ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಣ್ಣಿನ ಗಣಪತಿ ತಯಾರಿಕೆ: ಹಾರನಹಳ್ಳಿ ಮಹದೇವ್ ಸಿದ್ಧಹಸ್ತ

Srinivasa Murthy VN
Updated On : 29 Aug 2013, 12:04 pm

ಹಾರನಹಳ್ಳಿ (ಅರಸೀಕೆರೆ ತಾ.): ಗಣೇಶ ಹಬ್ಬ ಬಂತೆಂದರೆ ಮಣ್ಣಿನ ಗಣಪತಿ ಮೂರ್ತಿ ಭಾರಿ ಡಿಮ್ಯಾಂಡ್. ಇಂಥ ಗಣಪತಿ ತಯಾರಿಕೆಗೆ ಇಲ್ಲಿನ ಹಾರನಹಳ್ಳಿ ಗಣಪತಿ ಮಹದೇವ್ ಹೆಸರುವಾಸಿ.
5 ದಶಕಗಳಿಂದಲೂ ಕಲಾವಿದ ಮಹಾದೇವ್ ಅವರ ತಂದೆ ಬಸವಣ್ಣನವರು ಅರಸೀಕೆರೆ ಗಣಪತಿ ಹಾಗೂ ನಾಡಿನ ವಿವಿಧ ಭಾಗಗಳಿಗೂ ಇವರೇ ಗಣಪತಿ ನಿರ್ಮಿಸಿಕೊಡುತ್ತಿದ್ದರು. ಬಸಪ್ಪನವರ ನಿಧನದ ನಂತರ ಅವರ ಮಗ ಮಹದೇವ್ ಮಣ್ಣಿನ ಗಣಪತಿ ತಯಾರಿಸಲು ಮುಂದಾಗಿ ಇದೀಗ ಅದರಲ್ಲಿ ಸಿದ್ಧಹಸ್ತರು. ತಂದೆಯ ಮಾರ್ಗದರ್ಶನದಲ್ಲಿ  ಈ ಕಲೆಯನ್ನು ಚೆನ್ನಾಗಿ ರೂಢಿಸಿಕೊಂಡಿದ್ದಾರೆ.
ಈ ವರ್ಷ ಮಯೂರ ಗಣಪತಿ, ಹಂಸ ಗಣಪತಿ, ನಂದಿ ಗಣಪತಿ, ದರ್ಬಾರ್ ಗಣಪತಿ ಹಾಗೂ ವಿವಿಧ ಭಂಗಿಯ ಮಣ್ಣಿನ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಇವರು ತಯಾರಿಸಿದ ಗಣಪತಿಗಳು ಶಿವಮೊಗ್ಗ, ಅರಸೀಕೆರೆ, ಪಾಂಡುಪುರ, ಜಾವಗಲ್, ತರೀಕೆರೆ, ಹಾರನಹಳ್ಳಿ, ಹಾಸನ ಹೀಗೆ ನಾನಾ ಪ್ರಮುಖ ಊರುಗಳಲ್ಲಿ ಮಾರಾಟವಾಗುತ್ತದೆ.
ಗಣಪತಿ ಮಹದೇವ್ ಹೇಳುವಂತೆ, ಗಣಪತಿ ತಯಾರಿಸಲು ಶುದ್ಧವಾದ ಜೇಡಿಮಣ್ಣು, ನಾರು, ತಂತಿ ಹೀಗೆ ಹಲವು ಸಾಮಾಗ್ರಿಗಳನ್ನು 5 ತಿಂಗಳ ಮೊದಲೇ ಸಿದ್ಧ ಮಾಡಿ ತಯಾರಿಕೆ ಪ್ರಾರಂಭಿಸುತ್ತೇವೆ.  ಮುಖ್ಯವಾಗಿ ಗಣಪತಿ ತಯಾರಿಕೆಗೆ ಶಾಸ್ತ್ರೋಕ್ತವಾಗಿ ಗಣಪತಿ ನಿರ್ಮಿಸಿಕೊಂಡು ಬರುತ್ತಿದ್ದೇವೆ. ಇಂದು ಬಣ್ಣ ಇತರೆ ವೆಚ್ಚಗಳು ಬಹಳ ದುಬಾರಿಯಾಗಿವೆ. ಇತ್ತೀಚಿಗೆ ನಾನಾ ಭಂಗಿಯ ಗಣಪತಿಯ ಚಿತ್ರ ತಂದು ಈ ರೀತಿ ನಿರ್ಮಿಸಿಕೊಡಿ ಎಂದು ವ್ಯಾಪಾರಸ್ಥರು ಕೇಳಿದರೆ ಆ ಮಾದರಿಯಲ್ಲೇ ಗಣಪತಿ ವಿಗ್ರಹವನ್ನು ನಿರ್ಮಿಸಿ ಕೊಡುತ್ತಾರೆ.
ಗಣಪತಿಯ ತಯಾರಿಕೆಯಲ್ಲಿ ಮನೆಯ ಎಲ್ಲರು ಸೇರಿ ಈ ಬಣ್ಣ ಹಚ್ಚುವ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಈ ಕಲಾವಿದನನ್ನು ಅರಸೀಕೆರೆ ತಾಲೂಕಿನ ಅನೇಕ ಸಂಘ ಸಂಸ್ಥೆಗಳು ಇವರ ಕಲಾ ಪ್ರತಿಭೆಯನ್ನು ಕಂಡು ಸನ್ಮಾನಿಸಿವೆ. ಇಂತಹ ಕಲಾವಿದನಿಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಲಿ ಎಂಬುದು ಅರಸೀಕೆರೆ ಜನತೆ ಹಾರೈಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement