ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

5 ವರ್ಷಕ್ಕೆ ಕಿಸಾನ್ ಕ್ರೆಡಿಟ್ ಕಾರ್ಡ್ ಅವಧಿ ವಿಸ್ತರಣೆ

Srinivasa Murthy VN
Updated On : 27 Aug 2013, 10:15 am

ಕ.ಪ್ರ.ವಾರ್ತೆ ಹಾಸನ ಆ.27
ಕಿಸಾನ್ ಕ್ರೆಡಿಟ್ ಕಾರ್ಡ್‌ನ್ನು  ಒಂದು ವರ್ಷಕ್ಕೆ ಮಾತ್ರ ನೀಡಲಾಗುತ್ತಿತ್ತು. ಈಗ ಅದನ್ನು 5 ವರ್ಷದ ಅವಧಿಗೆ ವಿಸ್ತರಿಸಲಾಗಿದ್ದು, ಪ್ರತಿ ವರ್ಷ ನವೀಕರಿಸುವ ಅಗತ್ಯವಿಲ್ಲ ಎಂದು ಎಸ್‌ಬಿಐ ಮಹಾ ಪ್ರಬಂಧಕ ಕೃಷ್ಣ ಮೋಹನ್ ತ್ರಿವೇದಿ ತಿಳಿಸಿದ್ದಾರೆ.
ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವತಿಯಿಂದ ಏರ್ಪಡಿಸಿದ್ದ ಬೆಳೆ ಸಾಲ ನವೀಕರಣ ಮತ್ತು ರೈತ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಿಸಾನ್ ಕ್ರೆಡಿಟ್ ಕಾರ್ಡ್  ನಿರಂತರ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳುವುದರ ಮೂಲಕ ಬ್ಯಾಂಕಿನಿಂದ ದೊರೆಯುವ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಮುಂದಿನ ದಿನಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು  ರುಪೇ ಡೆಬಿಟ್ ಕಾರ್ಡ್‌ಗಳನ್ನಾಗಿ ಮಾರ್ಪಡಿಸಲಾಗುವುದರಿಂದ ಕೆ.ಸಿ.ಸಿ. ಹೊಂದಿರುವ ರೈತರು ದೇಶದ ಯಾವುದೇ ಭಾಗದಲ್ಲಾದರೂ ಹಣಕಾಸು ವ್ಯವಹಾರ ನಡೆಸಬಹುದಾಗಿದೆ. ರಾಜ್ಯದ ನೂರು ಗ್ರಾಮಗಳಲ್ಲಿ ಸಾಲ ಮುಕ್ತ ಗ್ರಾಮ ಅಭಿಯಾನ ಕಾರ್ಯಕ್ರಮವನ್ನು ಆಗಸ್ಟ್ 31 ರವರೆಗೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಉಪ ಮಹಾ ಪ್ರಬಂಧಕ ಕೆ.ದತ್ತಾ, ಶ್ರೀಕಾಂತಕಟ್ಟಿ, ಪ್ರಾದೇಶಿಕ ವ್ಯವಸ್ಥಾಪಕ ರಮೇಶ್‌ರಾವ್, ಮುಖ್ಯ ವ್ಯವಸ್ಥಾಪಕ ಶಂಕರರಾವ್ ಇದ್ದರು.

ಅಂಗನವಾಡಿ ಕಾರ್ಯಕರ್ತೆಹುದ್ದೆಗೆ ಅರ್ಜಿ ಆಹ್ವಾನ
ಸಕಲೇಶಪುರ:
ತಾಲೂಕಿನ ಗ್ರಾಮ ವಾರ್ಡ್‌ಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಸಲುವಾಗಿ ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತಾಲೂಕಿನ ಉಚ್ಚಂಗಿ, ಮೇಲುವಳ್ಳಿ, ಕಬ್ಬಿನಗದ್ದೆ, ಕೊಲ್ಲಹಳ್ಳಿ, ರಾಮೇನಹಳ್ಳಿ, ಸಿದ್ದಾಪುರ, ದೇಖ್ಲಾ, ಹಾಡ್ಲಹಳ್ಳಿ, ಹಾಡ್ಯ, ಮಾಸುವಳ್ಳಿ., ಗಣೇಶನಗರದಲ್ಲಿರುವ ಅಂಗನವಾಡಿಗೆ ಅರ್ಜಿ ಸಲ್ಲಿಸಬಹುದು.  ಆಸಕ್ತರು ಸೆ. 16 ರಂದು  ಸಂಜೆ 5.30ರೊಳಗೆ ನಿಗದಿತ ಅರ್ಜಿ ಹಾಗೂ ಇತರೆ ದಾಖಲಾತಿಗಳೊಂದಿಗೆ ಮೊಹರು ಮಾಡಿದ ಲಕೋಟೆಯನ್ನು ಸಕಲೇಶಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಇಟ್ಟಿರುವ ಮೊಹರು ಮಾಡಿದ ಪೆಟ್ಟಿಗೆಗೆ ಹಾಕಲು ಸೂಚಿಸಿದೆ. ಅರ್ಜಿಗಳನ್ನು ಸ್ವೀಕರಿಸಲು ನಿಗದಿ ಪಡಿಸಿದ ಕೊನೆಯ ದಿನದ ಮರು ದಿನವೇ ಜಿಲ್ಲಾಧಿಕಾರಿ ಸಮಕ್ಷಮ ತೆಗೆದು ಪರಿಶೀಲಿಸಿ ನಿಯಮಾನುಸಾರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಗಾಗಿ ಯಾವುದೇ ರೀತಿಯ ಸಂದರ್ಶನ ಏರ್ಪಡಿಸಲಾಗುವುದಿಲ್ಲ. ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಯನ್ನು ಸಂಪರ್ಕಿಸಲು ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement