ಶಿಕ್ಷಕನ ಮೇಲೆ ಸುಳ್ಳು ಆರೋಪ ಖಂಡಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ಆ. 27
ತಾಲೂಕಿನ ಕಂಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಭಾಸ್ಕರ್ ಮೇಲೆ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ ಎಂದು ಗ್ರಾಮಸ್ಥರು ಹಾಗೂ ಶಾಲೆ ವಿದ್ಯಾರ್ಥಿಗಳು ಖಂಡಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾ ಎಸ್ಪಿ ಎಸ್ಪಿ ರವಿ ಡಿ.ಚನ್ನಣ್ಣನವರ್ಗೆ ಮನವಿ ನೀಡಿದರು.
ಶಿಕ್ಷಕ ಭಾಸ್ಕರ್ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಲಾಗಿದೆ. ಈ ಶಾಲೆಯ ಮತ್ತೊಬ್ಬ ಶಿಕ್ಷಕ ವಿನೋದ್ ಎಂಬುವರು ಮುಖ್ಯ ಶಿಕ್ಷಕನ ಹುದ್ದೆಯನ್ನು ಅಲಂಕರಿಸುವ ಉದ್ದೇಶದಿಂದ ವಿದ್ಯಾರ್ಥಿನಿಯಿಂದ ಸುಳ್ಳು ಆರೋಪ ಮಾಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ಶಿಕ್ಷಕನ ಹುದ್ದೆಗೆ ಭಾಸ್ಕರ್ ಪೈಪೋಟಿಯಲ್ಲಿ ಇದ್ದುದರಿಂದ ತಮ್ಮ ದಾರಿಗೆ ಅಡ್ಡವಾಗುತ್ತಾರೆ ಎಂಬ ಉದ್ದೇಶದಿಂದ ವಿದ್ಯಾರ್ಥಿನಿಯಿಂದ ತನಗೆ ಲೈಂಗಿಕ ಕಿರುಕುಳು ನೀಡುತ್ತಿದ್ದಾರೆ ಎಂದು ಸುಳ್ಳು ಹೇಳುವಂತೆ ಹೇಳಿಕೊಟ್ಟಿದ್ದಾರೆ.
ಸುಮಾರು 10 ವರ್ಷಗಳಿಂದ ಈ ಶಾಲೆಯಲ್ಲಿ ಭಾಸ್ಕರ್ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಷ್ಟು ವರ್ಷಗಳು ಅವರ ಮೇಲೆ ಯಾವೊಂದು ರೀತಿಯ ಕಪ್ಪು ಚುಕ್ಕಿ ಇರಲಿಲ.್ಲ ಇದು ಪೂರ್ವ ನಿಯೋಜಿತ ಕೃತ್ಯ ಎಂದು ಗ್ರಾಮಸ್ಥರು ದೂರಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಬಂಧಿತ ಶಿಕ್ಷಕ ಭಾಸ್ಕರ್ನನ್ನು ಬಂಧಮುಕ್ತಗೊಳಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣ, ಗ್ರಾಮದ ದೇವರಾಜ್, ಕಾಂತರಾಜೇಗೌಡ, ಚಂದ್ರೇಗೌಡ, ಸುರೇಶ್, ನಾಗರಾಜು, ಮಂಜೇಗೌಡ, ಸಣ್ಣೇಗೌಡ ಇತರರು ಇದ್ದರು.