'ವೈಜ್ಞಾನಿಕ ಕೃಷಿಪದ್ಧತಿಯಿಂದ ಹೆಚ್ಚು ಉತ್ಪಾದನೆ'
ಸಕಲೇಶಪುರ: ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡರೆ ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆ ಪಡೆಯಲು ಸಾಧ್ಯ ಎಂದು ಶಾಸಕ ಹೆಚ್.ಕೆ. ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ವಿನಾಯಕ ರೈತಶಕ್ತಿ ಗುಂಪು ಮತ್ತು ಕೃಷಿ ಇಲಾಖೆ ಇತ್ತೀಚೆಗೆ ಏರ್ಪಡಿಸಿದ್ದ ಹೋಬಳಿ ಮಟ್ಟದ ಬತ್ತದ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿ, ರೈತರು ಬೇಸಾಯದ ಖರ್ಚನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಲಘು ಪೋಷಕಾಂಶಗಳ ಬಳಕೆ ಮತ್ತು ಯಂತ್ರನಾಟಿ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯುವತ್ತ ರೈತರು ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು. ಬೇಸಾಯದಲ್ಲಿ ಕಡಿಮೆ ಖರ್ಚು ಮಾಡುವ ಉದ್ದೇಶದಿಂದ ಸರಕಾರ ರಿಯಾಯಿತಿ ದರದಲ್ಲಿ ಕೃಷಿ ಇಲಾಖೆ ಮೂಲಕ ಪರಿಕರಗಳನ್ನು ವಿತರಿಸುತ್ತಿದ್ದು ಇದರ ಸದ್ಬಳಕೆಯನ್ನು ರೈತರು ಹೆಚ್ಚಿನಮಟ್ಟದಲ್ಲಿ ಬಳಸಿಕೊಳ್ಳಬೇಕಾಗಿದೆ ಎಂದರು.
ಜಿಪಂ ಸದಸ್ಯೆ ಸುಲೋಚನಾ, ತಾಪಂ ಅಧ್ಯಕ್ಷೆ ಮಂಜುಳ, ಸದಸ್ಯ ಕುಮಾರಯ್ಯ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸೋಮೇಶ್, ಉದೇವಾರ ಗ್ರಾಪಂ ಅದ್ಯಕ್ಷೆ ಸುಶೀಲಮ್ಮ, ಸದಸ್ಯ ಚರಣ್, ನಿಂಗರಾಜು, ಅನುವುಗಾರ ಕೃಷ್ಣಮೂರ್ತಿ ಇತರರು ಇದ್ದರು.