ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಪಂಪ್‌ಸೆಟ್‌ಗಳಿಗೆ 8 ಗಂಟೆ ವಿದ್ಯುತ್ ನೀಡಿ'

Srinivasa Murthy VN
Updated On : 13 Dec 2013, 12:42 pm

ಹೊಳೆನರಸೀಪುರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ರೈತರ ಪಂಪ್‌ಸೆಟ್‌ಗಳನ್ನು ಅಕ್ರಮ ಸಕ್ರಮದಡಿಯಲ್ಲಿ ಅಧಿಕೃತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 18 ಸಾವಿರ ಅರ್ಜಿಗಳು ಇಲಾಖೆಗೆ ಸಕ್ರಮಗೊಳಿಸಲು ಸರ್ಕಾರದ ಮುಂದಿವೆ ಎಂದು ರಾಜ್ಯ ರೈತ ಸಂಘದ ಉಪಾದ್ಯಕ್ಷ ಲಕ್ಷ್ಮೀನಾರಾಯಣ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಸಕ್ರಮಕ್ಕೆ ರು. 13,900 ನಿಗದಿ ಮಾಡಿದೆ. ಆದರೆ ರೈತರಿಂದ ಸಕ್ರಮಕ್ಕೆ ಪಡೆದ ಹಣಕ್ಕೆ ತಕ್ಕಂತೆ ದಿನಕ್ಕೆ ಎಂಟುಗಂಟೆಗಳ ಕಾಲ ವಿದ್ಯುತ್ ನೀಡಬೇಕೆಂಬ ನಮ್ಮ ಬೇಡಿಕೆಯನ್ನು ಇಲಾಖೆ ಪೂರೈಸಬೇಕೆಂದು ಆಗ್ರಹಿಸಿದರು.
ಈಗಾಗಲೇ ಸಕ್ರಮಕ್ಕಾಗಿ ನೀಡಿರುವ ಸಾವಿರಾರು ಅರ್ಜಿಗಳನ್ನು ತ್ವರಿತಗತಿಯಿಂದ ವಿಲೇವಾರಿ ಮಾಡಬೇಕು. ಇದರ ಜೊತೆಗೆ ಪಂಪ್‌ಸೆಟ್ಟುಗಳಿಗೆ ಅವಶ್ಯವಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಿ ರೈತರು ಬೆಳೆ ಬೆಳೆಯಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಪಟ್ಟಿ ಬಿಡುಗಡೆ: ರೈತರು ಅಕ್ರಮವಾಗಿ ಪಂಪ್‌ಸೆಟ್ ಹೊಂದಿರುವುದನ್ನು ಸಕ್ರಮಗೊಳಿಸುವುದಾಗಿ ಹೇಳಿಕೆ ನೀಡಿ ಹೊರಟಿರುವ ಇಲಾಖೆ ಅಧಿಕಾರಿಗಳು ಸರಿಯಾಗಿ ರೈತರ ಅಭ್ಯುದಯಕ್ಕೆ ಒತ್ತು ನೀಡುವಲ್ಲಿ ತಾರತಮ್ಯ ತೋರಿದ್ದಲ್ಲಿ ನಾವುಗಳು ರಾಜ್ಯಾದ್ಯಾಂತ ಉಗ್ರ ಹೋರಾಟ ನಡೆಸಲು ಹಿಂಜರಿಯೆವು ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ತಾಲೂಕು ರೈತ ಸಂಘಕ್ಕೆ ನೂತನ ಪದಾದಿಕಾರಿಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದರು.
ನೂತನ ಪದಾಧಿಕಾರಿಗಳು: ಅಧ್ಯಕ್ಷರಾಗಿ ಎಚ್.ಜೆ.ಜವರೇಶ , ಗೌರವಾದ್ಯಕ್ಷರಾಗಿ ನಂಜುಂಡೆಗೌಡ, ಉಪಾಧ್ಯಕ್ಷರಾಗಿ ನಾಗಲಾಪುರದ ಧರ್ಮೆಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಎನ್. ರಾಮಕೃಷ್ಣೇಗೌಡ, ಕಾರ್ಯದರ್ಶಿಯಾಗಿ ಹಿರೇಬೆಳಗುಲಿ ದೇವರಾಜಪ್ಪ, ಖಜಾಂಚಿಯಾಗಿ ರಮೇಶ್, ಸಹಕಾರ್ಯದರ್ಶಿಗಳಾಗಿ ಕುಮಾರ್, ರಮೇಶ್, ಸಂಚಾಲಕರಾಗಿ ವೈರಮುಡಿಗೌಡ, ಕಡವಿನಕೋಟೆ ಪುಟ್ಟಸ್ವಾಮಿ ಅವರನ್ನು  ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಗೋಪಾಲಕೃಷ್ಣ, ತಾಲೂಕು ರೈತ ಸಂಘದ ಗೌರವಾಧ್ಯಕ್ಷ ನಂಜುಂಡೇಗೌಡ ಮತ್ತಿತರರು ಇದ್ದರು.

ಎಂಜಿನಿಯರ್ ಹೇಳಿಕೆ

ರೈತ ಸಂಘದ ಮುಖಂಡ ಲಕ್ಷ್ಮಿನಾರಾಯಣ್ ಅವರು ನೀಡಿರುವ ಹೇಳಿಕೆಗೆ ಕಾರ್ಯಪಾಲಕ ಎಂಜಿನಿಯರ್ ನರಸಿಂಹಮೂರ್ತಿ ವಿದ್ಯುತ್ ಸರಬರಾಜಿನಲ್ಲಿ ಯಾವುದೇ  ಕೊರತೆ ಬಾರದೇ ಹೋದಲ್ಲಿ ರೈತರು ಅಪೇಕ್ಷಿಸುವ ವಿದ್ಯುತ್ ಅನ್ನು ಸರಬರಾಜು ಮಾಡುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement