ಜಾವಗಲ್: ಉರುಸ್ ಯಶಸ್ವಿಗೆ ಸಹಕರಿಸಲು ಸಭೆಯಲ್ಲಿ ಮನವಿ
ಜಾವಗಲ್: ಗುರುವಾರ ಸಂಜೆ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಜಾವಗಲ್ನಲ್ಲಿ ನಡೆಯುವ ಉರುಸ್ ಯಶಸ್ವಿ ಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯವೆಂದು ಅರಸೀಕೆರೆ ಸಿಪಿಐ ಗಂಗಾಧರಪ್ಪ ಮನವಿ ಮಾಡಿದರು. ಕಾರ್ಯಕ್ರಮದ ಯಶಸ್ಸಿಗೆ ಸ್ವಯಂಸೇವಕರು ಟ್ರಸ್ಟ್ನವರು ಶ್ರಮಿಸಬೇಕು. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಮುಂಜಾಗ್ರತಾ ಕ್ರಮವಹಿಸ ಬೇಕೆಂದರು. ದರ್ಗಾದ ಪಾವಿತ್ರ್ಯತೆ ಕಾಪಾಡಿ ಕೊಂಡು ಹೋಗುವಂತೆ ಟ್ರಸ್ಟ್ನವರಿಗೆ ತಿಳಿಸಿದರು. ಪಿಎಸ್ಐ ಆರೋಕಿಯಪ್ಪ ಅಮ್ಮ ಅಕಾಡಮಿ ಸಂಚಾಲಕ ವಸಂತಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಧನಂಜಯ, ಮಂಜುನಾಥ ಶೆಟ್ಟಿ ಗ್ರಾಪಂ ಮಾಜಿ ಸದಸ್ಯ ನರಸಿಂಹಸ್ವಾಮಿ ಫಿರೋಜ್ಗಾಂಧಿ ಮಾತನಾಡಿದರು. ಭಾನುವಾರದವರೆಗೆ ಉರುಸ್ ನಡೆಯಲಿದೆ ಎಂದ ಅವರು ಶನಿವಾರ ಕವ್ವಾಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಟ್ರಸ್ಟ್ ಉಪಾಧ್ಯಕ್ಷ ಹಿಸಾಕ್ಹಾಜಿ, ಸದಸ್ಯ ಶಕೀಲ್, ಶಬೀರ್ ಅಹಮದ್ ಅಸ್ರಾಫ್ಹಾಜಿ, ಎಸ್.ಐ ಮಹಾಲಕ್ಷ್ಮೀ ಇದ್ದರು.
ಹೊಳೆನರಸೀಪುರ ಪುರಸಭೆ: 32 ನಾಮಪತ್ರಗಳ ಸಲ್ಲಿಕೆ
ಹೊಳೆನರಸೀಪುರ: ಇಲ್ಲಿನ ಪುರಸಭೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಉಳಿದಿದ್ದು, ಶುಕ್ರವಾರ ನಾನಾ ಪಕ್ಷಗಳಿಂದ ಸ್ಪರ್ಧೆ ಬಯಸಿ ಒಟ್ಟು 32 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಈ ಬಾರಿ ಜೆಡಿಎಸ್ ಹಾಗೂ ಈ ಬಾರಿ ಮೈಚಳಿ ಬಿಟ್ಟಿರುವ ಕಾಂಗ್ರೆಸ್ನಿಂದ ಸ್ಪರ್ಧೆ ಬಯಸಿರುವ ಆಕಾಂಕ್ಷಿಗಳ ಪಟ್ಟಿ ದಿನೇ ದಿನೇ ಹೆಚ್ಚುತ್ತಲೇ ಇದ್ದು ಈ ಎರಡೂ ಪಕ್ಷಗಳಿಗೂ ಅಂತಿಮ ಅಭ್ಯರ್ಥಿಗಳ ಪಟ್ಟಿ ತಯಾರಿಸಲು ಹರಸಾಹಸಪಡುವಂತಾಗಿದೆ.
ನಾಮಪತ್ರ ಸಲ್ಲಿಕೆಗೆ ಫೆ.23 ಶನಿವಾರ ಕಡೆಯ ದಿನವಾಗಿದ್ದು, ಯಾವುದೇ ಪಕ್ಷಗಳಿಂದಲೂ ಇನ್ನೂ ಯಾವುದೇ ಅಭ್ಯರ್ಥಿಗಳಿಗೂ ಅಧೀಕಣತವಾಗಿ ಬಿ. ಫಾರಂ ನೀಡಿಲ್ಲವಾದರೂ, ಶುಕ್ರವಾರ 22 ಪುರುಷರು ಹಾಗೂ 10 ಮಹಿಳೆಯರೂ ಸೇರಿದಂತೆ ಒಟ್ಟು 32 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪತ್ರಕರ್ತ ಎಚ್.ವಿ.ಸುರೇಶ್ಕುಮಾರ್ ಸೇರಿ ಮೂವರು ಸ್ವತಂತ್ರ ಅಭ್ಯರ್ಥಿಯಾ ನಾಮಪತ್ರ ಸಲ್ಲಿಸಿದ್ದಾರೆ.
ಪುರಸಭೆಯ 23 ವಾರ್ಡ್ಗಳಿಗೆ ಶನಿವಾರ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಅಂದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರಗಳು ಸಲ್ಲಿಕೆಯಾಗಲಿವೆ. ಅಲ್ಲದೇ ಈ ಬಾರಿ ಜೆಡಿಎಸ್ಮ್ತ್ತು ಕಾಂಗ್ರೆಸ್ಪ್ಕ್ಷಗಳಿಂದ ಟಿಕೆಟಟ್ದೊರೆಯದವರು ಅಂತಿಮವಾಗಿ ಸ್ವತಂತ್ರ ಇಲ್ಲವೇ ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲುಳಿಯುವ ಸಾಧ್ಯತೆ ಹೆಚ್ಚಿವೆ .
ಪುರಸಭೆ ಸದಸ್ಯತ್ವಕ್ಕೆ ಸ್ಪರ್ಧಿಸಲು ಇದುವರೆವಿಗೂ ತಾಲೂಕು ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಪುರಸಭೆ ಕಚೇರಿಗಳಿಂದ ಒಟ್ಟು 208 ಅರ್ಜಿ ಪಡೆಯಲಾಗಿದ್ದು, ಇದುವರೆಗೂ ಕೇವಲ 32 ನಾಮಪತ್ರಗಳು ಸಲ್ಲಿಕೆಯಾಗಿವೆ.