ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವ್ಯವಸಾಯ ದೃಢೀಕರಣ ಪತ್ರ ನೀಡದ ತಾಲೂಕು ಆಡಳಿತದ ವಿರುದ್ಧ ಧರಣಿ

Srinivasa Murthy VN
Updated On : 27 Aug 2013, 10:16 am

ಕ.ಪ್ರ.ವಾರ್ತೆ ಅರಸೀಕೆರೆ ಆ.27
ರೈತರೊಬ್ಬರ ಪುತ್ರಿಗೆ ವ್ಯವಸಾಯ ದೃಢೀಕರಣ ಪತ್ರ ನೀಡದಿರುವ ತಾಲೂಕು ಆಡಳಿತದ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ತಾಲೂಕು ಕಚೇರಿ ಎದುರು ಧರಣಿ ನಡೆಸಿದರು.
ತಾಲೂಕಿನ ಗುತ್ತಿನಕೆರೆ ಗ್ರಾಮದ ಜೆ.ಪಿ.ಲತಾ ಎಂಬುವವರು ಜಮೀನು ಖರೀದಿಸಲು ವ್ಯವಸಾಯ ದೃಢೀಕರಣ ಪತ್ರಕ್ಕಾಗಿ ಅರ್ಜಿ ಹಾಕಿದ್ದರು. ಆದರೆ ಈಕೆ ಮದುವೆಯಾಗಿ ಗಂಡನ ಮನೆಗೆ ಹೋಗಿರುವುದರಿಂದ ಅವರಿಗೆ ಜಮೀನಿಲ್ಲದ ಕಾರಣ ವ್ಯವಸಾಯ ದೃಢೀಕರಣ ಪತ್ರ ನೀಡಲು ಸಾಧ್ಯವಿಲ್ಲವೆಂದು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ನ್ಯಾಯಾಲಯವೆ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡಿರುವಾಗ ತಂದೆಯ ಹೆಸರಿನಲ್ಲಿರುವ ಜಮೀನಿನ ಪಹಣಿ ಹಾಗೂ ವಂಶವೃಕ್ಷ ಮೂಲಕ ಆತನ ಮಗಳಿಗೆ ವ್ಯವಸಾಯ ದೃಢೀಕರಣ ಪತ್ರ ನೀಡಬೇಕೆಂದು ಒತ್ತಾಯಿಸಿದರು.
ಗಂಡನ ಮನೆಯಲ್ಲಿ ಜಮೀನು ಇಲ್ಲ ಎಂದ ಮಾತ್ರಕ್ಕೆ ಆಕೆ ಜಮೀನನ್ನು ಕೊಳ್ಳಬಾರದು ಎಂಬುದು ಯಾವ ನ್ಯಾಯ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ದೃಢೀಕರಣ ಪತ್ರ ನೀಡಬೇಕೆಂದು ಆಗ್ರಹಿಸಿದರು.

ನಾಟಕಗಳ ಬಗ್ಗೆ  ವಿಚಾರ ಸಂಕಿರಣ
ಹಾಸನ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಸನ ಮತ್ತು ಚಾಮುಂಡೇಶ್ವರಿ ಜಾನಪದ ಮತ್ತು ರಂಗಭೂಮಿ ಕಲಾ ಸಂಘದ ಆಶ್ರಯದಲ್ಲಿ 2012-13ನೇ ಸಾಲಿನ ವಿಶೇಷ ಘಟಕ ಯೋಜನೆಯ ಸಂಘ ಸಂಸ್ಥೆ ಅನುದಾನದಡಿ ಆಲೂರು ತಾಲೂಕು ಮಗ್ಗೆ ಗ್ರಾಮದ ಡಾ. ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ನಾಟಕ ವಿಚಾರ ಸಂಕಿರಣವನ್ನು  ಆ.30 ರಂದು ಮಧ್ಯಾಹ್ನ  2-30ಕ್ಕೆ ಹಮ್ಮಿಕೊಳ್ಳಲಾಗಿದೆ. ಆಲೂರು ಸಕಲೇಶಪುರ ಕ್ಷೇತ್ರ ಶಾಸಕ ಎಚ್.ಕೆ.ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಮಗ್ಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪರಮಶಿವಪ್ಪ(ಗಿರೀಶ್) ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಗ್ಗೆ ಜಿಪಂ ಸದಸ್ಯ  ಪುರುಷೋತ್ತಮ್, ಆಲೂರು ತಾಪಂ ಅಧ್ಯಕ್ಷೆ ಯಶೋಧಹರೀಶ್, ಮಗ್ಗೆ ಗ್ರಾಪಂ ಉಪಾಧ್ಯಕ್ಷೆ ಶಮಿಮ್ ಉನ್ನಿಸಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮೂರ್ತಪ್ಪ, ಡಾ.ಅಂಬೇಡ್ಕರ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಹೆರಗು ಎಚ್.ಎಸ್.ಧರ್ಮಪ್ಪ, ಕಾಫಿ ಬೆಳೆಗಾರರು ಕೆ.ಎಂ.ನಂಜುಂಡಪ್ಪ, ಕೆ.ಬಿ.ಮಂಜುನಾಥ್. ಗ್ರಾಮ ಪಂಚಾಯ್ತಿ ಸದಸ್ಯ ನವಾಬ್‌ಜಾನ್, ವಿಕ್ಟೋರಿಯ ರಾಣಿ, ಜಯಮ್ಮಮಲ್ಲಯ್ಯ ಎಂ.ಶಿವಣ್ಣ, ಗೋವಿಂದೇಗೌಡ,ಶ್ರೀಧರ್, ಬಿ.ಬಿ.ನಿಂಗಯ್ಯ, ಎ.ಸಿ.ರಾಜು ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement