ನಗರಸಭೆಗೆ 304 ನಾಮಪತ್ರ ಸಲ್ಲಿಕೆ: ವಾಪಸ್ ಪಡೆಯಲು 27 ಕಡೇ ದಿನ
ಹಾಸನ: ನಗರ ಸ್ಥಳೀಯ ಸಂಸ್ಥೆಗಳ ಚನಾವಣೆಗೆ ನಾಮಪತ್ರ ಸಲ್ಲಿಸುವ ಅವಧಿ ಕೊನೆಗೊಂಡಿದೆ. ಅಂತಿಮ ದಿನವಾದ ಶನಿವಾರ 304 ನಾಮ ಪತ್ರಗಳು ಸಲ್ಲಿಕೆಯಾದವು. ಬಹುತೇಕ ಚುನಾವಣಾಧಿಕಾರಿಗಳ ಕಚೇರಿ ಆವರಣ ಜನ ಜಂಗುಳಿಯಿಂದ ಕೂಡಿತ್ತು. ನಗರದ 35 ವಾರ್ಡ್ಗಳಲ್ಲಿ ಶನಿವಾರ ನೂರಕ್ಕೂ ಅಧಿಕ ನಾಮಪತ್ರಗಳು ಸಲ್ಲಿಕೆಯಾದವು. ಈವರೆಗೆ ವಾರ್ಡ್ವಾರು ಸಲ್ಲಿಕೆಯಾಗಿರುವ ನಾಮಪತ್ರ ಸಲ್ಲಿಕೆ ವಿವರ:
ವಾರ್ಡ್ ನಂ 1ರಿಂದ ಶನಿವಾರ 13 ನಾಮ ಪತ್ರ ಸ್ವೀಕರಿಸಿದ್ದು, ಈವರೆಗೆ 18 ನಾಮಪತ್ರ ಸಲ್ಲಿಕೆಯಾಗಿವೆ. ವಾರ್ಡ್ ನಂ 2 ರಿಂದ 3 ನಾಮಪತ್ರ ಸ್ವೀಕರಿಸಿದ್ದು, ಈವರೆಗೆ 7 ನಾಮಪತ್ರ ಸಲ್ಲಿಕೆಯಾಗಿವೆ. ವಾರ್ಡ್ ನಂ3 ರಿಂದ 4 ನಾಮಪತ್ರ ಸ್ವೀಕರಿಸಿದ್ದು, ಈವರೆಗೆ 7 ನಾಮಪತ್ರ ಸಲ್ಲಿಕೆಯಾಗಿವೆ. ವಾರ್ಡ್ ನಂ 4ರಿಂದ 5 ನಾಮ ಪತ್ರ ಸ್ವೀಕರಿಸಿದ್ದು ಈವರೆಗೆ 10 ನಾಮಪತ್ರ ಸಲ್ಲಿಕೆಯಾಗಿವೆ. ವಾರ್ಡ್ ನಂ 5 ರಿಂದ 4 ಈವರಗೆ 4 ನಾಮಪತ್ರ ಸಲ್ಲಿಕೆಯಾಗಿವೆ.
ವಾರ್ಡ್ ನಂ 6ರಿಂದ 7 ಈವರೆಗೆ 12 ನಾಮಪತ್ರ ಸಲ್ಲಿಕೆಯಾಗಿವೆ. ವಾರ್ಡ್ ನಂ 7ರಿಂದ 4 ಈವರೆಗೆ 5 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿ, ಜಿಪಂ ಡಿಆರ್ಡಿಎ ಕೋಶದ ಕೆ.ಎಮ್. ಜಗದೀಶ್ ಮಾಹಿತಿ ನೀಡಿದ್ದಾರೆ. ವಾರ್ಡ್ ನಂ. 8 ರಲ್ಲಿ 3 ನಾಮಪತ್ರ ಸ್ವೀಕರಿಸಿದ್ದು ಈವರೆಗೆ 7 ನಾಮಪತ್ರ ಸಲ್ಲಿಕೆಯಾಗಿವೆ. ವಾರ್ಡ್ ನಂ 9ರಲ್ಲಿ 5 ಈವರೆಗೆ 6, ವಾರ್ಡ್ ನಂ 10 ರಲ್ಲಿ 4 11 ನಾಮಪತ್ರ ಸಲ್ಲಿಕೆಯಾಗಿವೆ.
ವಾರ್ಡ್ ನಂ 11ರಲ್ಲಿ 3 ಈವರೆಗೆ 7 ವಾರ್ಡ್ ನಂ 12 ರಲ್ಲಿ 6 ಈವರೆಗೆ 7, ವಾರ್ಡ್ ನಂ 13ರಲ್ಲಿ 5 ಈ ವರೆಗೆ 9 ವಾರ್ಡ್ ನಂ 14 ರಲ್ಲಿ 5 ಈವರೆಗೆ 8 ಅರ್ಜಿ ಸ್ವೀಕಾರವಾಗಿವೆ ಎಂದು ಚುನಾವಣಾಧಿಕಾರಿ, ವಿಶೇಷ ಭೂಸ್ವಾಧೀನಾಧಿಕಾರಿ ನೂರುದ್ದೀನ್ ಶರೀಫ್ ತಿಳಿಸಿದ್ದಾರೆ.
ವಾರ್ಡ್ನಂ 15 ರಿಂದ 2 ಈವರೆಗೆ 7 ನಾಮಪತ್ರ ಸಲ್ಲಿಕೆಯಾಗಿವೆ.
ವಾರ್ಡ್ ನಂ 16ರಿಂದ 3 ಈವರೆಗೆ 8 ನಾಮಪತ್ರ ಸಲ್ಲಿಕೆಯಾಗಿವೆ. ವಾರ್ಡ್ ನಂ 17ರಿಂದ 7 ಈವರೆಗೆ 10 ನಾಮಪತ್ರ ಸಲ್ಲಿಕೆಯಾಗಿವೆ. ವಾರ್ಡ್ ನಂ 18 ರಿಂದ 6 ಈವರೆಗೆ 12 ನಾಮಪತ್ರ ಸಲ್ಲಿಕೆಯಾಗಿವೆ. ವಾರ್ಡ್ ನಂ 19 ರಿಂದ 6 ಈವರೆಗೆ 14 ನಾಮಪತ್ರ ಸಲ್ಲಿಕೆಯಾಗಿವೆ. ವಾರ್ಡ್ ನಂ 20 ರಿಂದ 4 ಈವರೆಗೆ 10 ನಾಮಪತ್ರ ಸಲ್ಲಿಕೆಯಾಗಿವೆ.
ವಾರ್ಡ್ ನಂ 21ರಿಂದ 6 ಈವರೆಗೆ 8 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ
ವಾರ್ಡ್ ನಂ 22ರಿಂದ 5 ಈವರೆಗೆ 10 ನಾಮಪತ್ರ ಸಲ್ಲಿಕೆಯಾಗಿವೆ ವಾರ್ಡ್ ನಂ 23 ರಿಂದ 2 ಈವರೆಗೆ 3 ನಾಮಪತ್ರ ಸಲ್ಲಿಕೆಯಾಗಿವೆ ವಾರ್ಡ್ ನಂ.24 ರಿಂದ 6 ಈವರೆಗೆ 6 ನಾಮಪತ್ರ ಸಲ್ಲಿಕೆಯಾಗಿವೆ ವಾರ್ಡ್ ನಂ 25ರಿಂದ 6 ಈವರೆಗೆ 6 ನಾಮಪತ್ರ ಸಲ್ಲಿಕೆಯಾಗಿವೆ ವಾರ್ಡ್ ನಂ. 26ರಿಂದ 7 ಈವರೆಗೆ 8ನಾಮಪತ್ರ ಸಲ್ಲಿಕೆಯಾಗಿವೆ ವಾರ್ಡ್ ನಂ. 27 ರಿಂದ 4 ಈವರೆಗೆ12 ನಾಮಪತ್ರ ಸಲ್ಲಿಕೆಯಾಗಿವೆ ವಾರ್ಡ್ ನಂ.28ರಿಂದ 7 ಈವರೆಗೆ 10 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚಿದಾನಂದ್ ತಿಳಿಸಿದ್ದಾರೆ.
