ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ದಲಿತ ಪದಕ್ಕೆ ಪರ್ಯಾಯ ಅನ್ವೇಷಣೆ ಅಗತ್ಯ'

Srinivasa Murthy VN
Updated On : 17 Dec 2013, 11:35 am

ಕ.ಪ್ರ.ವಾರ್ತೆ ಹಾಸನ ಡಿ. 17
ದಲಿತ ಮಹಿಳೆ ಜಾತಿ ಮತ್ತು ಲಿಂಗತಾರತಮ್ಯದ ಸವಾಲುಗಳನ್ನು ಎದುರಿ ಸುತ್ತಿದ್ದು   ಪ್ರಶ್ನೆ ಮಾಡುವ ಹಾಗೂ ಸಂಘಟನಾತ್ಮಕ ಶಕ್ತಿಯ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು   ಎಂದು ಖ್ಯಾತ ಸಾಹಿತಿ ಬಾನು ಮುಷ್ತಾಕ್ ಸಲಹೆ ನೀಡಿದ್ದಾರೆ.
ನಗರದಲ್ಲಿ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ನಡೆದ ದಲಿತ ಚಳವಳಿ ಮತ್ತು  ಮಹಿಳೆ ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡುತ್ತಾ  ದಲಿತ ಎಂಬ ಪದವು ಸಂಸ್ಕೃತ  ಶಬ್ದವಾಗಿದ್ದು ಅದರ ಅರ್ಥ ಛಿದ್ರಗೊಂಡಿರುವವರು ಎಂದು ಇದೆ. ಈ ಪದದ ಬಳಕೆಯನ್ನು  ಅಧಿಕೃತವಾಗಿ ಬಳಸುವುದರ ವಿರುದ್ಧ ನಿಷೇಧ ಹೇರಬೇಕು ಎಂದು ಆಗ್ರಹಿಸಿದರು.
ಹಲವೆಡೆ ಬದಲಾವಣೆ: ಅನುಸೂಚಿಯ ಜಾತಿಯ ಆಯೋಗ ಎಲ್ಲಾ ರಾಜ್ಯ ಸರ್ಕಾರಗಳಿಗೂ ನಿರ್ದೇಶನವನ್ನು ನೀಡಿದೆ. ಅದರಂತೆ ಛತ್ತೀಸಗಡ ಸರ್ಕಾರವು ಈ ಪದ ಬಳಕೆಯ ವಿರುದ್ಧ ನಿಷೇಧಾತ್ಮಾಕ ಕ್ರಮವನ್ನು ಕೈಗೊಂಡಿದೆ. ಈ ಸಮುದಾಯವನ್ನು ಗುರುತಿಸಲು ಅಸಂವಿಧಾನಾತ್ಮಕವಾದ ದಲಿತ ಪದದ ಬಳಕೆಯ ಬದಲಿಗೆ ಪರ್ಯಾಯ ಶಬ್ದ ಅನ್ವೇಷಣೆ ಮಾಡುಬೇಕಾದ ಅಗತ್ಯವಿದೆ. ನಿಗ್ರೋ ಎಂಬ  ಅಸಂವಿಧಾನಾತ್ಮಕವಾದ ಪದ ಬಳಕೆಯನ್ನು ಕೈಬಿಟ್ಟು ಅಲ್ಲಿ ಆ ಪದಕ್ಕೆ ಬದಲಾಗಿ ಆಫ್ರೋ  ಅಮೇರಿಕನ್ ಎಂಬ ಘನತೆಯ ಪದ ಬಳಕೆಗೆ ಬಂದಿದೆ ಎಂದು ವಿವರಿಸಿದರು.
ಪತ್ರಕರ್ತೆ ಸಿ. ಸುವರ್ಣ ಅವರು, ಪ್ರಾಸ್ತಾವಿಕ ನುಡಿಗಳನ್ನಾಡಿ ಶತಶತಮಾನಗಳಿಂದ ಮನುಷ್ಯತ್ವದ  ಅಂತ-ಕರಣದಿಂದ ಹೊರದೂಡಲ್ಪಟ್ಟವರು ದಲಿತರು. ಇವರ ಮೇಲಿನ ಶೋಷಣೆ, ದೌರ್ಜನ್ಯ, ತಾರತಮ್ಯ, ಅಮಾನವೀಯಹಿಂಸೆ, ಶ್ರಮದ ಬೆವರಿನ ಹನಿಗಳಿಗೆ ಅನುಭವಿಸಿ  ದಂತಹ ನೋವಿಗೆ ಸಾಕ್ಷಿಯ ರೂಪಕವಾಗಿ ಇಂದು ದಲಿತ ಸಾಹಿತ್ಯ ನಿಂತಿದೆ ಎಂದರು.
ಮಾನವೀಯತೆ, ಮನುಷ್ಯತ್ವವಿಲ್ಲದಂತೆ ಸಮಾಜದಲ್ಲಿ ತಳ ಸಮುದಾಯ ದವರ ಮೇಲೆ   ನಡೆಯುತ್ತಿರುವ ಶೋಷಣೆ, ದೌರ್ಜನ್ಯ, ನೋವು,ಅವಮಾನ ತಲ್ಲಣಗಳನ್ನು ಅಕ್ಷರ ಜ್ಞಾನದ ಬೆಳಕು ಪಡೆದ ಮೇಲೆ ಸಾಹಿತ್ಯ ರಚಿಸಿದ್ದಾರೆ. ಇದೊಂದು ಜಾಗತಿಕ ಸಾಹಿತ್ಯ ಪ್ರಭೇದವಾಗಿದೆ. ಈ ಸಾಹಿತ್ಯ ದುಃಖದ ಅನುಸಂಧಾನವಾಗಿದ್ದು, ಇದು ವೈಚಾರಿಕ ನೆಲಗಟ್ಟಿನಲ್ಲಿ ಸಾಗಬೇಕಾಗಿದೆ ಎಂದರು.
ತಲೆತಗ್ಗಿಸುವಂಥ ವಿಚಾರ: ಸಾಹಿತ್ಯ ಮತ್ತು ಚಳವಳಿ ಒಂದಕ್ಕೊಂದು ಪೂರಕವಾಗಿದ್ದು ಸಾಮಾಜಿಕ ಜಾಗತೀಕರಣದ ಇಂದಿನ ಆಧುನಿಕ ಯುಗದಲ್ಲಿಯೂ ಸಾಮಾಜಿಕ ಅನಿಷ್ಟ ಪದ್ಧತಿ ಜೀವಂತವಾಗಿರುವುದು ಇಡೀ ಮಾನವ ಕುಲ ತಲೆತಗ್ಗಿಸುವಂತಹ ವಿಚಾರ ಎಂದರು.
ಜಾತಿಪದ್ಧತಿ ಮನುಷ್ಯನ ಮೌಢ್ಯತೆಯನ್ನು ತಿಳಿಸುತ್ತಿದ್ದರೆ,ಈ ಮೌಢ್ಯತೆ ತಳ ಸಮುದಾಯದವರಲ್ಲಿ ಕ್ರೌರ್ಯ ಹೆಚ್ಚಿಸಿದೆ. ಜೀವಂತವಾಗಿರುವ ಸಾಮಾಜಿಕ ಬಹಿಷ್ಕಾರ, ಅಸ್ಪ ೃಶ್ಯತೆ ಆಚರಣೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಅನಿಷ್ಟಗಳನ್ನ ಬೇರುಸಹಿತ ಕಿತ್ತೊಗೆಯಬೇಕಾದರೆ ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು.
ದಲಿತರ ತಲ್ಲಣ ಮತ್ತು ಬಿಕ್ಕಟ್ಟುಗಳನ್ನು ದಾಖಲಿಸುವ ಕೆಲಸವಾಗಬೇಕಾಗಿದೆ ಎಂದರು.  
ಆಗ್ರಹ: ದಲಿತ ಸಂಘರ್ಷ ಸಮಿತಿಯ ಮಹಿಳಾ ಘಟಕದ ಪ್ರಪ್ರಥಮ ರಾಜ್ಯಾಧ್ಯಕ್ಷೆ ಗಂಗಮ್ಮ ಗೋಷ್ಠಿಯ  ಅಧ್ಯಕ್ಷತೆ ವಹಿಸಿ ಮಾತನಾಡಿ, ದಲಿತ ಮಹಿಳೆಯರು ಶಿಕ್ಷಣ ವಂತರಾಗಿ  ಸಂಘಟಿತರಾಗಿ  ಸಾಮಾಜಿಕ ವಾಗಿ ಹಾಗೂ ಆರ್ಥಿಕವಾಗಿ ಸಬಲರಾಗಬೇಕು. ಅಲ್ಲದೇ ಮಹಿಳೆಯರ ಮೇಲೆ  ನಡೆ ಯುತ್ತಿರುವ ದೌರ್ಜನ್ಯದ ವಿರುದ್ಧ ದನಿ ಎತ್ತಬೇಕು. ಮಹಿಳೆಯರ ಜನಸಂಖ್ಯೆಯ ಅನುಗುಣವಾಗಿ ಮೀಸಲಾತಿಯನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ, ಸಮ್ಮೇಳನಾಧ್ಯಕ್ಷ ದುದ್ದ ಶ್ರೀನಿವಾಸ್ ಉಪಸ್ಥಿತರಿದ್ದರು. ಪತ್ರಕರ್ತೆ ಇಂದಿರಾ ಹಿರಿಯೂರು ಸ್ವಾಗತಿಸಿದರು. ಶಾಂತಾ ಅತ್ನಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement