ದೇವಾಲಯ ಹುಂಡಿಗೆ ಬೀಗಮುದ್ರೆ
ಹಾಸನ: ಸಮೀಪದ ಪುರದಮ್ಮ ದೇವಾಲಯದಲ್ಲಿ ಖಾಸಗಿ ವ್ಯಕ್ತಿಗಳು ಹಣ ಸಂಗ್ರಹಿಸುವುದಕ್ಕೆ ಇದೀಗ ಕಡಿವಾಣ ಹಾಕಲಾಗಿದೆ. ಗ್ರಾಮದ ಕೆಲವರು ದೇವಸ್ಥಾನದಲ್ಲಿ ಹುಂಡಿ ಇಟ್ಟು ಈ ರೀತಿ ಹಣ ಸಂಗ್ರಹಿಸುತ್ತಿದ್ದರು. ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿರುವ ಹಿನ್ನೆಲೆಯಲ್ಲಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಉಪ ತಹಸೀಲ್ದಾರ್ ಈ ಹುಂಡಿಗಳಿಗೆ ಬೀಗ ಮುದ್ರೆ ಹಾಕಿದರು. ಇನ್ನು ಮುಂದೆ ಭಕ್ತಾಧಿಗಳು ಹೀಗೆ ಹಣ ನೀಡಬಾರದು ಎಂದು ಅವರು ಸೂಚಿಸಿದ್ದಾರೆ.
ಹೇಮಾವತಿಗೆ 3,932 ಕ್ಯುಸೆಕ್ ಒಳ ಹರಿವು
ಹಾಸನ: ಹೇಮಾವತಿ ಜಲಾಶಯಕ್ಕೆ ಬುಧವಾರ 3,932 ಕ್ಯುಸೆಕ್ ನೀರು ಹರಿದು ಬಂದಿದೆ. ಜಲಾಶಯ ಗರಿಷ್ಠ ಮಟ್ಟ 2922 ಅಡಿ ಇದ್ದು, ಪ್ರಸ್ತುತ ನೀರಿನ ಮಟ್ಟ 2921.76 ಅಡಿ ಇದೆ. ಜಲಾಶಯದಿಂದ ನದಿಗೆ 125 ಕ್ಯುಸೆಕ್, ನಾಲೆಗೆ 4250 ಕ್ಯುಸೆಕ್ ಬಿಡಲಾಗುತ್ತಿದೆ. ಜಲಾಶಯದಲ್ಲಿ 36.871 ಟಿ.ಎಂ.ಸಿ.ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ಇಂದಿನ ನೀರಿನ ಮಟ್ಟ 3164.726 ಅಡಿ, ಒಳ ಹರಿವು 125 ಕ್ಯುಸೆಕ್, ಹೊರ ಹರಿವು ನದಿಗೆ ಕ್ಯುಸೆಕ್, ನಾಲೆಗೆ175 ಕ್ಯುಸೆಕ್, ಒಟ್ಟು ನೀರಿನ ಸಂಗ್ರಹ ಮಟ್ಟ 3.600 ಟಿಎಂಸಿ.
ವಾಟೆ ಹೊಳೆ: ಇಂದಿನ 3165.58 ಅಡಿ, ಒಳ ಹರಿವು 20 ಕ್ಯುಸೆಕ್, ಹೊರ ಹರಿವು 105 ಕ್ಯುಸೆಕ್, ಒಟ್ಟು 1.298 ಟಿಎಂಸಿ ನೀರು ಸಂಗ್ರಹವಾಗಿದೆ.
ಹೋಬಳಿವಾರು ಮಳೆ ವಿವರ: ಅರಸೀಕೆರೆ ತಾಲೂಕಿನ ಗಂಡಸಿ 0.8, ಜಾವಗಲ್ 2.6,ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ 4.2,ಶ್ರವಣಬೆಳಗೊಳ 11.1, ಸಕಲೇಶಪುರ ತಾಲೂಕಿನ ಯಸಳೂರು 2, ಮಾರನಹಳ್ಳಿ 10.1, ಹೊಸೂರು 5.6, ಹಾನುಬಾಳು 0.8, ಹೆತ್ತೂರು 5.2 ಮಿ.ಮೀ. ಮಳೆಯಾಗಿದೆ.
ಪತ್ರಕರ್ತೆ ಮೇಲೆ ಅತ್ಯಾಚಾರ ಖಂಡಿಸಿ ಮನವಿ
ಚನ್ನರಾಯಪಟ್ಟಣ: ಮುಂಬೈ ಪತ್ರಕರ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ತಾಲೂಕು ಪತ್ರಕರ್ತರು ತಹಸಿಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ತಹಸಿಲ್ದಾರ್ ನಟರಾಜ್ ಮಾತನಾಡಿ ನಾಲ್ಕನೇ ಪ್ರಮುಖ ಅಂಗವಾಗಿರುವ ಪತ್ರಿಕಾರಂಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಂಬೈ ಛಾಯಾಗ್ರಾಹಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡನೀಯ. ಇಂತಹ ಕೃತ್ಯ ಎಸಗಿದವರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಹೆಣ್ಣು ಮಕ್ಕಳ ಮೇಲೆ ನಡೆಸುವ ದೌರ್ಜನ್ಯಕ್ಕೆ ತಕ್ಕ ಶಾಸ್ತಿ ಆಗಲೇಬೇಕಾಗಿದೆ ಎಂದರು. ಪತ್ರಕರ್ತ ಚಂದ್ರಶೇಖರ್, ಟಿ.ಜಿ.ಹೇಮಕುಮಾರ್, ಲೋಹಿತ್, ನಂದನ್, ಪುಟ್ಟಣ್ಣ, ಶಂಕರ್, ಗಿರೀಶ್, ಮಧುಸೂದನ್, ಪತ್ರಿಕಾ ಪ್ರಚಾರಕರಾದ ಪ್ರದೀಪ್, ಹರೀಶ್, ಸಿದ್ದರಾಜು, ಸಚಿನ್ ಇದ್ದರು.