ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಒಕ್ಕಲಿಗರ ಸಂಘ ಚುನಾವಣೆ: ಮತಕೇಂದ್ರಗಳ ವಿವರ

Srinivasa Murthy VN
Updated On : 17 Dec 2013, 11:36 am

ಜ.5, 2014ರ ಭಾನುವಾರ ಬೆಳಿಗ್ಗೆ 8ರಿಂದ ಸಂಜೆ 4 ರವರೆಗೆ ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇದರ ಕಾರ್ಯಕಾರಿ ಸಮಿತಿಗೆ ನಡೆಯುವ ಚುನಾವಣೆ ಸಂಬಂಧ ಜಿಲ್ಲೆಯ ಕೆಳಕಂಡ ತಾಲ್ಲೂಕು ಕೇಂದ್ರಗಳಲ್ಲಿ ಆಯಾ ತಾಲ್ಲೂಕಿನ ಮತದಾರರು ಮತದಾನ ಮಾಡುವುದು ಎಂದು ಜಿಲ್ಲಾ ಕ್ಷೇತ್ರ ಚುನಾವಣಾಧಿಕಾರಿ, ರಾಜ್ಯ ಒಕ್ಕಲಿಗರ ಸಂಘ ಹಾಗೂ ಸಹಕಾರ ಸಂಘಗಳ ಉಪನಿಬಂಧಕ ಇಲ್ಯಾಸ್ ಉಲ್ಲಾ ಷರೀಫ್ ತಿಳಿಸಿದ್ದಾರೆ. ಹಾಸನ ತಾಲ್ಲೂಕಿನ ಮತದಾರರು ನಗರದ ಸರ್ಕಾರಿ ಕಲಾ ಕಾಲೇಜು, ಸಾಲಗಾಮೆ ರಸ್ತೆಯಲ್ಲಿ ಮತದಾನ ಮಾಡುವುದು. ಚನ್ನರಾಯಪಟ್ಟಣ ತಾಲ್ಲೂಕಿನ ಮತದಾರರು ನವೋದಯ ಜೂನಿಯರ್ ಕಾಲೇಜು, ಮೈಸೂರು ರಸ್ತೆ, ಅರಸೀಕೆರೆ ತಾಲ್ಲೂಕಿನ ಮತದಾರರು ಹಳೆಯ ಹಿರಿಯ ಪ್ರಾಥಮಿಕ ಶಾಲೆ, ಟಿಎಪಿಸಿಎಂಎಸ್ ಹಿಂಭಾಗ, ಬಿ.ಎಚ್. ರಸ್ತೆ, ಬೇಲೂರು ತಾಲ್ಲೂಕಿನ ಮತದಾರರು ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಕಚೇರಿ, ಸುಧನ್ವಗೌಡ ಒಕ್ಕಲಿಗರ ಸಮುದಾಯ ಭವನದ ಎದುರು.  ಸಕಲೇಶಪುರ ತಾಲ್ಲೂಕಿನ ಮತದಾರರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ತಾಲ್ಲೂಕು ಪಂಚಾಯ್ತಿ ಎದುರು, ಆಲೂರು ತಾಲ್ಲೂಕಿನ ಮತದಾರರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಬಿಎಸ್‌ಎನ್‌ಎಲ್ ಪಕ್ಕ ಹಾಗೂ ಅರಕಲಗೂಡು ತಾಲ್ಲೂಕಿನ ಮತದಾರರು ಬಾಲಕಿಯರ ಪದವಿ ಪೂರ್ವ ಕಾಲೇಜು, ಬಸ್ ನಿಲ್ದಾಣದ ಹತ್ತಿರ ಇಲ್ಲಿ ಮತದಾನ ಮಾಡುವುದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಜ.6, 2014ರಂದು ಸೋಮವಾರ ಬೆಳಿಗ್ಗೆ 9 ರಿಂದ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ಟೇಡಿಯಂ ಹತ್ತಿರ ಹಾಸನ ಇಲ್ಲಿ ಮತ ಎಣಿಕೆ ನಡೆಯಲಿದೆ.
48 ನಾಮಪತ್ರ ಸಲ್ಲಿಕೆ: ಸಂಘದ ಚುನಾವಣೆಗೆ ಜಿಲ್ಲೆಯಿಂದ 28 ಜನ ಅಭ್ಯರ್ಥಿಗಳು 48 ನಾಮಪತ್ರ ಸಲ್ಲಿಸಿದಾರೆ. ಮಂಗಳವಾರ ಒಕ್ಕಲಿಗರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು  28 ಜನ ಅಭ್ಯರ್ಥಿಗಳು ಎರಡೆರಡು ನಾಮಪತ್ರ ಸಲ್ಲಿಸಿದ್ದಾರೆ. ಬುಧವಾರ ನಾಮಪತ್ರ ಪರಿಶೀಲನೆಗೆ ನಡೆಯಲಿದ್ದು, ಡಿ.19 ರಂದು ಗುರುವಾರ ಬೆಳಗಿನಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ವಾಪಸ್ ಪಡೆಯಬಹುದು ಎಂದು ಜಿಲ್ಲಾ ಸಹಕಾರ ಸಂಘಗಳ ಕಚೇರಿ ಹಾಗೂ ಚುನಾವಣೆ ಅಧಿಕಾರಿ ಉಪನಿಬಂಧಕ ಇಲ್ಯಾಸ್ ಉಲ್ಲಾ ಷರೀಫ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement