ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನರೇಂದ್ರ ದಾಬೋಲಕರ ಹತ್ಯೆಗೆ ಸಮಿತಿ ಖಂಡನೆ

Srinivasa Murthy VN
Updated On : 29 Aug 2013, 12:04 pm

ಕ.ಪ್ರ. ವಾರ್ತೆ ಹಾಸನ ಆ. 28
ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ಪ್ರಜಾಪ್ರಭುತ್ವ ವಿರೋಧಿಗಳು, ಕೋಮುವಾದಿಗಳು, ಮಾನವ ವಿರೋಧಿ ಸಂಘಟನೆಗಳ ಹಾಗೂ ಪ್ರಭಾವಶಾಲಿ ವ್ಯಕ್ತಿಗಳ ಕುಮ್ಮುಕ್ಕಿನಿಂದ ನಡೆದ ವಿಚಾರವಾದಿ, ಪ್ರಜಾಪ್ರಭುತ್ವವಾದಿ ಹಾಗೂ ಮಾನವತಾವಾದಿ ನರೇಂದ್ರ ದಾಬೋಲಕರ ಅಮಾನವೀಯ ಹತ್ಯೆಯನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
  ನರೇಂದ್ರ ದಾಬೋಲಕರು ವೈಜ್ಞಾನಿಕ ಮನೋಧರ್ಮವನ್ನು ಬಿತ್ತುವ ಕೆಲಸದಲ್ಲಿ ತಮ್ಮನ್ನು ಕಳೆದ 40 ವರ್ಷಗಳಿಂದಲೂ ತೊಡಗಿಸಿಕೊಂಡು ಮಹಾರಾಷ್ಟ್ರ ಅಂಧ ಶ್ರದ್ಧಾ ನಿರ್ಮೂಲನಾ ಸಮಿತಿ ಸ್ಥಾಪಿಸಿ ಅದರ ಮೂಲಕ ಮೂಢನಂಬಿಕೆ, ಪವಾಡಗಳ ರಹಸ್ಯ ಬಯಲು, ಜಾತೀಯತೆ, ಕಂದಾಚಾರ ಹಾಗೂ ಅಂಧಶ್ರದ್ಧೆಗಳ ವಿರುದ್ಧ ಜನ ಜಾಗೃತಿ ಮೂಡಿಸುತ್ತಿದ್ದರು ಎಂದು ಜಿಲ್ಲಾ ಕಾರ್ಯದರ್ಶಿ ಅಹಮ್ಮದ್ ತಿಳಿಸಿದ್ದಾರೆ.
 ದೇವರ ಹೆಸರಿನಲ್ಲಿ ಜನಸಾಮಾನ್ಯರನ್ನು ಸುಲಿಯುತ್ತಿದ್ದ ಪುರೋಹಿತಶಾಹಿಗಳ ವಿರುದ್ಧ ಹಾಗೂ ಪವಾಡಗಳ ಹೆಸರಿನಲ್ಲಿ ಜನಸಾಮಾನ್ಯರನ್ನು ಅಂಧಕೂಪದಲ್ಲಿ ತಳ್ಳುತ್ತಿದ್ದ ಡೋಂಗಿ ಬಾಬಾಗಳ ವಿರುದ್ಧ ವೈಚಾರಿಕ ಸಮರವನ್ನೇ ಸಾರಿದ್ದ ದಾಬೋಲಕರ 1990ರಲ್ಲಿ ಮೂಢನಂಬಿಕೆ ವಿರೋಧಿ ಮಸೂದೆ ಜಾರಿಗೊಳಸಲು ತೀವ್ರ ಹೋರಾಟ ನಡೆಸಿದ್ದರು.
  ಇವರ ಹೋರಾಟದ ಪರಿಣಾಮ 2003ರಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈ ಮಸೂದೆ ಜಾರಿ ಕುರಿತು ಚರ್ಚಿಸಲಾಗಿತ್ತು ಆದರೆ ಬಿಜೆಪಿ ಹಾಗೂ ಶೀವಸೇನೆಯ ಕೋಮುವಾದಿ ಪ್ರಭಾವಳಿಯ ವಿರೋಧದಿಂದ ಜಾರಿಗೆ ಬರಲಾಗಲಿಲ್ಲ ಎಂದು ಇದಕ್ಕಾಗಿ ಇಂದು ದೇಶ ಒಬ್ಬ ವಿಚಾರವಂತ, ಪ್ರಜಾಪ್ರಭುತ್ವವಾದಿ, ಮಾನವತಾದಿಯನ್ನು ಕಳೆದುಕೊಂಡಂತಾಗಿದೆ ಹಾಗೂ ದೇಶದ ವೈಚಾರಿಕ ಹಾಗೂ ವೈಜ್ಞಾನಿಕ ಪ್ರಸಾರದ ಚಳವಳಿಗೆ ಅಪಾರ ನಷ್ಟವುಂಟಾಗಿದೆ ಎಂದು ತಿಳಿಸಿದ್ದಾರೆ.
 ದಾಬೋಲಕರರ ಹತ್ಯೆ ಆರೋಹಿಗಳನ್ನು ಉಗ್ರವಾಗಿ ಶಿಕ್ಷಿಸ ಬೇಕು ಹಾಗೂ ಹತ್ಯೆಯಲ್ಲಿ ಭಾಗಿಯಾಗಿರುವ ಪ್ರಜಾಪ್ರಭುತ್ವ ವಿರೋಧಿ ಸಂಘಟನೆಗಳನ್ನು ಪತೆ ಹಚ್ಚಿ ಅವುಗಳನ್ನು ನಿಷೇಧಿಸಬೇಕು ಮತ್ತು ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement