ಬಂಕ್‌ಗಳಲ್ಲಿ ಕಳಪೆ ಗುಣಮಟ್ಟದ ಗ್ಯಾಸ್
-ಪಿ. ರವಿಕುಮಾರ್
ಕನ್ನಡಪ್ರಭ ವಾರ್ತೆ, ಹಾಸನ, ಡಿ.11
ಹಾಸನದಲ್ಲಿ ಗ್ಯಾಸ್ ತುಂಬುವಂತಹ ಕೆಲ ಬಂಕ್‌ಗಳಲ್ಲಿ ಆಟೋಗಳಿಗೆ ಹಾಗೂ ನಾಲ್ಕುಚಕ್ರ ವಾಹನಗಳಿಗೆ ಕಳಪೆ ಗುಣಮಟ್ಟದ ಗ್ಯಾಸ್ ತುಂಬಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇದಕ್ಕೆ ಉದಾರಣೆಯಾಗಿ ಆಟೋಗಳಿಗೆ ಗ್ಯಾಸ್ ತುಂಬಿಸಿಕೊಂಡು ಬಂಕ್‌ಗಳಿಂದ ಹೊರ ಬಂದು ಸ್ವಲ್ಪ ದೂರದಲ್ಲಿಯೇ ವಾಹನಗಳಲ್ಲಿ ಕರ್ಕಶ ಶಬ್ದ ಹಾಗೂ ವಾಹನದಿಂದ ಹೊಸ ಸೂಸುವ ದಟ್ಟ ಹೊಗೆಯಿಂದ ಪರಿಸರ ಮಾಲಿನ್ಯವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಗ್ಯಾಸ್‌ನ ಗುಣಮಟ್ಟ ಕಳಪೆಯಿಂದ ಕೂಡಿರುವುದರಿಂದ ದುರ್ವಾಸನೆ ಹೆಚ್ಚಾಗಿ ಬೀರುವ ಮೂಲಕ ಪರಿಸರದ ಮೇಲೆ ಹೆಚ್ಚು ದುಷ್ಪರಿಣಾ ಬೀರುತ್ತಿದೆ. ವಾಹನಗಳು ಉಗುಳುವ ಹೊಗೆಗಿಂತ ವಿಷಕಾರಿಯಾಗಿ ಹೊರ ಉಗುಳುವ ಗ್ಯಾಸ್‌ನ ದುರ್ವಾಸನೆ ಕೆಟ್ಟದ್ದಾಗಿದೆ. ಈ ಬಗ್ಗೆ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ವಿಪರ್ಯಾಸಯೇ ಸರಿ.
ಜಿಲ್ಲೆಯಲ್ಲಿ ಸುಮಾರು 3 ಸಾವಿರ ಕ್ಕೂ ಹೆಚ್ಚು ಆಟೋ ರಿಕ್ಷಾಗಳಿವೆ. ಅದ್ಯಾಕೋ ಗೊತ್ತಿಲ್ಲ ಆಟೋ ರಿಕ್ಷಾಗಳ ಸಮಸ್ಯೆಗಳಿಗೆ ಮುಕ್ತಿ ಜಿಲ್ಲೆಯಲ್ಲಿ ಮುಕ್ತಿ ಆನ್ನೋದೆ ಸಿಗುತ್ತಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಆಟೋಗಳ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದೆಡೆ ಮೀಟರ್ ವ್ಯವಸ್ಥೆ ಸರಿ ಇಲ್ಲದ ಕಾರಣ ಆಟೋ ರಿಕ್ಷಾದವರು ಪರಡುವಂತಾಗಿದೆ. ಇದರಿಂದ ಪ್ರಯಾಣಿಕರು ಸಹ ತೊಂದರೆ ಒಳಗಾಗುತ್ತಿದ್ದಾರೆ.
ಇದರ ಜೊತೆಗೆ ಆಟೋಗಳಿಗೆ ಗ್ಯಾಸ್ ಬಂಕ್‌ಗಳಲ್ಲಿ ನಿಖರವಾಗಿ ಗ್ಯಾಸ್ ಅಳತೆ ಡುವಂತಹ ಯಾವುದೇ ಯಂತ್ರಗಳಿಲ್ಲದೆ ವಂಚನೆಯಾಗುತ್ತಿದೆ ಎಂಬ ಅನುಮಾನ ಆಟೋ ಚಾಲಕರಲ್ಲಿ ಉಂಟಾಗಿದೆ.
ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಹಾಕಿದಾಗ ಅಲ್ಲಿ ಲೀಟರ್ ಅನ್ನು ತೋರಿಸುತ್ತದೆ. ಅದನ್ನು ಬಾಟಲಿಗೆ ಹಾಕಿದ್ದರ ಪ್ರಮಾಣ ತಿಳಿಯುತ್ತದೆ. ವಿಪರ್ಯಾಸ ಅಂದ್ರೆ ಗ್ಯಾಸ್ ಅನ್ನು ಆಟೋ ಅಥವಾ ವಾಹನಗಳಿಗೆ ತುಂಬುವಾಗ ಅಲ್ಲಿ ಗ್ಯಾಸ್ ತುಂಬಲಾಗಿದೆಯೇ ಅಥವಾ ಇಲ್ಲವೆ ಎಂಬುದನ್ನು ತುಲನೆ ಮಾಡುವುದಕ್ಕೆ ಯಂತ್ರವನ್ನು ಇಡಬೇಕು ನಿಯಮವಿದೆ. ಆದರೆ ಈವರೆಗೂ ಯಾವುದೇ ಬಂಕ್‌ಗಳಲ್ಲಿ ಆ ಯಂತ್ರಗಳನ್ನು ಅಳವಡಿಕೆ ಮಾಡಿಲ್ಲ. ಇದು ಆಟೋ ಚಾಲಕರಿಗೆ ತಲೆನೋವಾಗಿ ಪರಿಣಮಿಸಿದೆ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೆ ಈ ಬಗ್ಗೆ ನಮಗೆ ಬರುವುದಿಲ್ಲ. ಇದು ಜಿಲ್ಲಾಧಿಕಾರಿಗಳಿಂದ ಆಗಬೇಕು ಎಂಬ ಜವಾಬು ನೀಡಿದ್ದಾರೆ. ಆಟೋ ಸಂಘದವರು ಈ ಬಗ್ಗೆ ಗ್ಯಾಸ್ ಬಂಕ್‌ಗಳಲ್ಲಿ ಸರಿಯಾದ ಹಾಗೂ ಪ್ರಮಾಣ ತೋರಿಸಿ, ಗ್ಯಾಸ್ ತುಂಬುವ ವ್ಯವಸ್ಥೆ ಅಳವಡಿಸಿಕೊಡುವ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ.
ಪದೇ ಪದೇ ರಿಪೇರಿ: ಬಂಕ್‌ಗಳಲ್ಲಿ ಗ್ಯಾಸ್‌ನ ಗುಣಮಟ್ಟ ಕಳಪೆಯಾಗಿರುವುದರಿಂದ ವಾಹನಗಳು ಹೆಚ್ಚಾಗಿ ರಿಪೇರಿಗೆ ಬರುತ್ತಿವೆ ಎಂದು ಆಟೋ ಚಾಲಕರು ದೂರುತ್ತಿದ್ದಾರೆ. ಎಂಜಿನ್‌ಗೆ ತೊಂದರೆ ಉಂಟಾಗುತ್ತಿದೆ. ಇದರಿಂದ ಆಟೋ ಚಾಲಕರು ಹಾಗೂ ಮಾಲೀಕರು ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಪೆ ಗುಣಮಟ್ಟದ ಗ್ಯಾಸ್‌ನಿಂದಾಗಿ ಪರಿಸರದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಕ್ರಮಕೈಗೊಳ್ಳದೆ ಕೈಕಟ್ಟಿ ಕುಳಿತಿದ್ದಾರೆ ಎಂದು ಹೇಳಲಾಗುತ್ತಿದೆ.