ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಲಾರಿ- ಬೈಕ್ ಡಿಕ್ಕಿ: ಒಬ್ಬನ ಸಾವು

Srinivasa Murthy VN
Updated On : 16 Dec 2013, 12:27 pm

ಅರಸೀಕೆರೆ: ರಾಷ್ಟ್ರೀಯ ಹೆದ್ದಾರಿಯ ಬಿ.ಎಚ್.ರಸ್ತೆಯಲ್ಲಿ ಭಾನುವಾರ ರಾತ್ರಿ ತಿಪಟೂರು ಕಡೆಯಿಂದ ಬರುತ್ತಿದ್ದ ಲಾರಿಗೆ ಮೋಟಾರ್ ಬೈಕ್ ಹಿಂಬದಿಯಿಂದ ಗುದ್ದಿದ ಕಾರಣ ಅಪಘಾತ ಸಂಭವಿಸಿದ್ದ ಮೋಟಾರ್ ಬೈಕ್ ಸವಾರರ ಪೈಕಿ ಒಬ್ಬಾತ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಪಟ್ಟಣದ ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಪಟ್ಟಣದ ಹೊರವಲಯದಲ್ಲಿನ ವರುಣಾ ಡಾಬದಿಂದ ಸ್ಪಲ್ಪ ದೂರದ ಬಂಡೀಹಳ್ಳಿ ಗೇಟಟ್ಬಳಿಯಲ್ಲಿ ಈ ರಸ್ತೆ ಅಪಘಾತ ಸಂಭವಿಸಿದ್ದು, ರಾತ್ರಿ ತಿಪಟೂರು ಮಾರ್ಗವಾಗಿ ಅರಸೀಕೆರೆ ಕಡೆಗೆ ಬರುತ್ತಿದ್ದ ಆಂಧ್ರಪ್ರದೇಶದ ಲಾರಿ ರಸ್ತೆಯ ಎಡಭಾಗಕ್ಕೆ ಬಂದ ಕಾರಣ ಅತಿವೇಗದಲ್ಲಿ ಅರಸೀಕೆರೆ ಕಡೆಗೆ ಬರುತ್ತಿದ್ದ ಮೋಟಾರ್ ಬೈಕ್ ಸವಾರರು ಬೈಕಕ್ನಿಯಂತ್ರಣ ಮಾಡಲು ಸಾಧ್ಯವಾಗದೇ ಲಾರಿಯ ಹಿಂಬದಿಗೆ ಗುದ್ದಿರುವ ಪರಿಣಾಮ ಈ ಅವಘಡ ಸಂಭವಿಸಿದ್ದು, ಮೋಟಾರ್ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಹಿಂಬದಿಯ ಸವಾರನಿಗೆ ತಲೆಗೆ ತೀವ್ರವಾದ ಪೆಟ್ಟು ಬಿದ್ದಿರುವ ಕಾರಣ ಆತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಈ ಘಟನೆಯಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರು ಯಾರು ಎಂಬುದು ತಿಳಿದು ಬಂದಿಲ್ಲ.
ಗ್ರಾಮಸ್ಥರ ಆಕ್ರೋಶ: ಘಟನೆ ಸ್ಥಳದಲ್ಲಿ ಗುಂಪು ಸೇರಿದ್ದ ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ಈ ರಸ್ತೆಯ ಅಪಘಾತಕ್ಕೆ ಪೊಲೀಸರು ಕಾರಣ ಎಂದು ಆರೋಪಿಸಿ ಪೊಲೀಸರ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಅಪಘಾತ ಸಂಭವಿಸಿದ್ದ ಸಮಯದಲ್ಲಿ ಸ್ಥಳದಲ್ಲಿ ಜೀಪಿನೊಂದಿಗೆ ಇದ್ದ ಪೊಲೀಸರು ಈ ಲಾರಿಯನ್ನು ಪರಿಶೀಲಿಸಲು ಎಡಭಾಗಕ್ಕೆ ನಿಲ್ಲಿಸಲು ಚಾಲಕನಿಗೆ ಸೂಚನೆ ನೀಡಿದ್ದರಿಂದ ಲಾರಿಯ ಚಾಲಕ ಏಕಾಏಕಿ ರಸ್ತೆಯ ಎಡಭಾಗಕ್ಕೆ ಲಾರಿಯನ್ನು ತಂದ ಕಾರಣ ಹಿಂಬದಿಯಲ್ಲಿ ಬರುತ್ತಿದ್ದ ಮೋಟಾರ್ ಬೈಕ್ ಸವಾರರು ತಮ್ಮ ಬೈಕ್ ನಿಯಂತ್ರಿಸಲು ಸಾಧ್ಯವಾಗದೆ ಲಾರಿಗೆ ಗುದ್ದಿ ಈ ಅಪಘಾತ ಸಂಭವಿಸಿದೆ ಎಂದು ಪ್ರತಿಭಟನನಿರತ ಗ್ರಾಮಸ್ಥರು ಆರೋಪಿಸಿದರು.
ಅಪಘಾತ ಸಂಭವಿಸಿ ಅರ್ಧ ಗಂಟೆ ಕಾಲ ಕಳೆದರೂ ಸ್ಥಳಕ್ಕೆ ಪೊಲೀಸರು ಬಾರದ ಕಾರಣ ರಸ್ತೆಯ ಎರಡು ಕಡೆಗಳಲ್ಲಿ ಸುಮಾರು 1 ಕಿ.ಮೀ ದೂರದವರೆಗೂ ವಾಹನಗಳು ಸಾಲಾಗಿ ನಿಂತಿದ್ದು, ನಂತರ ಸ್ಥಳಕ್ಕೆ ಬಂದ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಗಂಗಾಧರಪ್ಪ ಮತ್ತು ಸಿಬ್ಬಂದಿಗಳು ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಪ್ರಹಾರ ಮಾಡುವ ಮೂಲಕ ವಾಹನಗಳನ್ನು ತೆರವುಗೊಳಿಸುವ ಮೂಲಕ ಸಂಚಾರ ವ್ಯವಸ್ಥೆಯನ್ನು ಸುಗಮ ಮಾಡಿಕೊಟ್ಟರು.

ಪೊಲೀಸರ ವಿರುದ್ಧ ಗ್ರಾಮಸ್ಥರ ಆಕ್ರೋಶ
ಘಟನೆ ಸ್ಥಳದಲ್ಲಿ ಗುಂಪು ಸೇರಿದ್ದ ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ಈ ರಸ್ತೆಯ ಅಪಘಾತಕ್ಕೆ ಪೊಲೀಸರು ಕಾರಣ ಎಂದು ಆರೋಪಿಸಿ ಪೊಲೀಸರ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಅಪಘಾತ ಸಂಭವಿಸಿದ್ದ ಸಮಯದಲ್ಲಿ ಸ್ಥಳದಲ್ಲಿ ಜೀಪಿನೊಂದಿಗೆ ಇದ್ದ ಪೊಲೀಸರು ಈ ಲಾರಿಯನ್ನು ಪರಿಶೀಲಿಸಲು ಎಡಭಾಗಕ್ಕೆ ನಿಲ್ಲಿಸಲು ಚಾಲಕನಿಗೆ ಸೂಚನೆ ನೀಡಿದ್ದರಿಂದ ಲಾರಿಯ ಚಾಲಕ ಏಕಾಏಕಿ ರಸ್ತೆಯ ಎಡಭಾಗಕ್ಕೆ ಲಾರಿಯನ್ನು ತಂದ ಕಾರಣ ಹಿಂಬದಿಯಲ್ಲಿ ಬರುತ್ತಿದ್ದ ಮೋಟಾರ್ ಬೈಕ್ ಸವಾರರು ತಮ್ಮ ಬೈಕ್ ನಿಯಂತ್ರಿಸಲು ಸಾಧ್ಯವಾಗದೆ ಲಾರಿಗೆ ಗುದ್ದಿ ಈ ಅಪಘಾತ ಸಂಭವಿಸಿದೆ ಎಂದು ಪ್ರತಿಭಟನನಿರತ ಗ್ರಾಮಸ್ಥರು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement