ಕಾಲುಬಾಯಿ ನಿಯಂತ್ರಣಕ್ಕೆ ಜಾಗೃತಿ ಶಿಬಿರ: ಧರ್ಮಪ್ಪ
ಕ.ಪ್ರ.ವಾರ್ತೆ ಹಾಸನ ಡಿ.15
ಜಾನುವಾರುಗಳಿಗೆ ಕಾಲು ಬಾಯಿ ಜ್ವರವನ್ನು ತಡೆಯಲು ವರ್ಷಕ್ಕೆ ಎರಡು ಬಾರಿ ಲಸಿಕೆ ಕೊಡಿಸುವಂತೆ ಆಲೂರು ಪಶು ಚಿಕಿತ್ಸಾಲಯದ ಸಹಾಯಕ ನಿರ್ದೇಶಕ ಕೆ.ಹೆಚ್. ಧರ್ಮಪ್ಪ ತಿಳಿಸಿದ್ದಾರೆ.
ಕಂದಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಪಶು ಸಂಗೋಪನಾ ಇಲಾಖೆ ಆಶ್ರಯದಲ್ಲಿ ಕಾಕಾರ್ಜುವಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪಶು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಕಾಲು ಬಾಯಿ ಜ್ವರಕ್ಕೆ ಜಾನುವಾರುಗಳು ತುತ್ತಾಗಿ ಸಾವನ್ನಪ್ಪಿದ್ದು ಇದರಿಂದ ರೈತರಿಗೆ ಬಹಳ ನಷ್ಟವಾಗಿದೆ. ಇದನ್ನು ತಡೆಯ ಬೇಕಾದರೆ ತಜ್ಞರ ಸಲಹೆ ಸೂಚನೆಯಂತೆ ಜಾನುವಾರುಗಳನ್ನು ರೈತರು ಕಾಪಾಡ ಬೇಕು ಎಂದರು.
ಕೃಷಿ ವಿಜ್ಞಾನ ಕೇಂದ್ರ ಪಶು ವಿಜ್ಞಾನಿ ಕೆ.ಜೆ. ಕಾಂತರಾಜು ರೋಗದ ಕುರಿತು ಮಾಹಿತಿ ನೀಡುತ್ತಾ ರಾಸುಗಳಲ್ಲಿ 1040ರಿಂದ 1070ರವರೆಗೆ ಜ್ವರ ಬರುತ್ತದೆ. ನೀರು ಕುಡಿಯಲು ಹಾಗೂ ಆಹಾರ ತಿನ್ನುವುದಕ್ಕೆ ಆಗದಿರುವುದು, ಬಾಯಿ ಮತ್ತು ನಾಲಗೆಯಲ್ಲಿ ಗುಳ್ಳೆಗಳು ಕಾಣಿಸಿ ಕೊಂಡು ಓಂದೇ ಸಮನೆ ಜೊಲ್ಲು ಸುರಿಯುವುದು ಕಾಲಿನ ಗೊರಸುಗಳ ಮದ್ಯದಲ್ಲಿನಂತರ ಹುಳುಗಳು ಸೇರಿಕೊಳ್ಳುತ್ತವೆ. ಈ ರೋಗವು ಗಾಳಿ ಮುಖಾಂತರ ಹೆಚ್ಚಾಗಿ ಹರಡುವು ದರಿಂದ ರೈತರು ರಾಸುಗಳ ಆರೈಕೆಗೆ ಮುಂದಾಗಬೇಕು ಎಂದರು.
ರೋಗ ಬಾರದಂತೆ ಪ್ರತಿದಿನ 5 ಗ್ರಾಂ ಅಡಿಗೆ ಸೋಡವನ್ನು ಒಂದು ಲೀಟರ್ನಲ್ಲಿ ಬೆರೆಸಿ ಬಾಯಿ ಮತ್ತು ಕಾಲನ್ನು ತೊಳೆದು ಗಂಜಿ, ಬಾಳೆಹಣ್ಣು, ರಾಗಿ ಹಂಬಲಿ ನೀಡಬೇಕು. ಕೊಟ್ಟಿಗೆ ಪ್ರತಿನಿತ್ಯ ಸ್ವಚ್ಛಗಿಡುವುದು ರೋಗಗ್ರಸ್ಥ ಹಸುವಿನಿಂದ ಇತರ ರಾಸು ಗಳನ್ನು ದೂರವಿಡುವುದು ಲಸಿಕೆ ಹಾಕಿಸುವುದು ಅತಿಮುಖ್ಯ ಎಂದು ವಿವರಿಸಿದರು.