ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

224 ಕ್ಷೇತ್ರಗಳಲ್ಲೂ ಎಸ್‌ಜೆಪಿ ಸ್ಪರ್ಧೆ - ರಾಜ್ಯಾಧ್ಯಕ್ಷ ಗಾಡ್ಕರ್

Srinivasa Murthy VN
Updated On : 20 Feb 2013, 11:03 am

ಹಾಸನ: ಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಸಮಾಜವಾದಿ ಜನತಾ ಪಾರ್ಟಿ ಅಭ್ಯರ್ಥಿಗಳು ಸ್ಪರ್ಧಿಸಲು ಸಿದ್ಧರಾಗಿದ್ದಾರೆ ಎಂದು ರಾಜ್ಯಾಧ್ಯಕ್ಷ ಜಿ.ಎಂ.ಗಾಡ್ಕರ್ ತಿಳಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಸ್ಪರ್ಧಿಸಲು ಇಚ್ಛಿಸಿದ್ದಾರೆ. ಮಾರ್ಚ್ ಎರಡನೇ ವಾರದ ನಂತರ ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಸುಮಾರು 50 ಸ್ಥಾನ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆ ಇದ್ದು, ಜಿಲ್ಲೆಯಲ್ಲಿ ಎರಡರಿಂದ ಮೂರು ಸ್ಥಾನಗಳನ್ನು ಎಸ್‌ಜೆಪಿ ತನ್ನದಾಗಿಸಿಕೊಳ್ಳಲಿದೆ ಎಂದರು.
 ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಜಾತಿವಾದಿ ಮತ್ತು ಕೋಮುವಾದಿ ನಾಯಕರರು ನಮ್ಮ ಸಮುದಾಯಗಳ ಮೇಲೆ ಬಲವಂತವಾಗಿ ಹೇರಿರುವ ಜೀತಗಾರಿಕೆ ಮತ್ತು ಗುಲಾಮಗಿರಿ ವ್ಯವಸ್ಥೆಯನ್ನು ಧಿಕ್ಕರಿಸಿ, ಸ್ವಾತಂತ್ರ, ಸ್ವಾಭಿಮಾನ್ಟ ಬದುಕು ಕಟ್ಟಿಕೊಡಲು ಪಕ್ಷ ಸಿದ್ಧವಾಗಿದೆ ಎಂದರು.ಗಂಗೋತ್ರಿ ರಾಮಚಂದ್ರು, ಜಿಲ್ಲಾಧ್ಯಕ್ಷ ಶಿವಕುಮಾರ್ ಭಗೀರಥ, ಮಹಮದ್ ಸಾದಿಕ್, ಅತ್ನಿ ಮಂಜೇಗೌಡ, ಅಬ್ದುಲ್ ಮುನಾಫ್ ಇತರರು ಉಪಸ್ಥಿತರಿದ್ದರು.

ಪರ್ಯಾಯ ಶಕ್ತಿಯ ನಿರೀಕ್ಷೆಯಲ್ಲಿ ಮತದಾರರು: ಯೋಗಾರವುಶ್
ರಾಮನಾಥಪುರ: ಹಾಲಿ ಮತ್ತು ಮಾಜಿ ಶಾಸಕರ ವಿರುದ್ಧ ಬೇಸತ್ತ ತಾಲೂಕಿನ ಜನತೆ ಪರ್ಯಾಯ ಶಕ್ತಿಯನ್ನು ನಿರೀಕ್ಷಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾನು ಜನರ ಆಶೋತ್ತರ ಪೂರೈಸಲು ಸಿದ್ಧನಾಗಿದ್ದೇನೆ. ಈಗ ಬದಲಾವಣೆಯ ಕಾಲ ಬಂದಿದೆ. ನನಗೆ ರಾಜಕೀಯ ಶಕ್ತಿ ನೀಡಿ ಎಂದು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾ ರಮೇಶ್ ಮನವಿ ಮಾಡಿದರು.
  ರಾಮನಾಥಪುರ ಹೊರವಲಯದಲ್ಲಿ ಕ್ಲಬ್ ವತಿಯಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ತಾಲೂಕಿನ ರಾಜಕೀಯ ವಲಯದಲ್ಲಿ ನಾನಿನ್ನೂ ಕಾಲಿರಿಸಿಲ್ಲ. ಚುನಾವಣೆ ಇನ್ನೂ ಬರಬೇಕಿದೆ. ಆದರೆ ಪೊಟ್ಯಾಟೋ ಕ್ಲಬ್‌ನ ಶಕ್ತಿ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರಿಗೆ ನಡುಕ ಹುಟ್ಟಿಸಿದೆ. ಜೆಡಿಎಸ್‌ಗೆ ಶಕ್ತಿ ತುಂಬಲು ಮೇಲಿಂದ ಮೇಲೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕುಮಾರಣ್ಣ ಬರುತ್ತಿದ್ದಾರೆ, ಇಷ್ಟರವರೆಗೂ ರೇವಣ್ಣ ಇದ್ದಾರೆ. ಬೇರೆ ಮುಖಂಡರು ಬೇಕಿಲ್ಲ ಎನ್ನುತ್ತಿದ್ದವರು ಈಗ ಗಾಬರಿ ಬಿದ್ದು ಕುಮಾರಣ್ಣನನ್ನು ಬರಮಾಡಿಕೊಂಡಿದ್ದಾರೆ. ಇದು ಮಣ್ಣಿನ ಮಕ್ಕಳ ರಾಜಕೀಯ ಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ತೋರಿಸುತ್ತಿದೆ ಎಂದು ಲೇವಡಿ ಮಾಡಿದರು.
 ಇಂದಿನ ಸಮಾವೇಶಕ್ಕೆ ಜನತೆ ಸ್ವಯಂ ಪ್ರೇರಿತರಾಗಿ ಬಂದಿದ್ದಾರೆ. ನಾವೇನೂ ಬಾಡೂಟ ಹಾಕಿಸಿ ಕರೆಸಿಲ್ಲ. ಆದರೆ ಹಾಲಿ ಶಾಸಕರು ಬೆಮ್ಮತ್ತಿಯ ಸಮಾವೇಶ ಏರ್ಪಡಿಸಿ ಮಾಂಸದೂಟ ಹಾಕಿಸಿ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ತಾಲೂಕಿನಲ್ಲಿ ಮುಖ್ಯ ರಸ್ತೆಗಳು ಹದಗೆಟ್ಟಿವೆ. ದುರಸ್ತಿ ಇಲ್ಲವೆ ಪುನರ್ ನಿರ್ಮಾಣ ಮಾಡಿಸುವ ಇಚ್ಛಾಶಕ್ತಿ ಯಾರೂ ಪ್ರದರ್ಶಿಸಿಲ್ಲ. ಬಡವರ ವಸತಿ ಯೋಜನೆ ಅನುಷ್ಠಾನಗೊಳಿಸದೆ ವಂಚನೆ ಮಾಡಲಾಗಿದೆ ಎಂದು ದೂರಿದರು.
 ನೀರಾವರಿ ವ್ಯಾಪ್ತಿಯ 60 ಗ್ರಾಮಗಳಿಗೆ ಇನ್ನೂ ನೀರು ಹರಿದಿಲ್ಲ, ಶಾಸಕರು ಕನಿಷ್ಠ ಒಂದು ಟ್ರಾನ್ಸ್‌ಫಾರ್ಮರ್ ದುರಸ್ತಿಪಡಿಸಿ ರೈತರ ಹಿತಾಸಕ್ತಿ ಕಾಪಾಡಿಲ್ಲ. ರೈತಾಪಿ ಜನರು ಸಂಕಷ್ಟದಲ್ಲಿದ್ದಾರೆ. ಆದರೆ ಈ ಕಾಳಜಿ ಶಾಸಕರಿಗಿಲ್ಲ. ಹಿಂದೆ ಮಲ್ಲಪ್ಪ, ನಂಜೇಗೌಡ ಮತ್ತು ಪುಟ್ಟಸ್ವಾಮಿಗೌಡರಂತಹವರು ಮಾಡಿ ಹೋದ ನೀರಾವರಿ ಯೋಜನೆಗಳು ನಿರ್ವಹಣೆಯಿಲ್ಲದೆ ರೈತರಿಗೆ ನೀರು ಹರಿಸಿಲ್ಲ ಅಷ್ಟರ ಮಟ್ಟಿಗೆ ಉದಾಸೀನ ತೋರಿಸಿದ್ದಾರೆ. ಇಂತಹವರಿಂದ ಅಭಿವೃದ್ಧಿ ಮರೀಚಿಕೆಯಾಗಿದೆ. ತಾಲೂಕಿನ ಮತದಾರ ಈ ಸಲದ ಚುನಾವಣೆಯಲ್ಲಿ ಇವರಿಗೆ ಸರಿಯಾದ ಪಾಠ ಕಲಿಸುತ್ತಾನೆ ಎಂದು ಹೇಳಿದರು. ಜೆಡಿಎಸ್ ಕಾಂಗ್ರೆಸ್ ನಿಂದ ಬೇಸತ್ತ ಹಲವು ಮುಖಂಡರು ಪೊಟ್ಯಾಟೋ ಕ್ಲಬ್ ಸೇರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗಲಿದೆ ಎಂದರು.
ರಾಮನಾಥಪುರ, ಬಸವಾಪಟ್ಟಣ, ಕೊಣನೂರು, ಹಂಡ್ರಂಗಿ, ಮತ್ತಿತರೆಡೆಗಳಿಂದ ಆಗಮಿಸಿದ್ದ 7ಸಾವಿರಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ ನ ನೂರಾರು ಮುಖಂಡರು ಯೋಗಾರವುಶ್ ಸಮುಖದಲ್ಲಿ ಪೊಟ್ಯಾಟೋ ಕ್ಲಬ್ ಸೇರಿದರು.  
ಮುಖಂಡ ಜಯಪ್ಪ, ಸತ್ಯನಾರಾಯಣ, ಮಂಜುನಾಥ್,  ಕಂಚೇನಹಳ್ಳಿ ಶ್ರೀನಿವಾಸ್, ಎಂ ಆರ್. ರಂಗಸ್ವಾಮಿ, ಸಿ.ಕೆ. ಮೂರ್ತಿ, ಮುತ್ತಿಗೆ ರಾಜೇಗೌಡ, ನೈಗೆರೆ ಚನ್ನಕೇಶವೇಗೌಡ, ದೊಡ್ಡಮಗ್ಗೆ ರಾಜೇಂದ್ರ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement