ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಾಟಕ ನಿರ್ದೇಶಕ ಸಣ್ಣೇಗೌಡ ನಿಧನ

Srinivasa Murthy VN
Updated On : 29 Aug 2013, 12:05 pm

ಹಾಸನ: ಅನಿಕೇತನ ನಾಟಕ ತಂಡದ ನಿರ್ದೇ ಶಕ ಹಾಗೂ ಕೆಜಿಐಡಿ ಇಲಾಖೆ ನೌಕರ ಕೆ. ಸಣ್ಣೇಗೌಡ (57) ಅವರು  ಬುಧ ವಾರ ಬೆಂಗ ಳೂರಿನ ಸೇಂಟ್‌ಜಾನ್ ಆಸ್ಪತ್ರೆಯಲ್ಲಿ ನಿಧನರಾದರು.
  ಅವರಿಗೆ 10 ವರ್ಷಗಳ ಹಿಂದೆ 2 ಮೂತ್ರಪಿಂಡಗಳ ವೈಫಲ್ಯ ಆಗಿತ್ತು. ಅವರ ಹಿರಿಯ ಸಹೋದರಿ ಒಂದು ಮೂತ್ರಪಿಂಡ ದಾನ ಮಾಡಿದ್ದರು.  ಅನೇಕ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲಿದ್ದರೂ, ನಾಟಕದ ಗೀಳು ಅವರನ್ನು ಇಲ್ಲಿಯ ತನಕ ಎಳೆದು ತಂದಿತ್ತು. ಒಂದು ತಿಂಗಳ ಹಿಂದೆ ಮತ್ತೆ ಮೂತ್ರಪಿಂಡ ವಿಫಲವಾದುದ್ದಲ್ಲದೇ ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
  ಹಾಸನದಲ್ಲಿ ರಂಗಭೂಮಿ ಚಟುವಟಿಕೆ ಕ್ರಿಯಾಶೀಲವಾಗಿರುವಲ್ಲಿ ಸಣ್ಣೇಗೌಡರ ಪಾತ್ರ ಬಹಳ ಹಿರಿದು. ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕೃಷ್ಣೇಗೌಡರ ಆನೆ ಮತ್ತಿತರ ನಾಟಕಗಳನ್ನು  ನಿರ್ದೇಶಿಸಿದ್ದರಲ್ಲದೆ, ಅವರು ನಿರ್ದೇಶನ ಮಾಡಿದ ನಾಟಕಗಳು ರಾಜ್ಯಮಟ್ಟದಲ್ಲೂ ಪ್ರಶಸ್ತಿ ಪಡೆದಿವೆ.
  ಹುಟ್ಟೂರು ದೊಡ್ಡಬೀಕನಹಳ್ಳಿಯಲ್ಲಿ ಬುಧವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಜಿಲ್ಲೆಯ ಕಲಾವಿದರು ಸಂತಾಪ ಸೂಚಿಸಿದ್ದಾರೆ.

ನಾನಾ ಯೋಜನೆಸೌಲಭ್ಯಕ್ಕೆ ಅರ್ಜಿ
ಹಾಸನ: ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ ಪರಿಶಿಷ್ಟ ಜಾತಿ ಜನಾಂಗದವರ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ನಿಗದಿಪಡಿಸಿದ ಆಯವ್ಯಯಕ್ಕೆ ಅನುಗುಣವಾಗಿ ನಾನಾ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಪ್ರಸಕ್ತ  ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟು 60 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ.
 ಸ್ವಯಂ ಉದ್ಯೋಗ ಯೋಜನೆ, ಉದ್ಯಮಶೀಲತಾ ಯೋಜನೆ, ಭೂ ಒಡೆತನ ಯೋಜನೆ, ಗಂಗಾಕಲ್ಯಾಣ ಯೋಜನೆ, ಸಾಮೂಹಿಕ ನೀರಾವರಿ, ಏತ ನೀರಾವರಿ ಯೋಜನೆ, ನೇರಸಾಲ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಇತ್ತೀಚಿನ ಪೋಟೋ, ಜಾತಿ, ಆದಾಯ ಪತ್ರ, ರೇಷನ್‌ಕಾರ್ಡ್ ಗುರುತಿನ ಚೀಟಿ, ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.
 ಕೊಳವೆಬಾವಿ ಸೌಲಭ್ಯಕ್ಕೆ ಪಹಣಿ, ತಹಸೀಲ್ದಾರ್‌ರಿಂದ ಪಡೆದ ಸಣ್ಣ ಹಿಡುವಳಿದಾರರ ಪತ್ರ, ಮ್ಯುಟೇಷನ್, ವಂಶವೃಕ್ಷ ಸಲ್ಲಿಸಬೇಕು. ಭೂ ಒಡೆತನ ಯೋಜನೆಯಡಿ ಜಮೀನು ಸೌಲಭ್ಯ ಪಡೆಯಲು ಇಚ್ಚಿಸುವ ಕುಟುಂಬದ ಮಹಿಳಾ ಫಲಾಪೇಕ್ಷಿಗಳು ಭೂ ರಹಿತ ಕೃಷಿ ಕಾರ್ಮಿಕರಾಗಿರಬೇಕು.
 ಈ ಯೋಜನೆಗಳಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾದ ಅರ್ಜಿದಾರರಿಗೆ ಮಾತ್ರ ಸಾಲ ಸೌಲಭ್ಯ ಒದಗಿಸಲಾಗುವುದು. ಈ ಹಿಂದೆ ಯಾವುದೇ ಸಾಲಸೌಲಭ್ಯ ಪಡೆದವರು ಹಾಗೂ ಸಾಲಮನ್ನಾ ಆದಂತಹ ಫಲಾನುಭವಿಗಳ ಕುಟುಂಬದ ಸದಸ್ಯರು ಮತ್ತೆ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಕಳೆದ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೇ ಇರುವುವರು ಅರ್ಜಿ ಸಲ್ಲಿಸುವ ಅಗತ್ಯ ವಿರುವುದಿಲ್ಲ. ಹಿಂದಿನ ಅರ್ಜಿಯನ್ನೇ ಈ ಸಾಲಿಗೂ ಪರಿಗಣಿಸಲಾಗುವುದು.
 ಈ ಸಾಲಿನಲ್ಲಿ ಸಾಲಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಅರ್ಜಿದಾರರು ಖುದ್ದು ಹಾಜರಾಗಿ ತಮ್ಮ ವೈಯುಕ್ತಿಕ ದಾಖಲೆಗಳಾದ ಪಡಿತರ ಚೀಟಿ, ಗುರುತಿನ ಚೀಟಿಗಳನ್ನು ತೋರಿಸಿ ಅರ್ಜಿಯ ವಹಿಯಲ್ಲಿ ಸಹಿ ಮಾಡಿ ನಿಗಮದ ಆಯಾ ತಾಲೂಕು ಅಭಿವೃದ್ಧಿ ಅಧಿಕಾರಿಗಳಿಂದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಉಚಿತವಾಗಿ ಅರ್ಜಿ ಪಡೆಯಬೇಕು.
 ಬೇರೆಯವರಿಂದ ಮಧ್ಯವರ್ತಿಗಳಿಂದ ಪಡೆದ ಅರ್ಜಿ ತಿರಸ್ಕರಿಸಲಾಗುವುದು. ಅರ್ಜಿದಾರರ ಪರವಾಗಿ ಬೇರೆ ವ್ಯಕ್ತಿಗಳು ಬಂದಲ್ಲಿ ಅವರಿಗೆ ಅರ್ಜಿ ನೀಡಲಾಗುವುದಿಲ್ಲ. ಅರ್ಜಿ ನಮೂನೆಯಲ್ಲಿ ನಮೂದಿಸಿರುವಂತೆ ಸಂಪೂರ್ಣ ವಿವರಗಳನ್ನು ಭರ್ತಿ ಮಾಡುವುದು. ಅಪೂರ್ಣ  ಹಾಗೂ ಸಹಿಯಿಲ್ಲದಿರುವ ಅರ್ಜಿ ತಿರಸ್ಕರಿಸಲಾಗುವುದು.
 ಅರ್ಜಿದಾರರು ಮೇಲ್ಕಂಡ ಯೋಜನೆಗಳಲ್ಲಿ ಯಾವುದಾದರೂ ಒಂದು ಉದ್ದೇಶಕ್ಕೆ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸುವುದು. ಅರ್ಜಿಯನ್ನು  ಸೆ. 16ರೊಳಗಾಗಿ   ಜಿಲ್ಲಾ ವ್ಯವಸ್ಥಾಪಕರು, ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ, 1461, ಶೋಭಾ ನಿಲಯ, ಮಹಾರಾಜ ಪಾರ್ಕ್ ರಸ್ತೆ, ಉತ್ತರಬಡಾವಣೆ, ಹಾಸನ-573201 ಈ ವಿಳಾಸಕ್ಕೆ ಅಥವಾ ಸಂಬಂಧಪಟ್ಟ ತಾಲೂಕು ಅಭಿವೃದ್ಧಿ ಅಧಿಕಾರಿಗಳಿಗೆ ತಲುಪಿಸುವುದು.
 ನಿಗದಿಪಡಿಸಿದ ಕೊನೆಯ ದಿನದ ನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ, ತಾಲೂಕು ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಲು ನಿಗಮದ ಜಿಲ್ಲಾ ವ್ಯವಸ್ಥಾಪಕರು ಕೋರಿದ್ದಾರೆ.

'ಲಸಿಕೆ ಹಾಕುವಾಗ ಜಾಗರೂಕತೆ ಅಗತ್ಯ'
ಹಾಸನ: ವೈದ್ಯರು ಮಕ್ಕಳಿಗೆ ಲಸಿಕೆ ಹಾಕುವ ಸಮಯದಲ್ಲಿ ಜಾಗರೂಕತೆ ವಹಿಸುವುದು ಅಗತ್ಯ ಎಂದು ಜಿಲ್ಲಾ ತಾಯಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ. ಎಚ್.ಎಲ್. ಜನಾರ್ದನ್ ತಿಳಿಸಿದರು.
  ನಗರದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಲಸಿಕೆ ಕುರಿತ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಮುಖ್ಯ ಅತಿಥಿ ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ. ನಾಗರಾಜ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಟಿ.ಬಿ. ತ್ರಿಪಾಠಿ ಮಾತನಾಡಿದರು. ಶೈಕ್ಷಣಿಕ ಡೀನ್ ಡಾ. ಮಲ್ಲಿಕಾ ಕೆಜೆ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ. ಮುರಲೀಧರ್ ಪಿ. ಪೂಜಾರ್ ಹಾಗೂ ಡಾ. ಶೈಲಜಾರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement