ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗ್ರಾಮಸ್ಥರ ಪ್ರತಿಭಟನೆ

Srinivasa Murthy VN
Updated On : 27 Aug 2013, 10:19 am

ಆಲೂರು: ಆಲೂರು ಮುಖ್ಯ ರಸ್ತೆಯ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮುಂಭಾಗ ಬೈಕ್‌ವೊಂದು ವೇಗವಾಗಿ ಬಂದು ಪಾದಚಾರಿಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸವಾರ ಹಾಗೂ ಪಾದಚಾರಿ ತೀವ್ರವಾಗಿ ಗಾಯಗೊಂಡ ಪರಿಣಾಮ ರೊಚ್ಚಿಗೆದ್ದ ಜನತೆ ತಕ್ಷಣ ರಸ್ತೆ ತಡೆ ನಡೆಸಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.
 ಮಂಗಳವಾರ ಸಂಜೆ  ಅಪಘಾತ ನಡೆದ ಸಂದರ್ಭದಲ್ಲಿ ಜಮಾಯಿಸಿದ ಸಾರ್ವಜನಿಕರು ದಿಢೀರ್ ರಸ್ತೆ ತಡೆ ನಡೆಸಿದರು. ನಂತರ ಮಾತನಾಡಿದ ಪ್ರತಿಭಟನಾಕಾರರು ಈ ರಸ್ತೆ ಹಾಳಾಗಿ ಹಲವು ವರ್ಷಗಳೇ ಕಳೆದಿದ್ದು, ಯಾಮೊಬ್ಬರು ಇತ್ತ ಗಮನ ಹರಿಸದ ಕಾರಣ ಈ ಸ್ಥಳದಲ್ಲಿ ಅಪಘಾತಗಳು ನಿರಂತರವಾಗಿ ನಡೆಯುತ್ತಲೇ ಇವೆ.
 ತಗ್ಗಿನಿಂದ ಈ ಸ್ಥಳವು ಕೂಡಿರುವ ಪರಿಣಾಮ ವಾಹನ ಸವಾರರು ವೇಗದಿಂದ ಸಂಚರಿಸುವುದರಿಂದಾಗಿ ಈ ರೀತಿಯ ಅವಘಾತಗಳು ಸಂಭವಿಸುತ್ತಿವೆ. ದ್ವಿಚಕ್ರ ವಾಹನ ಸಂಚಾರಿಗಳು ಪೊಲೀಸರ ಭಯವಿಲ್ಲದೆ ಬೇಜವಾಬ್ದಾರಿಯಿಂದ ಒಂದೇ ಬೈಕ್‌ನಲ್ಲಿ ಮೂರರಿಂದ 6 ಜನ ಹಾಕಿಕೊಂಡು ಹೋದರೂ ಪೊಲೀಸರು ಯಾರನ್ನು ಪ್ರಶ್ನಿಸುತ್ತಿಲ್ಲ. ಪೊಲೀಸರ ಭಯವಿಲ್ಲದೆ ಇರುವದೇ ಇಂತಹ ಅಪಘಾತಕ್ಕೆ ಕಾರಣ ಎಂದು ದೂರಿದರು.

'ರಕ್ಷಾಬಂಧನ ಹಬ್ಬಕ್ಕೆ ಹೆಚ್ಚಿನ ಪಾವಿತ್ರತೆ ಉಂಟು'
ಅರಸೀಕೆರೆ:
ಸಮಾಜದಲ್ಲಿ ಸಹೋದರತೆ ಸಂಬಂಧ ನಶಿಸುತ್ತಿರುವ ಕಾರಣ ಪ್ರತಿನಿತ್ಯ ಎಲ್ಲೆಡೆಗಳಲ್ಲಿ ಅನ್ಯಾಯ ಮತ್ತು ಆತ್ಯಾಚಾರದ ಪ್ರಕರಣಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ ಎಂದು ತಾಲೂಕು ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿ ಪ್ರಕಾಶ್ ತಗ್ಗಿನಮನಿ ವಿಷಾದಿಸಿದರು.
 ಪಟ್ಟಣದ ಹಾಸನ ರಸ್ತೆಯಲ್ಲಿನ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,  ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾಬಂಧನ ಹಬ್ಬಕ್ಕೆ ಅತ್ಯಂತ ಹೆಚ್ಚಿನ ಪಾವಿತ್ರತೆಯನ್ನು ನೀಡಲಾಗಿದೆ ಎಂದರು.
 ಸಮಾಜದ ನಡುವೆ ಗಂಡು ಹೆಣ್ಣು ಎಂಬ ಭೇದಭಾವಗಳಿಲ್ಲದೆ, ಪ್ರತಿಯೊಬ್ಬರು ಸೋದರ, ಸೋದರಿಯ ಸಂಬಂಧವನ್ನು ಸಮಾಜದಲ್ಲಿ ಬಲಪಡಿಸುವ ಈ ಹಬ್ಬವನ್ನು ಅರ್ಥಪೂರ್ಣವಾಗಿ ನಾಡಿನ ಎಲ್ಲೆಡೆಗಳಲ್ಲಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
 ಸಮಾಜದಲ್ಲಿ ಸಹೋದರತೆಯ ಸಂಬಂಧಗಳು ಕಾಣೆಯಾಗಿ ಎಲ್ಲೆಡೆಗಳಲ್ಲಿ ಅಶಾಂತಿಯ ವಾತಾವರಣ ಮತ್ತು ಆತ್ಯಾಚಾರ ಪ್ರಕರಣಗಳು ಹೆಚ್ಚು ಹೆಚ್ಚು ಕಂಡು ಬರುತ್ತಿವೆ ಆದ್ದರಿಂದ ಇಂತಹ ಪಾವಿತ್ರತೆಯ ಹಬ್ಬ, ಹರಿದಿನಗಳನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿ ಪರಂಪರೆಯನ್ನು ಬೆಳೆಸುವ ಕಾರ್ಯಕ್ಕೆ ಕಂಕಣಬದ್ದರಾಗಬೇಕೆಂದು ಹೇಳಿದರು.
 ಶಾಲಾ ಮುಖ್ಯೋಪಾಧ್ಯಾಯ ಅಡವಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಗೋವಿಂದರಾಜು ನಾಯ್ಡು, ಉಪಾಧ್ಯಕ್ಷ ಖಲೀಲ್, ಖಜಾಂಚಿ ಬಸವರಾಜು ಇತರರು ಇದ್ದರು.

ವಾಲ್ಮೀಕಿ ಪಪಂ  ನಿಗಮದಿಂದ ಅರ್ಜಿ
ಹಾಸನ:
ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ಪರಿಶಿಷ್ಟ ವರ್ಗ ಜನಾಂಗದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಪ್ರಸಕ್ತ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ಆಯವ್ಯಯಕ್ಕೆ ಅನುಗುಣವಾಗಿ ಯೋಜನೆಗಳ ಅನುಷ್ಠಾನಕ್ಕಾಗಿ ಅರ್ಜಿಗಳನ್ನು ಕರೆಯಲಾಗಿದೆ. 18 ವರ್ಷ ಮೇಲ್ಪಟ್ಟ 60 ವರ್ಷದೊಳಗಿನ ಪರಿಶಿಷ್ಟ ವರ್ಗಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
 ಸ್ವಯಂ ಉದ್ಯೋಗ ಯೋಜನೆ, ಉದ್ಯಮ ಶೀಲತಾ ಯೋಜನೆ, ಭೂ ಒಡೆತನ ಯೋಜನೆ, ಗಂಗಾಕಲ್ಯಾಣ, ಸಾಮೂಹಿಕ ನೀರಾವರಿ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ.
  ನಿಗಮದ ನಾನಾ ಯೋಜನೆಗಳಡಿ ನಿಗದಿತ ನಮೂನೆಯ ಅರ್ಜಿಗಳನ್ನು ಜಿಲ್ಲಾ ಕಚೇರಿ ಹಾಸನ ಇವರಿಂದ ಉಚಿತ ಪಡೆದು ಪೋಟೋ, ಜಾತಿ ಆದಾಯ ದೃಢೀಕರಣ ಪತ್ರ, ಸಾಲ ಉದ್ದೇಶದ ಯೋಜನಾ ವರದಿ ಇತರೆ ದಾಖಲಾತಿಗಳೊಂದಿಗೆ ಸೆ. 16 ರವರೆಗೆ  ಸ್ವೀಕರಿಸಲಾಗುವುದು.
 ಈಗಾಗಲೇ ಹಿಂದಿನ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗದಿರುವ ಅರ್ಜಿದಾರರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಹಿಂದಿನ ಅರ್ಜಿ ಪರಿಗಣಿಸಲಾಗುವುದು. ಹಾಗೂ ಈ ಯೋಜನೆಗಳಡಿ ಈ ಹಿಂದೆ ಅರ್ಜಿ ಸಲ್ಲಿಸಿ ಯೋಜನೆಯ ಸೌಲಭ್ಯ ಪಡೆದವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
 ಈ ಯೋಜನೆಗಳಿಗೆ ಪ್ರತ್ಯೇಕವಾಗಿ ಆಯಾ ವಿಧಾನಸಭಾ ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಗಳಿದ್ದು, ಆಯ್ಕೆಯಾದ ಅರ್ಜಿದಾರರಿಂದ ಅವಶ್ಯಕ ದಾಖಲಾತಿ ನಂತರ ಪಡೆಯಲಾಗುವುದು.
 ಹೆಚ್ಚಿನ ವಿವರಗಳಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ನಂ. 1409, ಹವಿಲ ಬಿಲ್ಟಿಂಗ್, 2ನೇ ಮಹಡಿ, 1ನೇ ಅಡ್ಡ ರಸ್ತೆ, ರಕ್ಷಾಣಾಪುರಂ ಹಾಸನ  (ದೂರವಾಣಿ 08172-235336) ಸಂಪರ್ಕಿಸಿ.

ರಘು ಆಚಾರ್ ಗೆಲವು: ಅಭಿನಂದನೆ
ಮೈಸೂರು:
ಚಿತ್ರದುರ್ಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯ ಗಳಿಸಿದ ರಘು ಆಚಾರ್ ಅವರನ್ನು ಕರ್ನಾಟಕ ರಾಜ್ಯ ವಿಶ್ವಕರ್ಮ ಪದವೀದರರ ವೇದಿಕೆ ಅಭಿನಂದಿಸಿದೆ.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement