ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಒಡೆಯರ್ ಅಗಲಿಕೆ ಜನರಿಗೆ ನೋವು ತಂದಿದೆ: ದೇವೇಗೌಡ

Srinivasa Murthy VN
Updated On : 11 Dec 2013, 9:46 am

ಕನ್ನಡಪ್ರಭ ವಾರ್ತೆ, ಹಾಸನ, ಡಿ. 11
ಯದುವಂಶದ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರರ್ನಿಧನದಿಂದ ಹಳೇಮೈಸೂರು ಭಾಗದ ಎಲ್ಲಾ ಪ್ರಜೆಗಳಿಗೂ ಅತ್ಯಂತ ನೋವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಮೈಸೂರು ಪ್ರಾಂತ್ಯಕ್ಕೆ ಮೈಸೂರು ರಾಜವಂಶಸ್ಥರ ಕೊಡುಗೆ ಅಪಾರ, ಅವರ ಜನೋಪಯೋಗಿ ಕಾರ್ಯಕ್ರಮಗಳು ಜನಮಾನಸದಲ್ಲಿ ಹಚ್ಚ ಹಸಿರಾಗಿವೆ. ಬೇರೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಆಳರಸರ ಕೊಡುಗೆ ನಮ್ಮ ರಾಜ್ಯಕ್ಕೆ ಅಪಾರವಾದುದು. ಅರಸನಾಗಿಯೂ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಅವರು ನಡೆದುಕೊಂಡ ರೀತಿ, ಬಾಳಿದ ವಿಧಾನ ಅಭಿನಂದನೀಯ ಎಂದಿದ್ದಾರೆ.
ಲೋಕಸಭೆಯಲ್ಲಿ ನನ್ನೊಂದಿಗೆ ಒಡೆಯರ್ ಕೆಲಸ ಮಾಡಿದ್ದಾರೆ. ಅವರೊಬ್ಬ ಸಂಭಾವಿತ ವ್ಯಕ್ತಿ, ನಿಗರ್ವಿ, ರಾಜನೆಂಬ ಅಹಂ ಇರಲಿಲ್ಲ ಎಂದು ಗುಣಗಾನ ಮಾಡಿದ ಅವರು, ಕ್ರೀಡೆಯಲ್ಲೂ ಅಪಾರ ಆಸಕ್ತಿ ಹೊಂದಿದ್ದ ಒಡೆಯರ್ 60ನೇ ವಯಸ್ಸಿಗೇ ವಿಧಿವಶರಾಗಿರುವುದು ತುಂಬಲಾರದ ನಷ್ಟ ಉಂಟು ಮಾಡಿದೆ. ಅವರ ಆತ್ಮಕ್ಕೆ
ತಾಯಿ ಚಾಮುಂಡೇಶ್ವರಿ ಶಾಂತಿಕೊಡಲಿ, ತುಂಬು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಗೌಡರು ಪ್ರಾರ್ಥಿಸಿದರು.

ಸಾರಿಗೆ ನಿಗಮ ಘಟಕ ಇಂದು ಉದ್ಘಾಟನೆ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಹಾಸನ ವಿಭಾಗದ 2ನೇ ಘಟಕದ ಉದ್ಘಾಟನಾ ಸಮಾರಂಭವು ಡಿ. 12ರಂದು ಬೆಳಗ್ಗೆ 10ಕ್ಕೆ ನಗರದ ರೇಲ್ವೆ ನಿಲ್ದಾಣದ ಸಮೀಪ ನಡೆಯಲಿದೆ.
ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯ  ಹೆಚ್.ಡಿ. ದೇವೇಗೌಡ ಗೌರವಾನ್ವಿತ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಸಾರಿಗೆ ಸಚಿವ  ರಾಮಲಿಂಗಾರೆಡ್‌ಡಿ  ನೆರವೇರಿಸುವರು. ಶಾಸಕ ಹೆಚ್.ಎಸ್.ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ. ಅಂಬಿಕಾ ರಾಮಣ್ಣ, ವಿಧಾನಸಭಾ ಸದಸ್ಯರಾದ  ಹೆಚ್.ಡಿ. ರೇವಣ್ಣ, ಹೆಚ್.ಕೆ. ಕುಮಾರಸ್ವಾಮಿ, ವೈ.ಎನ್. ರುದ್ರೇಶಗೌಡ, ಎ. ಮಂಜು, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ ಮತ್ತು ವಿಧಾನ ಪರಿಷತ್ಸ್‌ದಸ್ಯರಾದ ಪಟೇಲ್ ಶಿವರಾಂ, ಗೋ. ಮಧುಸೂದನ್, ಮರಿತಿಬ್ಬೇಗೌಡ, ಬಿ.ಬಿ.ಶಿವಪ್ಪ ಹಾಗೂ ತಾಲೂಕು ಪಂಚಾಯ್ತಿ ಅಧ್ಯಕ್ಷೆ ರತ್ನ ಹನುಮೇಗೌಡ, ನಗರಸಭೆ ಅಧ್ಯಕ್ಷೆ ವಿದ್ಯಾಶ್ರೀ, ನಗರಸಭೆ ಸದಸ್ಯೆ ಹೆಚ್. ಶೋಭ ಹಾಗೂ ನಾನಾ ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement