ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆ
ಹಾಸನ: ಕನ್ನಡ ಸಾಹಿತ್ಯ ಪರಿಷತ್ತಿನ 2013-14ನೇ ಸಾಲಿನ ಪ್ರವೇಶ, ಕಾವಲ, ಜಾಣ ಮತ್ತು ರತ್ನ ಪರೀಕ್ಷೆಗಳು ಡಿ. 27, 28 ಮತ್ತು 29ರಂದು ಒಟ್ಟು 3 ದಿನಗಳ ಕಾಲ ರಾಜ್ಯದ 19 ಕೇಂದ್ರಗಳಲ್ಲಿ ನಡೆಯಲಿದ್ದು, ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಕೇಂದ್ರದ ವಿಳಾಸವನ್ನು ದೂರವಾಣಿ ಮೂಲಕ ಪಡೆಯಬಹುದು. ದೂರವಾಣಿ ಸಂಖ್ಯೆ -08026623584, ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ವಿಳಾಸವನ್ನು ಅಂತರ್ಜಾಲ ತಾಣ ಢಿಢಿಢಿ.್ಞಛಡಛಠಛ.್ಝಟಿ ಮೂಲಕ ಸಹ ಪಡೆದುಕೊಳ್ಳಬಹುದು
ಸಕಲೇಶಪುರದಲ್ಲಿ ಹನುಮ ಜಯಂತಿ
ಸಕಲೇಶಪುರ: ಹನುಮ ಜಯಂತಿ ಅಂಗವಾಗಿ ಪಟ್ಟಣವನ್ನು ಸಿಂಗರಿಸಿರುವುದರಿಂದ ಹಬ್ಬದ ವಾತವಾರಣ ಮನೆಮಾಡಿತ್ತು. ಸಕಲೇಶ್ವರ ಸ್ವಾಮಿ ದೇವಸ್ಥಾನದಿಂದ ಹಳೇ ಬಸ್ ನಿಲ್ದಾಣದವರೆಗೆ ತಳಿರು ತೋರಣ, ಬಾಳೆದಿಂಡು ಹಾಗೂ ಬಾವುಟದಿಂದ ಸಿಂಗರಿಸಲಾಗಿದ್ದು ಮುಖ್ಯ ಬೀದಿಯ ಅಲ್ಲಲ್ಲಿ ಮೈಕ್ಗಳನ್ನು ಆಳವಡಿಸಿರುವುದರಿಂದಾಗಿ ದೇವಸ್ಥಾನದಲ್ಲಿ ಅರ್ಚಕರ ಮೂಳಗಿಸುವ ವೇದಾಘೋಷ ಪಟ್ಟಣದಲ್ಲೆಡೆ ವ್ಯಾಪ್ತಿಸುವುದರಿಂದಾಗಿ ಪಟ್ಟಣದಲ್ಲಿ ಅವ್ಯಕ್ತ ಭಕ್ತಿ ಭಾವ ಆವರಿಸಿತ್ತು. ಮೂರು ದಿನಗಳಿಂದ ಹನುಮ ಜಯಂತಿ ಅಂಗವಾಗಿ ಆಂಜನೇಯ ದೇವಸ್ಥಾನದಲ್ಲಿ ನಾನಾ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಶನಿವಾರ ಮುಸ್ಸಂಜೆ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಜೈಮಾರುತಿ ದೇವರಾಜ್ ನೇತೃತ್ವದಲ್ಲಿ ಹನುಮಾನ್ ರಥದೊಂದಿಗೆ ಆನೆ, ಅಂಬಾರಿ, ಚಂಡೆ, ಡೊಳ್ಳು ಕುಣಿತ ಹುಲಿವೇಷಧಾರಿಗಳು ಹಾಗೂ ಆಂಜನೇಯ ವೇಷದಾರಿಗಳು ಮಲೆನಾಡ ಸುಗ್ಗಿಕುಣಿತ, ಹಾಸ್ಯಗೊಂಬೆ, ಸ್ತಬ್ದ ಚಿತ್ರಗಳೊಂದಿಗೆ ಪಟ್ಟಣದ ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ಅರಳೀಕಟ್ಟೆ ಲೋಕಾರ್ಪಣೆ
ಹಾಸನ: ನಗರದ ಕುವೆಂಪುನಗರ ಬಡಾವಣೆಯ ಜನತಾ ಬಜಾರ್ ಬಳಿ ಜೀರ್ಣೋದ್ಧಾರಗೊಂಡ ಅರಳೀಕಟ್ಟೆಯನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು. ಶನಿವಾರದಿಂದ ನಾನಾ ಪೂಜಾ ಕಾರ್ಯಗಳು ಜರುಗಿದವು. ಭಾನುವಾರ ಬೆಳಿಗ್ಗೆ 7ಕ್ಕೆ ಹೋಮ, ನವಗ್ರಹ ಮೂರ್ತಿಗಳ ಪ್ರತಿಷ್ಠಾಪನೆ, ಅಶ್ವತ್ಥ ವೃಕ್ಷದ ವಿವಾಹ, ಶ್ರೀಸತ್ಯನಾರಾಯಣ ಪೂಜೆ ಹಾಗೂ ಸಾಧಕರಿಗೆ ಗೌರವಾರ್ಪಣೆ ನಂತರ ಮಹಾಮಂಗಳಾರತಿ ನಡೆಯಿತು. ನಂತರ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
'ಹೈನುಗಾರಿಕೆಯಿಂದ ಕೃಷಿಕರ ಬದುಕು '
ಜಾವಗಲ್: ಹೈನುಗಾರಿಕೆಯು ಕೃಷಿಕರ ಬದುಕನ್ನು ಉತ್ತಮಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಇ.ಎಚ್. ಲಕ್ಷ್ಮಣ್ ಅಭಿಪ್ರಾಯಪಟ್ಟರು.ಅರಸೀಕೆರೆ ತಾಲೂಕು ಪಶುಪಾಲನಾ ಇಲಾಖೆ, ಜಾವಗಲ್ ಹಾಲು ಉತ್ಪಾದಕರ ಸಹಕಾರ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿಬಂಧು ಸ್ವಸಹಾಯಸಂಘಗಳ ಒಕ್ಕೂಟದ ಆಶ್ರಯದಲ್ಲಿ ಇಲ್ಲಿನ ಮಾಡೆಲ್ ಶಾಲೆ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಹೈನುಗಾರಿಕಾ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ಎನ್. ಸಿದ್ದಲಿಂಗೇಗೌಡ, ಒಕ್ಕೂಟದ ಅಧ್ಯಕ್ಷೆ ರೇಣುಕ, ಕವಿತಾ, ಸಂಸ್ಥೆ ಅಧ್ಯಕ್ಷೆ ಮಲ್ಲಮ್ಮಶೇಖರೆಗೌಡ,ತಾಪಂ ಸದಸ್ಯೆ ರಾಜೇಶ್ವರಿ ಶಿವಾನಂದ್, ಎಪಿಎಂಸಿ ಮಾಜಿ ಅಧ್ಯಕ್ಷ ಇ. ನಿಂಗಪ್ಪ, ರೂಪ ವಿನಾಯಕ್ ಇತರರು ಇದ್ದರು.