ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಿಂದೂಗಳ ಧಾರ್ಮಿಕ ಮನೋಭಾವನೆಗೆ ಧಕ್ಕೆ

Srinivasa Murthy VN
Updated On : 16 Dec 2013, 12:26 pm

ಬೇಲೂರು: ಹಿಂದೂಗಳ ಪುರಾತನ ಧಾರ್ಮಿಕ ಕೇಂದ್ರವಾದ ಚಿಕ್ಕಮಗಳೂರು ದತ್ತ ಪೀಠಕ್ಕೆ ಸರ್ಕಾರ ಅಲ್ಪಸಂಖ್ಯಾತರ ಮತ  ಗಿಟ್ಟಿಸಲು ಹಿಂದೂಗಳ ಧಾರ್ಮೀಕ ಮನೋಭಾವನೆಗೆ ಧಕ್ಕೆ ಉಂಟಾಗಿದೆ ಎಂದು ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೃಷ್ಣೇಗೌಡ ಆರೋಪಿಸಿದರು.  
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತ ಪೀಠ 8 ದಶಕದ ಇತಿಹಾಸವಿದೆ, ಅದರೆ ಮುಸ್ಲಿಮರು ಈ ಕ್ಷೇತ್ರಕ್ಕೆ ಬಾಬಾಬಡನ್‌ಗಿರಿ ಎಂದು ನಾಮಕರಣ ಮಾಡಿಕೊಂಡು ದತ್ತಾ ಪೀಠದಲ್ಲಿ ನಿತ್ಯ ಪೂಜೆ, ಹವನ, ಹೋಮ ಹೀಗೆ ಹತ್ತು ಹಲವು ಕಾರ್ಯಗಳು ನಡೆಯುತ್ತಿಲ್ಲ ಎಂದ ಅವರು ಸರ್ಕಾರ ತಕ್ಷಣ ದತ್ತಪೀಠದಲ್ಲಿ ಹಿಂದೂ ಪೂಜಾರಿಗಳ ನೇಮಕ ಮಾಡಬೇಕು. ನಿತ್ಯ ತೆರಳುವ ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದರು.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ದತ್ತಪೀಠದ ಸಮಸ್ಯೆ ಏಕೆ ಪರಿಹಾರ ಮಾಡಲು ಮುಂದಾಗಲಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಮಾಜಿ ಸಚಿವರು ಹಾಲಿ ಶಾಸಕ ಸಿ.ಟಿ. ರವಿ, ದತ್ತ ಪೀಠಕ್ಕೆ ನಿರಂತರ ಹೋರಾಟ ಮಾಡಿದ್ದಾರೆ, ಅದರೆ ಇಲ್ಲಿ ಪಕ್ಷಗಳ ವಿಚಾರ ಮುಖ್ಯವಲ್ಲ ಎಂದರು.
ಬಜರಂಗ ದಳದ ಸಂಚಾಲಕ ಅನಿಲ್ ಗೌಡ ಮಾತನಾಡಿ, ತಾಲೂಕಿನ ಕೆಲವು ಭಾಗದಲ್ಲಿ ಗೋಹತ್ಯೆ ಬಗ್ಗೆ ಜನರಿಗೆ ಅರಿವು ಮೂಡಿಸಿದರೂ ಕೂಡ ಜನರು ಸ್ಪಂದಿಸುತ್ತಿಲ್ಲ ಎಂದ ಅವರು ಸರ್ಕಾರ ಶಾದಿಭ್ಯಾಗ್ಯದಂತಹ ಓಲೈಕೆ ಯೋಜನೆಗಳಿಂದ ದ್ರೋಹ ಎಸಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಶ್ರೀರಾಮ ಸೇನೆ ಅಧ್ಯಕ್ಷ ಶಿವಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement