ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೆಡಿಪಿ ಸಭೆ ಅಂದ್ರೆ...ಅಧಿಕಾರಿಗಳ ಮಾಹಿತಿ ಕೇಳೋದಷ್ಟೇ ಅಲ್ಲ...

Srinivasa Murthy VN
Updated On : 29 Aug 2013, 12:03 pm

ಕ.ಪ್ರ.ವಾರ್ತೆ ಅರಸೀಕೆರೆ ಆ. 28
ಕೆಡಿಪಿ ಸಭೆ  (ಪ್ರಗತಿ ಪರಿಶೀಲನೆ ಸಭೆ) ಅಂದ್ರೇ ಅಧಿಕಾರಿಗಳು ನೀಡುವ ಮಾಹಿತಿ ಕೇಳಿಕೊಂಡು ಹೋಗುವದಷ್ಟೇ ಜನಪ್ರತಿನಿಧಿಗಳ ಕೆಲಸವಲ್ಲ. ನಿಮ್ಮ ಇಲಾಖೆಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಹಣ ಅದಕ್ಕೆ ನೀವು ಯಾವ ಯಾವ ಕಂಪನಿಯಿಂದ ಯಾವ ಯಾವ ಔಷಧಿ ಖರೀದಿಸಿದ್ದೀರಿ ಅದನ್ನು ಯಾವ ಯಾವ ಕೇಂದ್ರಗಳಿಗೆ ಎಷ್ಟೆಷ್ಟು ವಿತರಣೆ ಮಾಡಿದ್ದೀರಿ ಎಂಬ ಸ್ಪಷ್ಟ ಮಾಹಿತಿ  ನೀಡಬೇಕು.
ಇದು ಶಾಸಕ ಕೆ.ಎಂ. ಶಿವಲಿಂಗೇಗೌಡರು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಅವರನ್ನು ತರಾಟೆಗೆ ತೆಗೆದುಕೊಂಡ ಬಗೆ. ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ 2013-14ನೇ ಸಾಲಿನ ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕರು, ಅನೇಕ ಗ್ರಾಮಾಂತರ ಕೇಂದ್ರಗಳಲ್ಲಿ ರೈತರು ಜಾನುವಾರುಗಳನ್ನು ತೋರಿಸಲು ಹೋದಾಗ ಅಲ್ಲಿ ಚೀಟಿ ಬರೆದು ಕೊಡುತ್ತಿದ್ದು ಸರ್ಕಾರದ ಔಷಧಿಗಳನ್ನೇ ಮೆಡಿಕಲ್ ಸ್ಟೋರ್‌ಗಳಲ್ಲಿ ಖರೀದಿಸಿವಂತಹ ಹಲವಾರು ಉದಾಹರಣೆಗಳಿದ್ದು, ಈ ಬಗ್ಗೆ ಸ್ಟಷ್ಟ ಮಾಹಿತಿ ನೀಡಬೇಕೆಂದು ತಿಳಿಸಿದರು.
ಎಪಿಎಂಸಿ ಕಾರ್ಯದರ್ಶಿ ಸಭೆಗೆ ಮಾಹಿತಿ ನೀಡಿ ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ ಸೆಸ್ ಮೂಲಕ 69 ಲಕ್ಷ ರು. ತೆರಿಗೆ ಸಂಗ್ರಹವಾಗಿದ್ದು ನ್ಯಾಫೆಡ್ ಖರೀದಿ ಕೇಂದ್ರದ ಮೂಲಕ 2473 ರೈತರಿಂದ 23324 ಕ್ವಿಂಟಲ್ ಕೊಬ್ಬರಿ ಖರೀದಿಸಲಾಗಿದೆ ಎಂದು ಹೇಳಿದರು.
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಹರಿಜನರ, ಬಡವರ ಏಳಿಗೆ ಬಗ್ಗೆ ಭಾಷಣ ಮಾಡುವ ನಾವು ಸೌಲಭ್ಯ ಕಲ್ಪಿಸಲು ವಿಫಲರಾಗಿದ್ದೇವೆ ಎಂದರೆ ನಾಚಿಕೆಗೇಡಿನ ಸಂಗತಿ. ಕೂಡಲೇ ವಿದ್ಯುತ್ ಸಂಪರ್ಕ ಒದಗಿಸಲು ಕಾರ್ಯಯೋಜನೆ ರೂಪಿಸುವಂತೆ ತಾಕೀತು  ಮಾಡಿದರು. ಪಶುಸಂಗೋಪನೆ, ಕೃಷಿ ಉತ್ಪನ್ನ ಮಾರುಕಟ್ಟೆಯ ತೆರಿಗೆ ಕುರಿತಂತೆ ಸೂಕ್ತ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ಸದಸ್ಯರಾದ ಈಶ್ವರಳ್ಳಿ  ಲಕ್ಷ್ಮಣ್, ಹುಚ್ಚೇಗೌಡ, ಪಾರ್ವತಮ್ಮ ಶಿವಮೂರ್ತಿ, ರತ್ನಮ್ಮ ಗೋಪಾಲಸ್ವಾಮಿ, ಜ್ಯೋತಿಗಂಗಾಧರ್, ಕೃಷ್ಣನಾಯಕ್, ಇಓ ಮಂಜುನಾಥ್ ನಾನಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement