ಜಾವಗಲ್ ಗ್ರಾಪಂನಲ್ಲಿ ವಾರ್ಡ್ಗಳ ಸಭೆ
ಕ.ಪ್ರ.ವಾರ್ತೆ ಜಾವಗಲ್ ಡಿ. 17
ಜಾವಗಲ್ ಸಮುದಾಯ ಭವನದಲ್ಲಿ ಜಾವಗಲ್ ಗ್ರಾಮ ಪಂಚಾಯ್ತಿಯ ಎಲ್ಲಾ 7 ವಾರ್ಡ್ಗಳ ಸಭೆಯು ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆಯಿತು.
ಮಾಹಿತಿ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರೂಪಾಕ್ಷ ಮಾತನಾಡಿ, 2014-15ನೇ ಸಾಲಿನ ಸರ್ಕಾರದಿಂದ ನಾನಾ ಯೋಜನೆಯ ಅಡಿ ದೊರಕುವ ಸೌಲಭ್ಯಗಳ ಬಗ್ಗೆ ವಿವರಿಸಿ, ಎಂ.ಜಿ.ಎನ್.ಆರ್.ಇ.ಜಿ. ಯೋಜನೆಯಡಿ ಕೃಷಿ ಹೊಂಡ, ಇಂಗು ಗುಂಡಿ, ಹುದಿಬದಿ, ಭೂಮಿಸಮತಟ್ಟು ಮಾಡುವುದು, ತೋಟಗಾರಿಕಾ ಬೆಳೆಗಳಾದ ತೆಂಗಿನ ಸಸಿ, ಮಾವಿನಸಸಿ, ಸಪೋಟ, ದಾಳಿಂಬೆ ಬೆಳೆಯುವುದು, ತೆರಿಗೆ ಪರಿಷ್ಕರಣೆ, ಗ್ರಾಮ ನೈರ್ಮಲ್ಯ, ಬೀದಿದೀಪ ಅಳವಡಿಕೆ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಬೀದಿನಾಯಿಗಳ ಹಾವಳಿ ತಪ್ಪಿಸುವುದು ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.
ಸಾರ್ವಜನಿಕರು, ನಿವೇಶನ, ಮನೆ, ಶೇ. 22ರಷ್ಟು ಸೌಲಭ್ಯ ಕಲ್ಪಿಸುವ ಬಗ್ಗೆ ಅರ್ಜಿ ಸಲ್ಲಿಸಿದರು. ಸಾರ್ವಜನಿಕರ ಪರವಾಗಿ ಜೆ.ಕೆ. ಚಂದ್ರಶೇಖರ್ ಮಾತನಾಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಗ್ರಾಪಂ ಉಪಾಧ್ಯಕ್ಷ ರಂಗಸ್ವಾಮಿ, ಮಲ್ಲೇಶಪ್ಪ, ಗ್ರಾಪಂ ಸದಸ್ಯರು ಇದ್ದರು.