ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

Srinivasa Murthy VN
Updated On : 25 Aug 2013, 12:13 pm

ಅರಕಲಗೂಡು: ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಿಕ್ಷಕರ ಭವನದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ವಿವಿದೆಢೆಗಳಿಂದ ಆಗಮಿಸಿದ್ದ ಸುಮಂಗಲಿಯರು ಪೂಜಾ ಕೈಂಕರ್ಯದಲ್ಲಿ ಬಹು ಉತ್ಸಾಹದಿಂದ ಪಾಲ್ಗೊಂಡಿದ್ದರು.ಪ್ರತ್ಯೇಕ ಕಳಸಗಳಲ್ಲಿ ದೇವಿಯನ್ನು ಆವಾಹನೆ ಗೈದ ಮಹಿಳೆಯರು ಶ್ರದ್ದಾ ಭಕ್ತಿಗಳಿಂದ ಪೂಜೆಗೈದರು.ಈ ವೇಳೆ ನಡೆದ ಧಾರ್ಮಿಕ ಸಭೆಯನ್ನು ಪೊಟ್ಯಾಟೋ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಚ್.ಯೋಗಾರವುಶ್ ಉದ್ಘಾಟಿಸಿದರು.ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವೀಣಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾಸನದ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯ ಉಪಾಧೀಕ್ಷಕ ಡಾ.ಮುರಳೀಧರ,ಸಂಯೋಜಕ ಅಜಿತ್ ಹೆಗಡೆ,ನಿರ್ದೇಶಕ ಮಹಾಬಲ ಕುಲಾಲ್,ಅರ್ಚಕ ನಾಗರಾಜ ಭಟ್,ಚನ್ನಕೇಶವೇಗೌಡ ಇತರರು ಉಪಸ್ಥಿತರಿದ್ದರು.

ಕೃಷಿ ಪ್ರಶಸ್ತಿ ನೋಂದಣಿಗೆ ಅರ್ಜಿ ಆಹ್ವಾನ
ಹಾಸನ: ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಸಲುವಾಗಿ ಪ್ರತಿ ವರ್ಷದಂತೆ 2013ರ ಮುಂಗಾರು ಹಂಗಾಮಿನಲ್ಲಿ ಕೃಷಿ ಪ್ರಶಸ್ತಿ ನೋಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಹಾಸನ ತಾಲೂಕು ಮಟ್ಟಕ್ಕೆ ರಾಗಿ (ಮಳೆ ಆಶ್ರಿತ), ಜಿಲ್ಲಾ ಮಟ್ಟಕ್ಕೆ ರಾಗಿ (ಮಳೆ ಆಶ್ರಿತ) ಹಾಗೂ ರಾಜ್ಯ ಮಟ್ಟಕ್ಕೆ ರಾಗಿ (ಮಳೆ ಆಶ್ರಿತ), ಬತ್ತ (ನೀರಾವರಿ), ಮುಸುಕಿನಜೋಳ (ನೀರಾವರಿ) ಹಾಗೂ ಕಬ್ಬು (ನೀರಾವರಿ) ಬೆಳೆಗಳನ್ನು ನಿಗದಿಪಡಿಸಿದ್ದು, ನಿಗದಿತ ಶುಲ್ಕ ಅರ್ಜಿ ಹಾಗೂ ಭೂ ದಾಖಲಾತಿಗಳೊಂದಿಗೆ ನೋಂದಣಿ ಮಾಡಿಸಲು ಆ.31 ಕಡೇ ದಿನ.
 ಸ್ಪರ್ಧೆಯ ನೋಂದಣಿ ಶುಲ್ಕವಾಗಿ ತಾಲೂಕು ಮಟ್ಟದಲ್ಲಿ  ಸಾಮಾನ್ಯ ರೈತರು  100 ರು, ಪರಿಶಿಷ್ಟ ರೈತರು 25 ರು, ಜಿಲ್ಲಾ ಮಟ್ಟದಲ್ಲಿ ಸಾಮಾನ್ಯ ರೈತರು 150 ರು, ಪರಿಶಿಷ್ಟ ರೈತರು 40 ರು, ರಾಜ್ಯಮಟ್ಟದಲ್ಲಿ  ಸಾಮಾನ್ಯ ರೈತರು 300 ರು, ಪರಿಶಿಷ್ಟ ರೈತರು 75 ರು. ಪಾವತಿಸಬೇಕು. ತಾಲೂಕಿನ ರೈತಬಾಂಧವರು ಆ.31 ರೊಳಗೆ ನೋಂದಣಿ ಮಾಡಿಸಿ ಕೃಷಿ ಪ್ರಶಸ್ತಿಯ ಪ್ರಯೋಜನ ಪಡೆಯಲು ಕೋರಲಾಗಿದೆ. ಮಾಹಿತಿಗಾಗಿ ಹೋಬಳಿಯ ರೈತ ಸಂಪರ್ಕ ಕೇಂದ್ರಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಾಸನ ಇಲ್ಲಿ ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕಿ ಎ.ಎಸ್. ಕೋಕಿಲ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement