'ವಿದ್ಯಾರ್ಥಿಗೆ ಕ್ರೀಡಾ ಸ್ಫೂರ್ತಿ ಅಗತ್ಯ'
ಕ.ಪ್ರ.ವಾರ್ತೆ ಜಾವಗಲ್ ಆ.22
ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಾಪಂ ಸದಸ್ಯೆ ರಾಜೇಶ್ವರಿ ಶಿವಾನಂದ್ ತಿಳಿಸಿದರು.
ಜಾವಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಡ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಮಾನಸಿಕ ಸ್ಥೈರ್ಯಕ್ಕೆ ಕ್ರೀಡೆ ಸಹಕಾರಿಯಾಗಿದ್ದು ವಿದ್ಯಾರ್ಥಿಗಳ ಆತ್ಮವಿಶ್ವಾಸಕ್ಕೆ ದಾರಿಯಾಗುತ್ತದೆ ಎಂದರು.
ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು. ಕ್ರೀಡಾಪ್ರತಿಜ್ಞಾವಿಧಿಯನ್ನು ದೈಹಿಕ ಶಿಕ್ಷಕ ಹಾಲಪ್ಪ ಬೋಧಿಸಿದರು. ಜಾವಗಲ್ ಹೋಬಳಿ ಶಿಕ್ಷಣ ಸಂಯೋಜಕ ಯೋಗೀಶ್, ತಾಲೂಕು ಶಿಕ್ಷಕ ಸಂಘದ ಪ್ರತಿನಿಧಿ ಗಂಗಾಧರ ಶೆಟ್ಟಿ ಕ್ರೀಡೆಯ ಬಗ್ಗೆ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸಗೌಡ ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಶಿವಣ್ಣ, ತಾಲೂಕು ಶಿಕ್ಷಕ ಸಂಘದ ಪ್ರತಿನಿಧಿ ರೇಖಾ, ತಾಲ್ಲೂಕು ಜನಪದ ಪರಿಷತ್ ಅಧ್ಯಕ್ಷ ಪ್ರಸನ್ನಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಪ್ಪ, ರಮೇಶ್ನಾಯಕ್, ಮಕ್ಕಳ ಮನೆ ಪೋಷಕ ಸಮಿತಿ ಅಧ್ಯಕ್ಷ ಜೆ.ಎಚ್.ಶ್ರೀನಿವಾಸ್, ಎಸ್ಡಿಎಂಸಿ ಸದಸ್ಯ ಪ್ರಕಾಶ್ ಇದ್ದರು. ಈ ಕ್ರೀಡೆಗೆ ಪಾರಿತೋಷಕವನ್ನು ಕೋಳಗುಂದ ಮುಖ್ಯಶಿಕ್ಷಕ ಎನ್.ಜಿ ಚಂದ್ರಶೇಖರ್ ನೀಡಿದರು.