ವಾರ್ಡ್ ನಂ.29ರಿಂದ 6 ಈವರೆಗೆ 10 ನಾಮಪತ್ರ ಸಲ್ಲಿಕೆಯಾಗಿವೆ ವಾರ್ಡ್ ನಂ. 30 ರಿಂದ 6 ನಾಮಪತ್ರಗಳು ಸೇರಿದಂತೆ ಈವರೆಗೆ 6 ನಾಮಪತ್ರಗಳು ಸಲ್ಲಿಕೆಯಾಗಿವೆ ವಾರ್ಡ್ ನಂ. 31ರಿಂದ 9 ಈವರಗೆ 12 ನಾಮಪತ್ರಗಳು ಸಲ್ಲಿಕೆಯಾಗಿವೆ. ವಾರ್ಡ್ ನಂ. 32 ರಿಂದ 5 ಈವರೆಗೆ 9 ನಾಮಪತ್ರಗಳು ಸಲ್ಲಿಕೆಯಾಗಿವೆ ವಾರ್ಡ್ ನಂ. 33ರಿಂದ 6 ಈವರೆಗೆ 9 ನಾಮಪತ್ರಗಳು ಸಲ್ಲಿಕೆಯಾಗಿವೆ ವಾರ್ಡ್ ನಂ. 34ರಿಂದ 7 ಈವರೆಗೆ 9 ನಾಮಪತ್ರಗಳು ಸಲ್ಲಿಕೆಯಾಗಿವೆ ವಾರ್ಡ್ ನಂ.35ರಿಂದ 2 ಈವರೆಗೆ 7ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ನಾಗರಾಜ್ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆ ಶನಿವಾರಕ್ಕೆ ಮುಕ್ತಾಯವಾಗಿದ್ದು, ಫೆ 25 ನಾಮಪತ್ರ ಪರಿಶೀಲನೆ ಕಾರ್ಯ ಹಾಗೂ ಫೆ 27 ನಾಮಪತ್ರ ಹಿಂಪಡೆಯಲು ಕಡೆಯದಿನವಾಗಿದೆ.
ಚನ್ನರಾಯಪಟ್ಟಣ ವರದಿ: ಮಾ.7ರಂದು ನಡೆಯಲಿರುವ ಪಟ್ಟಣದ ಪುರಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಶನಿವಾರ 63 ನಾಮಪತ್ರ ಸಲ್ಲಿಕೆಯಾಗಿವೆ 23 ವಾರ್ಡ್ಗಳಿಂದ 124 ನಾಮಪತ್ರಗಳು ಸಲ್ಲಿಸಲಾಗಿದೆ. ಪುರಸಭೆ ಮಾಜಿ ಅಧ್ಯಕ್ಷ ಬಿ.ನಾಗರಾಜು, ಅನುಸೂಯ ಪ್ರಕಾಶ್, ಪುಷ್ಪರವಿಕುಮಾರ್, ಭಾಗ್ಯಮ್ಮ ನಾಗರಾಜು, ಮಾಜಿ ಉಪಾಧ್ಯಕ್ಷ ಗೋಪಾಲಕೃಷ್ಣ, ಭಾರತಿ ರಂಗಸ್ವಾಮಿ ಅರ್ಜಿ ಸಲ್ಲಿಸಿದವರಲ್ಲಿ ಪ್ರಮುಖರು.
ಗೋಪಾಲಕೃಷ್ಣ 7ನೇ ಬಾರಿಗೆ ಪುರಸಭೆಗೆ ಪ್ರವೇಶಿಸಲು ನಾಮಪತ್ರ ಸಲ್ಲಿಸಿದ್ದು, ಇವರು 5ಬಾರಿ ಗೆಲುವು ಸಾಧಿಸಿದ್ದರೆ ಒಮ್ಮೆ ಸೋಲುಂಡಿದ್ದಾರೆ. ಪುರಸಭೆಯ 23 ವಾರ್ಡ್ಗಳಲ್ಲಿ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರಿಗೆ ಬಿ.ಪಾರಂ ನೀಡಿದರೆ, ಬಿಜೆಪಿ 15 ವಾರ್ಡ್ಗಳಲ್ಲಿ ಕೆಜೆಪಿ 4 ಹಾಗೂ ಬಿಎಸ್ಆರ್ ಕಾಂಗ್ರೆಸ್ ಒಂದು ವಾರ್ಡ್ನಲ್ಲಿ ಸ್ಪರ್ಧೆಗಿಳಿದಿದೆ.