ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿಮಾ ಕಾನೂನು ಮಸೂದೆ ಜಾರಿಯಾದ್ರೆ ಮುಷ್ಕರ

Srinivasa Murthy VN
Updated On : 11 Dec 2013, 9:47 am

ಕನ್ನಡಪ್ರಭ ವಾರ್ತೆ ಹಾಸನ ಡಿ.11
ವಿಮಾ ಕಾನೂನು (ತಿದ್ದುಪಡಿ) ಮಸೂದೆಯ ಜಾರಿಗೊಳಿಸಿದರೆ ಆ ವಿರುದ್ಧ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಅಖಿಲ ಭಾರತ ವಿಮಾ ನೌಕರರ ಸಂಘದ ಮೈಸೂರು ವಿಭಾಗದ ಉಪಾಧ್ಯಕ್ಷ ಸಿ.ಮಂಜುನಾಥ್ ಎಚ್ಚರಿಕೆ ನೀಡಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿಮಾ ವಲಯದಲ್ಲಿ ವಿದೇಶೀ ನೇರ ಬಂಡವಾಳ ಮಿತಿ ಹೆಚ್ಚಳ ಮಾಡುವ ಕ್ರಮವನ್ನು ಅಖಿಲ ಭಾರತ ವಿಮಾ ನೌಕರರ ಸಂಘದ ವಿರೋಧವಿದೆ. ದೇಶದ ಸಂಪತ್ತನ್ನೂ ಲೂಟಿ ಮಾಡುವ ವಿದೇಶೀ ಬಂಡವಾಳದಾರರಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿ ಬರ ಮಾಡಿಕೊಳ್ಳುತ್ತಿದೆ. ಇದರಿಂದ ವಿಮಾ ವಲಯದಲ್ಲಿ ವಿದೇಶಿ ನೇರ ಹಾಗೂ ವಿದೇಶಿ ಬಂಡವಾಳದ ಹಿತಾಸಕ್ತಿಯನ್ನು ಕಾಪಾಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಜನ ಜಾಗೃತಿ: ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳವನ್ನು ಶೇ.26 ರಿಂದ ಶೇ. 49ಕ್ಕೆ ಏರಿಸುವ ಹಾಗೂ ಸಾರ್ವಜನಿಕ ವಲಯ ಸಾಮಾನ್ಯ ವಿಮಾ ಕಂಪೆನಿಗಳ ಬಂಡವಾಳ ಹಿಂತೆಗೆಯಲು ಸರ್ಕಾರ ವಿಮಾ ಕಾನೂನು ಮಸೂದೆಯನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಜಾರಿಗೆ ತರಲು ಮುಂದಾಗಿದೆ. ಇದರ ವಿರುದ್ಧ ಅಖಿಲ ಭಾರತ ವಿಮಾ ನೌಕರರ ಸಂಘವು ದೇಶದಾದ್ಯಂತ ಜನ ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದರು.
ಮರುಪರಿಶೀಲನೆ ನಡೆಸಬೇಕು: ಜಾಗತಿಕ ಆರ್ಥಿಕ ಹಿಂಜರಿತದ ಅನುಭವವಿದ್ದರೂ ಮತ್ತು ಹಣಕಾಸು ವಲಯದಲ್ಲಿ ಉದಾರೀಕರಣದ ಅಪಾಯವನ್ನು ಮನಗಂಡಿದ್ದರೂ ಸರ್ಕಾರ ವಿಮಾ ವಲಯವನ್ನು ಇನ್ನಷ್ಟು ಮುಕ್ತಗೊಳಿಸಲು ಮುಂದಾಗಿರುವುದು ದುರದೃಷ್ಟಕರ ಸಂಗತಿ. ಹಾಗಾಗಿ ಜನ ಸಾಮಾನ್ಯರ ಮತ್ತು ದುಡಿಯುವ ವರ್ಗದ ಜೀವನ ಹಾಗೂ ಜೀವನ ಮಟ್ಟದ ಮೇಲೆ ಅಪಾರ ದುಷ್ಪರಿಣಾಮ ಬೀರುತ್ತಿರುವ ಈ ನವ ಉದಾರೀಕರಣ ನೀತಿಗಳನ್ನು ಸರ್ಕಾರ ಮರು ಪರಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ವಿಮಾ ಕಾನೂನು (ತಿದ್ದುಪಡಿ) ಮಸೂದೆಯ ವಿರುದ್ಧ ಸಾರ್ವಜನಿಕ ಅಭಿಪ್ರಾಯ ಮೂಡಿದೆ. ಈ ಬಗ್ಗೆ ಸಾಕಷ್ಟು ಪಾರ್ಲಿಮೆಂಟಟ್ಸದಸ್ಯರನ್ನು ಭೇಟಿ ಮಾಡಿ ಈ ಮಸೂದೆಯ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಲಾಗಿದೆ. ಸರ್ಕಾರ ಈ ಮಸೂದೆಯನ್ನು ಪಾರ್ಲಿಮೆಂಟಟ್ನಲ್ಲಿ ಜಾರಿಗೊಳಿಸಿದ್ದೇ ಆದಲ್ಲಿ ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಅಖಿಲ ಭಾರತ ವಿಮಾ ನೌಕರರ ಸಂಘ ತೀರ್ಮಾನಿಸಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement