ಉಚ್ಚಂಗಿ, ವಣಗೂರು ಗ್ರಾಪಂಚುನಾವಣೆ: ಜೆಡಿಎಸ್‌ಗೆ ಗೆಲವು
ಹಾಸನ: ತಾಲೂಕಿನ ಉಚ್ಚಂಗಿ ಹಾಗೂ ವಣಗೂರು ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ವಣಗೂರು ಗ್ರಾಪಂ 11 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ 9 ಹಾಗೂ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಗಳಿಸಿದ್ದರೆ, ಉಚ್ಚಂಗಿ ಗ್ರಾಪಂ 11 ಸ್ಥಾನಗಳಲ್ಲಿ 8 ಸ್ಥಾನಗಳು ಜೆಡಿಎಸ್ ಉಳಿದ ಮೂರು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ತಿಂಗಳ 17 ರಂದು ಈ ಎರಡು ಗ್ರಾಪಂಗಳ 22 ಕ್ಷೇತ್ರಗಳಿಗೆ ನಡೆದಿತ್ತು. ಚುನಾವಣೆಯ ಮತ ಏಣಿಕೆ ಪ್ರಕ್ರಿಯೆ ಪಟ್ಟಣದ ಮಿನಿವಿಧಾನ ಸೌಧದಲ್ಲಿ ಬುಧವಾರ ಬಿಗಿ ಪೊಲೀಸ್ ಭದ್ರತೆ ನಡುವೆ ನಡೆಯಿತು.
ಆಯ್ಕೆಯಾದವರ ವಿವರ: ವಣಗೂರು ಕ್ಷೇತ್ರದಿಂದ ಲಕ್ಷ್ಮಿ ಎಚ್.ಎಸ್. ಮಂಜುನಾಥ್, ಬ್ಯಾಗಡಹಳ್ಳಿ ಕ್ಷೇತ್ರದಿಂದ ಬಿ.ವಿ ಮುಧುಕುಮಾರ್, ಶೂವಾಕ್ಷಿ, ಮಂಕನಹಳ್ಳಿ ಕ್ಷೇತ್ರದಿಂದ ರಮ್ಯ, ಇಂದಿರಾ, ಬಿ.ಕೆ ಸೋಮಶೇಖರ್,ರತ್ನಮ್ಮ ಮಾಗೇರಿ ಕ್ಷೇತ್ರದಿಂದ ಅನಿತಾಕುಮಾರ್, ಸರೋಜ, ರಮೇಶ್ ಆಯ್ಕೆ ಆಗಿದ್ದಾರೆ.
ಉಚ್ಚಂಗಿ ಗ್ರಾಪಂ: ಉಚ್ಚಂಗಿ ಕ್ಷೇತ್ರದಿಂದ ರವಿಕುಮಾರ್,ಜಾನಕಿ,ಚಿಕ್ಕಂದರೂ ಕ್ಷೇತ್ರದಿಂದ ಲಲಿತಾ, ಪಾಲಹಳ್ಳಿ ಕ್ಷೇತ್ರದಿಂದ ಸತೀಶ್, ಲೋಲಾಕ್ಷಿ, ಕರಗೂರು ಕ್ಷೇತ್ರದಿಂದ ಪ್ರತಿಮಾ, ಪುಷ್ಪವತಿ, ಲಕ್ಕುಂದ ಕ್ಷೇತ್ರದಿಂದ ಕುಶಾಲ, ಮಾನಸ, ಗಿರೀಶ್ ಆಯ್ಕೆಯಾಗಿದ್ದಾರೆ.
ವಿಭಾಗ ಮಟ್ಟದ ಯುವಜನ ಮೇಳ ಮುಂದಕ್ಕೆ
ಹಾಸನ: ಮೈಸೂರಿನ ಕಲಾ ಮಂದಿರದಲ್ಲಿ ಫೆಬ್ರವರಿ 21 ಮತ್ತು 22 ರಂದು ಏರ್ಪಡಿಸಲಾಗಿದ್ದ ಮೈಸೂರು ವಿಭಾಗ ಮಟ್ಟದ ಯುವಜನ ಮೇಳವನ್ನು ಕಾರಣಾಂತರದಿಂದ ಮುಂದೂಡಲಾಗಿದೆ.
ಮುಂದಿನ ದಿನಾಂಕವನ್ನು ನಂತರ ತಿಳಿಯಪಡಿಸಲಾಗುವುದು. ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ಯುವಜನ ಮೇಳದ ವಿಜೇತರು ಗಮನಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ ಕೋರಿದ್ದಾರೆ.