ಒಬ್ಬೊಬ್ಬರಿಗೆ 2, 3 ಬಿ ಫಾರಂ
-ದಯಾಶಂಕರ ಮೈಲಿ
ಹಾಸನ: ಮಾಜಿ ಪ್ರಧಾನಿ ದೇವೇಗೌಡರು ಖುದ್ದು ಸಹಿ ಮಾಡಿದ ನಗರಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನೀಡುವ ಬಿ ಫಾರಂಗಳನ್ನು ಕರಪತ್ರಗಳಂತೆ ಜೆಡಿಎಸ್ ಮುಖಂಡರು ಹಂಚಿದ್ದು, ಆ ಮೂಲಕ ಮಾಜಿ ಪ್ರಧಾನಿ ಸಹಿಗೆ ಅಗೌರವ ತೋರಿಸಲಾಗಿದೆ.
ಒಬ್ಬೊಬ್ಬರಿಗೆ 3, 2 ಬಿ ಫಾರಂಗಳನ್ನು ಹಂಚಲಾಗಿದೆ. ನಗರಸಭೆ 1 ನೇ ವಾರ್ಡ್ನಿಂದ ಸ್ಪರ್ಧಿಸಲು ಮೂವರಿಗೆ, ನಾಲ್ಲನೇ ವಾರ್ಡ್ನಿಂದ ಇಬ್ಬರಿಗೆ ಹಾಗೂ 9 ನೇ ವಾರ್ಡ್ನಿಂದ ಇಬ್ಬರಿಗೆ ಬಿ ಫಾರಂಗಳನ್ನು ನೀಡಲಾಗಿದೆ. ಅಲ್ಲದೇ ವಾರ್ಡ್ ನಂ 3 ರಲ್ಲಿ ಒಂದೇ ಫಾರಂಗೆ ಇಬ್ಬರ ಅಭ್ಯರ್ಥಿಗಳ ಹೆಸರನ್ನು ಸೂಚಿಸಲಾಗಿದೆ. ಈ ಪ್ರಮಾದದಿಂದ ಅಭ್ಯರ್ಥಿಗಳು ಜೆಡಿಎಸ್ನ ತೆನೆ ಹೊತ್ತ ಮಹಿಳೆಯ ಚಿನ್ನೆಯನ್ನು ಕಳೆದುಕೊಳ್ಳುವ ಸಂಭವವಿದೆ.
ಕುತಂತ್ರ: ಈ ತಪ್ಪನ್ನು ಮುಚ್ಚಿಕೊಳ್ಳಲು ಕೆಲ ಮುಖಂಡರು, ಚುನಾವಣಾಧಿಕಾರಿ ಮೇಲೆ ವಾಮ ಮಾರ್ಗದಲ್ಲಿ ಒತ್ತಡ ಹೇರಿ ಕೆಲ ಬಿ ಫಾರಂಗಳನ್ನು ನಾಪತ್ತೆ ಮಾಡಿಸುವ ಕುತಂತ್ರದಲ್ಲಿ ತೊಡಗಿದ್ದಾರೆ ಎಂದು ದೂರಲಾಗಿದೆ. ಬಿ ಫಾರಂ ಸಲ್ಲಿಸಿರುವ ಬಗ್ಗೆ ವಿಡಿಯೋ ಮತ್ತು ಪೋಟೋ ತೆಗೆದುಕೊಂಡಿದ್ದು, ಒಂದು ವೇಳೆ ಬಿ ಫಾರಂ ನಾಪತ್ತೆ ಮಾಡಿದರೇ ನ್ಯಾಯಾಲಯಕ್ಕೆ ಹೋಗಲು ಚಿಂತನೆ ನಡೆಸಲಾಗಿದೆ.
ವಾರ್ಡ್ ನಂ 9 ರಲ್ಲಿ ಶಾಸಕ ಎಚ್.ಎಸ್. ಪ್ರಕಾಶ್ ಅವರ ಸಹೋದರ ಎಚ್.ಎಸ್. ಅನಿಲ್ಕುಮಾರ್ ಹಾಗೂ ಮಾಜಿ ಶಾಸಕ ಬಿ.ವಿ. ಕರೀಗೌಡರ ಪುತ್ರ ಬಿ.ಕೆ. ಪೂರ್ಣಚಂದ್ರ ಅವರಿಗೆ, ವಾರ್ಡ್ ನಂ 4 ರಿಂದ ಶಾಸಕ ಪ್ರಕಾಶ್ ಅವರ ಸಹೋದರಿ ಪುತ್ರ ಸಂದೇಶ್ ಅವರ ಪತ್ನಿ ಮಮತಾ ಮತ್ತು ಯುವ ಮುಖಂಡ ಎಚ್.ಎಸ್. ವಾಸುದೇವ್ ಅವರ ಪತ್ನಿ ಲೀಲಾವತಿ ಅವರಿಗೆ ಹಾಗೂ ವಾರ್ಡ್ 1 ರಲ್ಲಿ ಮಂಜುನಾಥ್, ಸಿ.ಎನ್. ಭಾನುಪ್ರಕಾಶ್ ಹಾಗೂ ಹರೀಶ್ ಅವರಿಗೆಲ್ಲರೂ ಪ್ರತ್ಯೇಕವಾಗಿ ಬಿ ಫಾರಂ ನೀಡಲಾಗಿದೆ.
ಅಲ್ಲದೇ 3 ನೇ ವಾರ್ಡ್ನಲ್ಲಿ ಜನರ ಪ್ರೀತಿ ಗಳಿಸಿರುವ ಎಚ್.ಎಂ. ಸುರೇಶ್ಕುಮಾರ್ ಹಾಗೂ ಕೃಷ್ಣೇಗೌಡರ ಹೆಸರನ್ನು ಒಂದೇ ಬಿ. ಫಾರಂನಲ್ಲಿ ಬರೆದು, ಸುರೇಶ್ಕುಮಾರ್ ಅವರಿಗೆ ಟಿಕೆಟ್ ತಪ್ಪುವಂತೆ ಮಾಡಲಾಗಿದೆ. ಈಗ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದೆ.
ಏನಾಗುತ್ತೆ: ಒಂದೇ ವಾರ್ಡ್ನಿಂದ ಸ್ಪರ್ಧಿಸುವ ಇಬ್ಬರಿಗೂ ಒಂದು ಪಕ್ಷ ಪ್ರತ್ಯೇಕವಾಗಿ ಬಿ ಫಾರಂಗಳನ್ನು ನೀಡಿದರೇ ಪಕ್ಷ ಚಿಹ್ನೆ ತಪ್ಪುತ್ತದೆ. ಇಬ್ಬರನ್ನು ಪಕ್ಷೇತರ ಅಭ್ಯರ್ಥಿಗಳನ್ನಾಗಿ ಪರಿಗಣಿಸಲಾಗುತ್ತದೆ ಎಂದು ಚುನಾವಣಾ ಶಾಖೆಯ ಹಿರಿಯ ಅಧಿಕಾರಿ ಬಾಬುರಾವ್ ತಿಳಿಸಿದ್ದಾರೆ.
ಗಲಾಟೆ: ಜೆಡಿಎಸ್ ಮುಖಂಡರಾದ ಹಿರಿಯ ವಕೀಲ ಎಂ.ಜಿ.ದೊಡ್ಡೇಗೌಡರ ನಿವಾಸದಲ್ಲಿ ಶುಕ್ರವಾರ ರಾತ್ರಿಯವರೆಗೆ ನಾಯಕ ಎಚ್.ಡಿ.ರೇವಣ್ಣ ಸರ್ವ ಸಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಸರತ್ತು ನಡೆಸಿದರೂ ಪ್ರಯೋಜನವಾಗಲಿಲ್ಲ. ಈ ಸಂದರ್ಭದಲ್ಲಿ ಕೆಲವರು ಆಲೂರು ತಾಲೂಕು ಜೆಡಿಎಸ್ ಮುಖಂಡ ಕೆ.ಎಸ್. ಮಂಜೇಗೌಡರ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಮಾಜಿ ಶಾಸಕ ಬಿ.ವಿ. ಕರೀಗೌಡರನ್ನು ಅಶ್ಲೀಲ ಶಬ್ದಗಳನ್ನು ಬಳಸಿ ತೀವ್ರವಾಗಿ ನಿಂದಿಸಿದ್ದು, ಇದರಿಂದ ಬೇಸತ್ತು ಗೌಡರು, ತಮ್ಮ ಪುತ್ರನಿಗೆ ನೀಡಿದ್ದ ಬಿ ಫಾರಂನ್ನು ಹಿಂದಕ್ಕೆ ನೀಡಿ ಹೊರಟು ಹೋದರು ಎಂದು ಹೇಳಲಾಗಿದೆ. ಈ ಘಟನೆಗಳೆಲ್ಲೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪ್ರಕಾಶ್ ಅವರಿಗೆ ಪ್ರತಿಕೂಲ ಪರಿಣಾಮ ಬೀರಿದರೇ ಆಶ್ಟರ್ಯವಿಲ್ಲ
ಎರಡೆರಡು ಬಿ ಫಾರಂ ಕೊಟ್ಟಿದ್ದು ಹೇಗೆ
ರೇವಣ್ಣನವರು ಹೆಸರನ್ನು ತಪ್ಪಾಗಿ ಬರೆದರೇ ಬೇರೊಂದು ಬಿ ಫಾರಂ ಬೇಕಾಗುತ್ತದೆ ಎಂದು ಮುನ್ನಚ್ಚರಿಕೆ ಕ್ರಮವಾಗಿ 35 ಕ್ಕಿಂತ ಹೆಚ್ಚು ಫಾರಂಗಳನ್ನು ತಂದ, ಸ್ಥಳೀಯ ಮುಖಂಡರಿಗೆ ನೀಡಿದ್ದರು. ಹೀಗೆ ಹೆಚ್ಚುವರಿಯಾಗಿ ನೀಡಿದ್ದ ಫಾರಂಗಳನ್ನು ಬೇಕಾಬಿಟ್ಟಿ ನೀಡಲಾಗಿದೆ ಎಂದು ಪಕ್ಷದ ಕಾರ್ಯಕರ್ತರು ಬಹಿರಂಗವಾಗಿ ಟೀಕಿಸುತ್ತಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳು
1ನೇ ವಾರ್ಡ್ - ಮಂಜುನಾಥ್, ಸಿ.ಎನ್.ಭಾನುಪ್ರಕಾಶ್, ಹರೀಶ್, 2 -ಯೋಗೇಶ್ವರಿ, ವೆಂಕಟೇಶ್, 3ನೇ ವಾರ್ಡ್ -ಕೃಷ್ಣೇಗೌಡ, ಎಚ್.ಎಂ.ಸುರೇಶ್ಕುಮಾರ್, 4-ಲೀಲಾವತಿ, ಮಮತಾ, 5-ಅಂಬಿಕಾ ರವಿಶಂಕರ್, 6- ಪ್ರಸನ್ನ ಕೃಷ್ಣಮೂರ್ತಿ, 7 -ಚಂದ್ರಕಲಾ ನಾಗೇಶ್, 8- ನೇತ್ರಾವತಿ ಗಿರೀಶ್, 9 - ಎಚ್.ಎಸ್.ಅನಿಲ್ಕುಮಾರ್, 10 -ರಜನಿಕಾಂತ್, 11 -ಯೋಗೇಂದ್ರಬಾಬು,
12 -ಎಂ.ಡಿ.ಮಂಜುನಾಥ್, 13 -ನಾಗಮಣಿ ಮಂಜುನಾಥ್, 14 - ಅನ್ನಪೂರ್ಣಮ್ಮ, ನಾಗರತ್ನ ಎಚ್.ಟಿ., 15 - ಮಹೇಶ್, 16 - ಎಚ್.ಎಲ್.ವಿಜಯಕುಮಾರ್, 17 -ಎಜಾಜ್ಪಾಷಾ, ಸೈಯದ್ ಅಜಾಂ, 18 - ಸಯ್ಯದ್ ಶಬ್ಬೀರ್, ಸಯ್ಯದ್ ಅಕ್ರಂ, 19 - ಸಯ್ಯದ್ ಅಸ್ಲಂ, ಕಿರಣ್ಕುಮಾರ್ ಹೊಸಮನೆ, 20 -ವೆಂಕಟೇಶ, 21 - ಇರ್ಷಾದ್, 22 -ಬಾಬುಲಾಲ್, 23 -ಲತಾ, ಹಂಸವೇಣಿ, 24 -ಎಚ್.ಆರ್.ಪ್ರಸನ್ನಕುಮಾರ್, 25 -ಎಚ್.ಡಿ.ಗೋಪಾಲ, 26 -ನಿರ್ಮಲಾ ಯೋಗೇಶ್, 27 -ಸೀತಮ್ಮ, 28 -ಸಯ್ಯದ್ ಅಕ್ಬರ್, 29 -ಪ್ರದೀಪ್ಕುಮಾರ್, 30 -ಸಿ.ಶುಭಾ, 31 - ಶ್ರೀವಿದ್ಯಾ, 32 -ಎಚ್.ಎಸ್.ಶಂಕರ್, ಇರ್ಫಾನ್ಪಾಷಾ, 33 -ವಿಜಯಕುಮಾರ್, 34 - ಸಿ.ಆರ್.ಶಂಕರ್, 35 - ಹೇಮಾವತಿ ಆನಂದ್
ಕಾಂಗ್ರೆಸ್ ಅಭ್ಯರ್ಥಿಗಳು
1ನೇ ವಾರ್ಡ್ - ಜಿ.ರವಿ ಬೆಟ್ಟೇಗೌಡ, 2- ಎಚ್.ಶೋಭ ನಾಗೇಶ್, 3- ಕೃಷ್ಣಮೂರ್ತಿ, 4- ಪ್ರೇಮ ರಾಜೇಶ್, 5- ಕವಿತ ಶ್ರೀನಿವಾಸ್, 6- ಕುಮಾರಸ್ವಾಮಿ, 7 - ಇಂದುಮತಿ, 8- ಮಂಗಳಮ್ಮ, 10- ಯಶವಂತ್, 11- ಕುಮಾರ್, 12- ನರೇಂದ್ರ ಬಾಬು, 13- ಕಮಲಮ್ಮ, 14- ಬಿ.ಲತಾಮಣಿ, 15- ವಾಸು, 16- ಗಣೇಶ್, 17- ಅಫೀಸ್ ಖಾನ್, 18- ಆರೀಫ್ಖಾನ್, 19- ನೀಲಕಂಠಿ, 20- ಮಹಮ್ಮದ್ಶ್ಫಿ, 21- ಆಸೀಫ್, 22- ಖಯಾಮ್, 23- ಪಾರ್ವತಮ್ಮ, 24- ವಿಜಯಕುಮಾರ್, 25- ರಾಘವೇಂದ್ರಾಚಾರ್, 26- ಪದ್ಮಿನಿ, 27- ಸರೋಜ ದಿನೇಶ್, 28- ಸಯ್ಯದ್ತ್ಲ್ಲ್, 29- ರಾಜೇಶ್ , 30- ಸರೋಜ, 31- ಶಕೀಲಬಾನು, 32- ಲಕ್ಷ್ಮೀಜಗದೀಶ್, 33- ವೆಂಕಟೇಶ, 34- ಸಿ.ಟಿ.ಕುಮಾರ್, 35- ಸಾವಿತ್ರಮ್ಮ. 9 ನೇ ವಾರ್ಡ್ನ ನಟೇಶ್ ಕುಮಾರ್ ನಾಮಪತ್ರ ಸಲ್ಲಿಸಿಲ್ಲ. ಇದರ ಹಿಂದೆ ವಿರೋಧಪಕ್ಷದವರ ಕೃತ್ಯ ಇದೆ ಎಂದು ದೂರಲಾಗಿದೆ.
ಬಿಜೆಪಿ ಅಭ್ಯರ್ಥಿಗಳು
1ನೇ ವಾರ್ಡ್ - ವಿಜಯಕುಮಾರ್, 2- ನೇತ್ರಾವತಿ ಹರೀಶ್, 3- ಸ್ವತಂತ್ರ ಅಭ್ಯರ್ಥಿಗೆ ಬೆಂಬಲ, 4- ರೂಪ, 5- ಅಂತಿಮಗೊಂಡಿಲ್ಲ, 6- ಲೋಕೇಶ್, 7- ರೇಣುಕ, 8- ಅಭ್ಯರ್ಥಿ ಇಲ್ಲ, 9- ವಿಜಯಕುಮಾರ್, 10- ಜಯಶೇಖರ್, 11- ರವಿಕುಮಾರ್, 12- ಮನೋಹರ, 13- ವಿಶಾಲಾಕ್ಷಿ, 14- ನಾಗರತ್ನ, 15- ಪ್ರಸನ್ನಕುಮಾರ್, 16- ಜಯರಾಂ, 17- ಈರೇಗೌಡ, 18- ದೀಪಕ್ಗೌಡ, 19- ರಮೇಶ್ಬಾಬು, 20- ರಾಜೇಶ್ವರಿ, 21, 22, 23- ಅಭ್ಯರ್ಥಿಗಳಿಲ್ಲ, 24- ವೆಂಕಟೇಶ್, 25- ಭಾಗ್ಯ, 26- ಶೇಷಮ್ಮ, 27- ಅಭ್ಯರ್ಥಿ ಇಲ್ಲ, 28- ಮಂಜುನಾಥ್, 29- ಅಶೋಕ್, 30- ಹೇಮಲತಾ, 31- ಲಕ್ಷ್ಮಿ, 32 - ಕೃಷ್ಣಕುಮಾರ್, 33 - ಶಿವಪ್ಪ ಶೆಟ್ಚಿ, 34- ಸಲೀಂ ಪಾಷಾ ಗುಲಾಂ, 35- ಶಾಂತಮ್ಮ,
ಆಲೂರು ಪಪಂ - 13 ಪಕ್ಷೇತರರ ನಾಮಪತ್ರ
ಆಲೂರು: ಪಪಂನ 11 ವಾರ್ಡ್ಗೆ 13 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 2ನೇ ವಾರ್ಡ್ ಮರಸುಕೊಪ್ಪಲು ಜೆಡಿಎಸ್ ಅಭ್ಯರ್ಥಿ ನಾಗರತ್ನ ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಕ್ಷೇತ್ರ ಎಸ್ಟಿ ಮಹಿಳಾ ಗೆ ಮೀಸಲಾಗಿತ್ತು. ಯಾವುದೇ ಪಕ್ಷದಿಂದ ನಾಮಪತ್ರ ಸಲ್ಲಿಕೆಯಾಗದ ಕಾರಣ ಜೆಡಿಎಸ್ಗೆ 1 ಸ್ಥಾನ ಅನಾಯಸವಾಗಿ ದೊರೆತಿದೆ.
ಅಭ್ಯರ್ಥಿಗಳ ವಾರ್ಡ್ವಾರು ವಿವರ:
ಕಾಂಗ್ರೆಸ್ನಿಂದ 1ನೇ ವಾರ್ಡ್ನಿಂದ ದೇವಾರಾಜ್, 3ನೇ ವಾರ್ಡ್ ಇರಿಯಾದ್ ಶರೀಫ್, 4ನೇ ವಾರ್ಡ್ ನಿಂದ ಸುಹೀಲ್, 5ನೇ ವಾರ್ಡ್ನಿಂದ ಖಾಲಿಕ್, 7ನೇ ವಾರ್ಡ್ ಸಪ್ತರ್ಬಾನು, 8ನೇ ವಾರ್ಡ್ ಪ್ರೇಮ ಸೋಮಶೇಖರ್, 9ನೇ ವಾರ್ಡ್ ಎಂ.ಪಿ.ವಿಜಯಕಾಂತ್, 10ನೇ ವಾರ್ಡ್ ಮುದ್ದುಕೃಷ್ಣ, 11ನೇ ವಾರ್ಡ್ ರತ್ನ ಮಂಜುನಾಥ್.
ಜೆಡಿಎಸ್ 1ನೇ ವಾರ್ಡ್ ಶಿವಣ್ಣ, 2ನೇ ವಾರ್ಡ್ ನಾಗರತ್ನ, 3ನೇ ವಾರ್ಡ್ ಮಾದೇಗೌಡ, 4ನೇ ವಾರ್ಡ್ ಕಬೀರ್, 5ನೇ ವಾರ್ಡ್ ಜಾಫರ್, 6ನೇ ವಾರ್ಡ್ ಬುಲ್ಶಾದ್ಖಾನಂ, 7ನೇ ವಾರ್ಡ್ ಶಮೀನಾ ಬೇಗಂ, 8ನೇ ವಾರ್ಡ್ ಆಶಾ, 9ನೇ ವಾರ್ಡ್ ದಿನೇಶ್, 10ನೇ ವಾರ್ಡ್ ಅರಸಯ್ಯ ಮತ್ತು 11ನೇ ವಾರ್ಡ್ ನಲ್ಲಿ ಜಯಮ್ಮ.ಬಿಜೆಪಿಯಿಂದ 1ನೇ ವಾರ್ಡ್ ಉಮೇಶ್, 10ನೇ ವಾರ್ಡ್ ಕರಿಯಯ್ಯ ಮತ್ತು 11 ನೇ ವಾರ್ಡ್ ಶಶಿಧರ್.ಕೆಜೆಪಿಯಿಂದ 1ನೇ ವಾರ್ಡ್ ಗಂಗಾಧರ್, 3ನೇ ವಾರ್ಡ್ ಮಂಜುನಾಥ್ಶೆಟ್ಟಿ, 4ನೇ ವಾರ್ಡ್ ಜಯಣ್ಣ, 5ನೇ ವಾರ್ಡ್ ತೌಫಿಕ್, 7ನೇ ವಾರ್ಡ್ ರತ್ನಮ್ಮ, 8ನೇ ವಾರ್ಡ್ ನೀಲಾ, 9ನೇ ವಾರ್ಡ್ ನಂದೀಶ್, 10ನೇ ವಾರ್ಡ್ ಶಿವಣ್ಣ ಮತ್ತು 11ನೇ ವಾರ್ಡ್ ಯಶೋದಾ.
ಪಕ್ಷೇತರಅಭ್ಯರ್ಥಿಯಾಗಿ 3ನೇ ವಾರ್ಡ್ ನಿಂದ ಶಂಶುದ್ದಿನ್, 4ನೇ ವಾರ್ಡ್ ಸಲೀಂ ಪಾಷ ಮತ್ತು ಎ.ಎಚ್.ಲಕ್ಷ್ಮಣ್, 5ನೇ ವಾರ್ಡ್ ಗೋಪಾಲಕೃಷ್ಣ, 6ನೇ ವಾರ್ಡ್ ನೀಲುಉಫೇರ್, 7ನೇವಾರ್ಡ್ ವರಲಕ್ಷ್ಮಿ ಮತ್ತು ನೂರು ಸಲೀಂ, 8ನೇ ವಾರ್ಡ್ ಮಣಿ, 9ನೇ ವಾರ್ಡ್ ಧರ್ಮರಾಜ್, 10ನೇ ವಾರ್ಡ್ ಶಿವಣ್ಣ, ನಾಗರಾಜ್ ಹಾಗೂ 11ನೇ ವಾರ್ಡ್ ಲಲಿತ.