ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಛಲದಿಂದ ವಿದ್ಯೆ ಕಲಿತರೆ ಯಶಸ್ಸು: ಕುಮಾರಸ್ವಾಮಿ

Srinivasa Murthy VN
Updated On : 22 Feb 2013, 12:00 pm

ಆಲೂರು: ಛಲದಿಂದ ವಿದ್ಯೆ ಕಲಿತಲ್ಲಿ ಯಶಸ್ಸು ಸಾಧ್ಯ ಎಂದು ಆಲೂರು-ಸಕಲೇಶಪುರ ಕ್ಷೇತ್ರ ಶಾಸಕ  ಎಚ್.ಕೆ.ಕುಮಾರ ಸ್ವಾಮಿ ಅಭಿಪ್ರಾಯಪಟ್ಟರು.
 ಅವರು ತಾಲೂಕಿನ ಅಗಸರಹಟ್ಟಿಯಲ್ಲಿ 1963ರಲ್ಲಿ ಪ್ರಾರಂಭವಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಈ ಶಾಲೆ ಸುವರ್ಣ ಮಹೋತ್ಸವ ಆಚರಿಸಿ ಕೊಳ್ಳುತ್ತಿರುವುದು ಹೆಮ್ಮೆಯ ವಿಚಾರವೆಂದರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರತಿಯೊಬ್ಬರು ಸಾಕ್ಷರರಾಗಬೇಕೆಂದರು.
ಇದೇ ಸಂದರ್ಭದಲ್ಲಿ ಸನ್ಮಾನಿತರಾದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಉದಯರವಿ ಮಾತನಾಡಿ  ಗ್ರಾಮದಲ್ಲಿ ನನ್ನನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತಸದ ವಿಷಯ. ಬಡತನದಲ್ಲಿ ಓದಿದ ನಾನು ಮುಂದೆ ಪತ್ರಕರ್ತನಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ಅಧ್ಯಕ್ಷನಾಗಿ ಈಗ ಬಾಲ ನ್ಯಾಯ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರ ಹಿಂದೆ ನನ್ನ ಹಳ್ಳಿಯ ಹಿರಿಯರ ಹಾಗೂ ಶಿಕ್ಷಕರ ಆಶೀರ್ವಾದವೇ ಕಾರಣವೆಂದರು.
ಮಾವನೂರಿನಲ್ಲಿದ್ದ ಮತದಾನ ಕೇಂದ್ರವನ್ನು ಯಡೂರು ಗ್ರಾಮಕ್ಕೆ ವರ್ಗಾಯಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಮುಂದಿನ ಚುನಾವಣೆಯ ಹೊತ್ತಿಗೆ ಮೊದಲಿನಂತೆ ಮತದಾನ ಕೇಂದ್ರವನ್ನು ಮಾವನೂರಿಗೆ ಸ್ಥಳಾಂತರಿಸುವಂತೆ ಕೋರಿದರು.
ನಂತರ ಈ ಶಾಲೆಯಲ್ಲಿ ಹಿಂದೆ ಕಾರ್ಯನಿರ್ವಹಿಸಿದ ಶಿಕ್ಷಕರು ಹಾಗೂ ಶಾಲೆಯಲ್ಲಿ ಕಲಿತು ಸರ್ಕಾರಿ ನೌಕರಿಯಲ್ಲಿರುವವರನ್ನು ಸನ್ಮಾನಿಸಲಾಯಿತು. ಹುಣಸವಳ್ಳಿ ಗ್ರಾಪಂ ಅಧ್ಯಕ್ಷೆ ದಿಲ್ಶಾದ್‌ಬಾನು, ಕೆಪಿಸಿಸಿ ಸದಸ್ಯ ಡಾ.ಮುನಿಸ್ವಾಮಿ, ತಾಲೂಕು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಕೆಜೆಪಿ ಮುಖಂಡ ಎಂ.ವಿ.ತಿಮ್ಮಯ್ಯ, ಕೆ.ಆರ್.ಯೋಗೇಶ್, ಕೆ.ವಿ.ಲೋಕೇಶ್, ನಟರಾಜ್,ವೈ,ಎಸ್.ಪ್ರಕಾಶ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ, ಜಿ.ಆರ್.ಶ್ರೀಕಾಂತ್, ಜೆ.ಆರ್.ನಾರಾಯಣ್, ಟಿ.ಪಿ.ನಾಗರಾಜ್, ಬಿ.ಆರ್.ಧರ್ಮ, ವೇಣುಗೋಪಾಲ್ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.
  ಶಿಕ್ಷಕ ಯೋಗೇಶ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶಂಕರಶೆಟ್ಟಿ ನಿರೂಪಿಸಿದರು. ಸಿ.ಆರ್.ಪಿ.ಮೋಹನ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement