ನಮೋ ಬ್ರಿಗೇಡ್ ಕಾರ್ಯಕರ್ತರ ಬೈಕ್ ರ್ಯಾಲಿ
ಹಾಸನ: ದೇಶದ ಆದರ್ಶ ವ್ಯಕ್ತಿಗಳಲ್ಲಿ ಒಬ್ಬರಾದ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಆದರ್ಶ ಭಾರತದ ನಿರ್ಮಾಣಕ್ಕಾಗಿ ಅವರನ್ನು ಬೆಂಬಲಿಸಿ ನಮೋ ಬ್ರಿಗೇಡ್ ಸಂಘಟನೆ ರಾಷ್ಟ್ರಾದ್ಯಂತ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ನಮೋ ಬ್ರೀಗೆಡ್ ಅಭಿಮಾನಿಗಳು ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ಮೋದಿಗೆ ಬೆಂಬಲ ನೀಡಬೇಕೆಂದು ಪ್ರಚಾರ ನಡೆಸಿದರು. ನಗರದ ಹೇಮಾವತಿ ಪ್ರತಿಮೆಯಿಂದ ಬೈಕ್ ರ್ಯಾಲಿ ಪ್ರಾರಂಭಿಸಿದರು. ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ನಮೋ ಬ್ರಿಗೇಡ್ ಉದ್ಘಾಟನೆಗೊಳ್ಳಲಿದೆ. ನಮೋ ಬ್ರಿಗೇಡ್ ಪ್ರಮುಖ ರರ್ಷಿತ್, ಚಂದನ್, ಶಿವಕುಮಾರ್, ಶರತ್ ಇತರರು ಇದ್ದರು.
ನಾಳೆ ವಿದ್ಯುತ್ ವ್ಯತ್ಯಯ
ಹಾಸನ: ವಿದ್ಯುತ್ ನಿಗಮದಿಂದ ಆ.24 ರಂದು ಹಮ್ಮಿಕೊಳ್ಳಲಾಗಿದ್ದ 66ಕೆವಿ ಹಾಸನ-ಸಕಲೇಶಪುರ ವಿದ್ಯುತ್
ಪ್ರಸರಣ ಮಾರ್ಗದ ನಿರ್ವಹಣಾ ಕಾಮಗಾರಿಯನ್ನು ಕಾರಣಾಂತರಗಳಿಂದ ಆ.26ಕ್ಕೆ ಮುಂದೂಡಲಾಗಿದೆ.
ಅಂದು ಮಗ್ಗೆ, ಬಾಳ್ಳುಪೇಟೆ, ಸಕಲೇಶಪುರ, ಹಾನುಬಾಳು ಮತ್ತು ಅರೇಹಳ್ಳಿ ಸುತ್ತಮುತ್ತಲ ಗ್ರಾಮಗಳಿಗೆ ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕವಿಪ್ರನಿನಿ ಪ್ರಸರಣ ಮಾರ್ಗಗಳ ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.