ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಉತ್ತಮ ಸೇವೆಯಿಂದ ಎಸ್‌ಬಿಎಂಗೆ ಜನಮನ್ನಣೆ: ಭುವನೇಂದ್ರ

Srinivasa Murthy VN
Updated On : 20 Feb 2013, 11:04 am

ಅರಸೀಕೆರೆ: ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ರಾಷ್ಟ್ರದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಮೈಸೂರು ಬ್ಯಾಂಕ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಭುವನೇಂದ್ರ ಠಾಕೂರ್ ತಿಳಿಸಿದರು.
  ಪಟ್ಟಣದ ಮೈಸೂರು ಬ್ಯಾಂಕ್ ಶಾಖೆಯ ಆವರಣದಲ್ಲಿ ಏರ್ಪಡಿಸಿದ್ದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮೈಸೂರು ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರ ಕನಸಿನ ಕೂಸಾಗಿ 1913ರಲ್ಲಿ ಹೊರಬಂದ ಈ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನಮನ್ನಣೆಗೆ ಪಾತ್ರವಾಗಿದೆ. ಇದಕ್ಕೆ ಬ್ಯಾಂಕ್ ಸಿಬ್ಬಂದಿ ಪರಿಶ್ರಮವೇ ಕಾರಣವಾಗಿದೆ ಎಂದರು.
 ಸಹಾಯಕ ವ್ಯವಸ್ಥಾಪಕ ಚಂದ್ರಶೇಖರ್ ಮಾತನಾಡಿ, ಬ್ಯಾಂಕ್ ಆರಂಭಗೊಂಡ 100 ವರ್ಷಗಳಲ್ಲಿ ಅತ್ಯುತ್ತಮ ಸೇವೆ ನೀಡಿದೆ. ರಾಜ್ಯಾದ್ಯಂತ 1 ಮುಖ್ಯ ಕಚೇರಿ, 6 ವಿಭಾಗೀಯ ಕಚೇರಿ, 33 ಪ್ರಾದೇಶಿಕ ಕಚೇರಿಗಳು, ಅಲ್ಲದೇ 792 ಶಾಖೆಗಳನ್ನು ಹೊಂದಿದೆ. 1913-2013ರವರೆಗೆ ವಾರ್ಷಿಕ 75,538 ಸಾವಿರ ಕೋಟಿ ರೂ. ಸ್ಥಿರ ಠೇವಣಿ ಹೊಂದಿದ್ದು 43,358ಸಾವಿರ ಕೋಟಿ ರು  ಸಾಲದ ರೂಪದಲ್ಲಿ ನೀಡಿದೆ. ರಾಜ್ಯಾದ್ಯಂತ 917 ಎ.ಟಿ.ಎಂ.ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ವಿವರಿಸಿದರು.
 ಬ್ಯಾಂಕ್ ವ್ಯವಸ್ಥಾಪಕ ಕೆ.ಹೆಚ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. “ÈÚßßOÚ¡ ÈÚßßOÚ¡’ ಖ್ಯಾತಿಯ ಶಿವಕೃಷ್ಣ ದೇಸಾಯಿ(ಶ್ರೀನಿವಾಸಮೂರ್ತಿ) ವಿಶೇಷ ಆಹ್ವಾನಿತರಾಗಿದ್ದರು. ಮುಖ್ಯ ಅತಿಥಿಗಳಾಗಿ ಶಾಂತರಾಂ, ಚಿದಂಬರಂ ಮಾತನಾಡಿದರು.
ಖ್ಯಾತ ಹಾಸ್ಯ ಕಲಾವಿದರಾದ ಎಂ.ಎಸ್.ನರಸಿಂಹಮೂರ್ತಿ, ದಂಡಿರಾಜ್, ಅಸಾದುಲ್ಲಾ  ಬೇಗ್, ಗುಂಡುರಾವ್ ಹಾಸ್ಯಸಂಜೆಯಲ್ಲಿ ನೆರೆದಿದ್ದ ಗ್ರಾಹಕರನ್ನು ನಗೆಗಡಲಲ್ಲಿ ಮುಳುಗಿಸಿದರು. ಕ್ರೀಡಾಚಟುವಟಿಕೆಗಳಲ್ಲಿ ವಿಜೇತರಿಗೆ ಎಸ್.ಬಿ.ಎಂ.ಯೂನಿಯನ್ ಕಾರ್ಯದರ್ಶಿ ವಿ.ರಮೇಶ್ ಬಹುಮಾನ ವಿತರಿಸಿದರೆ ಚಂದ್ರಶೇಖರ್ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement