರಾಮಸೇನೆ ಅಧ್ಯಕ್ಷ ಉಮೇಶ್ ಹೇಳಿದರು. ಪುರಸಭೆ ಕಚೇರಿಯಲ್ಲಿ ನೌಕರರಿಗೆ ರಕ್ಷಾಬಂಧನ ಕಟ್ಟಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಡಹುಟ್ಟಿದವರು ಮಾತ್ರ ಸಹೋದರ ಸಹೋದರಿ ಎಂಬ ಭಾವನೆ ಬಿಟ್ಟು, ಅಕ್ಕಪಕ್ಕದ ಮನೆಯವರೊಂದಿಗೆ ಸಹೋದರರ ಸಂಬಂಧ ಮುಂದುವರಿಸುವ ಮೂಲಕ ಸ್ವಾಸ್ಥ ಸಮಾಜ ಗುರಿಯ ರಕ್ಷಾಬಂಧನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement