ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿಹಿಂಪ ಪ್ರತಿಭಟನೆ

Srinivasa Murthy VN
Updated On : 27 Aug 2013, 10:17 am

ಕನ್ನಡಪ್ರಭ ವಾರ್ತೆ ಅರಸೀಕೆರೆ ಆ. 27
ಹಿಂದೂ ಸಂತರ ಪರಿಕ್ರಮ ಯಾತ್ರೆಯನ್ನು ತಡೆಯುವ ಉತ್ತರಪ್ರದೇಶ ಸರ್ಕಾರದ ಕ್ರಮ ಹಾಗೂ ಕೇಂದ್ರ ಯುಪಿಎ ಸರ್ಕಾರಗಳ ನಿರ್ಧಾರ ಪ್ರಜಾಪ್ರಭುತ್ವದ ಹತ್ಯೆ ಹಾಗೂ ಹಿಂದೂ ಸಮಾಜದ ದಮನ ನೀತಿಯನ್ನು ಖಂಡಿಸಿ ತಾಲೂಕು ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
 ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಹಾಗೂ ಅಖಿಲೇಶ್ ಯಾದವ್ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು ಮಂದಿರವನ್ನೇ ಕಟ್ಟುವೆವು. ರಾಮನಿಗೆ ಜಯವಾಗಲಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ನಿಶ್ಚಿತ. ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ. ಕೂಡಲೇ ಯಾತ್ರೆಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ವಿಹೆಚ್‌ಪಿ ಮುಖಂಡ ಟಿ.ವಿ.ಅರುಣಕುಮಾರ್ ಮಾತನಾಡಿ, ಅಖಿಲೇಶ್ ಸರ್ಕಾರ ಅಲ್ಪ ಸಂಖ್ಯಾತರ ಮತಗಳಿಸಲು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು. ಮುಖಂಡ ಕಟ್ಟೇಹಳ್ಳಿ ನವೀನ್ ಮಾತನಾಡಿ, ಹಿಂದೂಗಳು ಕೈಗೊಂಡಿರುವ ಈ ಪವಿತ್ರ ಪರಿಕ್ರಮ ಯಾತ್ರೆಗೆ ಅಡಚಣೆ ಉಂಟುಮಾಡುವ ಮೂಲಕ ಅಲ್ಪಸಂಖ್ಯಾತರನ್ನು ಓಲೈಸಲು ಸರ್ಕಾರಗಳು ಮುಂದಾಗುತ್ತಿವೆ ಎಂದು ದೂರಿದರು.
 ನಾಗರಾಜ್, ಪ್ರಭಾಕರ್, ಪುರುಷೋತ್ತಮ್, ಸೋಮಶೇಖರ್, ಮಣಿ, ಶಿವು, ಮನು, ಸೋಮು, ಮಹೇಶ್, ಬಾಲಾಜಿ, ತಾಲೂಕು ಬಿಜೆಪಿ ಅಧ್ಯಕ್ಷ ರಮೇಶ್, ಮನೋಜ್‌ಕುಮಾರ್, ಶಿವನಂಜೇಗೌಡ ಈಶ್ವರಸಿಂಗ್ ಇದ್ದರು.

ನಗರದಲ್ಲಿ ಕರವೇ ವಿದ್ಯಾರ್ಥಿ ಘಟಕ ಉದ್ಘಾಟನೆ
ಹಾಸನ:
ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವುದು ಬಹಳ ಕಷ್ಟದ ಕೆಲಸ. ಆದರೆ ವಿದ್ಯಾರ್ಥಿಗಳು ಒಂದೆಡೆ ಸೇರಿದರೆಂದರೇ ದೇಶದಲ್ಲಿ ಬದಲಾವಣೆ ಉಂಟಾಗೋದು ಖಚಿತ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.
  ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವಿದ್ಯಾರ್ಥಿ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವ್ಯಾಸಂಗದ ಜೊತೆಗೆ ನಾಡು ನುಡಿಯನ್ನು ಉಳಿಸಿ ಬೆಳೆಸುವಂತೆ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ವ್ಯಾಸಂಗದಲ್ಲಿ ತೊಡಗಿಕೊಳ್ಳದೆ ಸುಭದ್ರ ಜೀವನ ಕಟ್ಟಿಕೊಳ್ಳಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳ ಚಿನ್ನದ ಜೀವನ ಕಳೆದು ಹೋಗುತ್ತದೆ ಎಂದು ಹೇಳಿದರು.
  ಇವತ್ತು ವಿದ್ಯಾರ್ಥಿಗಳನ್ನು ಹೋರಾಟಕ್ಕೆ ಬಲವಂತವಾಗಿ ಕರೆ ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ವಿದ್ಯಾರ್ಥಿಗಳೆ ಸ್ವಯಂ ಪ್ರೇರಿತವಾಗಿ ದೇಶವನ್ನು ಕಟ್ಟುವಂತಹ ಕಾರ್ಯ ನಡೆಸಬೇಕು ಎಂದ ಅವರು, ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಕನ್ನಡ ಭಾಷೆಯಲ್ಲಿ ನೇಮಕಾತಿ ಪರೀಕ್ಷೆ ಬರೆಯುವಂತೆ ರಕ್ಷಣಾ ವೇದಿಕೆ ಹೋರಾಟ ಮಾಡಿದ ಫಲವಾಗಿ ಇಂದು 3 ಸಾವಿರಕ್ಕೂ ಹೆಚ್ಚು ಡಿ. ದರ್ಜೆ ನೌಕರರಾಗಿ ನೇಮಕ ಗೊಂಡಿದ್ದಾರೆ. ಇದರ ಶ್ಲಾಘನೆ ರಕ್ಷಣಾ ವೇದಿಕೆಗೆ ಸಲ್ಲಬೇಕು ಎಂದರು.ರಾಜ್ಯ ಉಪಾಧ್ಯಕ್ಷ ರವೀಂದ್ರ, ರಾಜ್ಯ ಸಂಚಾಲಕ ನಾಗೇಂದ್ರ ಬಾಬು, ಜಿಲ್ಲಾಧ್ಯಕ್ಷ ಮನುಕುಮಾರ್, ಉಪಾಧ್ಯಕ್ಷ ಲೋಕೇಶ್, ರಾಜ್ಯ ಸಂಚಾಲಕ ಆಶಾ ಶಂಕರೇಗೌಡ, ಗಾಯತ್ರಿ, ವೆಂಕಟೇಶ್, ಯಶ್ವಂತ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement