ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚರಂಡಿ ಅವ್ಯವಸ್ಥೆ ಕುರಿತು ಶಾಸಕರಿಗೆ ಸಾಕ್ಷಾತ್ ದರ್ಶನ

Srinivasa Murthy VN
Updated On : 26 Feb 2013, 12:08 pm

ಜಾವಗಲ್: ಇಲ್ಲಿನ ಕರಿಯಮ್ಮನ ಬೀದಿಯಲ್ಲಿನ ಚರಂಡಿ ಅವ್ಯವಸ್ಥೆಯನ್ನು ಶಾಸಕ ರುದ್ರೇಶಗೌಡರಿಗೆ ಗ್ರಾಮಸ್ಥರು ವಿವರಿಸಿದರು.
ಗ್ರಾಮ ಪಂಚಾಯ್ತಿ 6ನೇ ವಾರ್ಡ್‌ಗೆ ಸೇರಿದ್ದು, ಈ ಭಾಗದಲ್ಲಿನ ಚರಂಡಿಗಳೆಲ್ಲಾ ತುಂಬಿ ತುಳುಕುತ್ತಿವೆ. ಹಂದಿಗಳ ಹಾವಳಿಯಿಂದಾಗಿ ಪರಿಸರ ಹಾಳಾಗುತ್ತಿದೆ. ಕುಡಿಯುವ ನೀರಿನ ಟ್ಯಾಂಕ್‌ನ ಮೇಲ್ಚಾವಣಿ ಕುಸಿದಿದ್ದು ಕ್ರಿಮಿಕೀಟ ಮಿಶ್ರಿತ ನೀರು ಸರಬರಾಜಾಗುತ್ತಿದೆ. ಬೀದಿದೀಪಗಳ ವ್ಯವಸ್ಥೆ ಹಾಳಾಗಿದೆ ಎಂದು ಗ್ರಾಮಸ್ಥರ ತಮ್ಮ ಅಳಲನ್ನು ತೋಡಿಕೊಂಡು, ಕೂಡಲೇ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಸರಬರಾಜುಗೆ ಗಮನಹರಿಸುವಂತೆ ಕೋರಿದರು.  
ಗ್ರಾಮ ದೇವತೆ ಕರಿಯಮ್ಮದೇಗುಲ ಜೀರ್ಣೋದ್ಧಾರ ಕಾಮಗಾರಿಗೆ ಶೀಘ್ರವೇ ಉಳಿದ ಅನುದಾನ ಬಿಡುಗಡೆ ಮಾಡಿಸುವಂತೆ ಹಾಗು ರಾಮಮಂದಿರ ಕಾಮಗಾರಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದು ಕೂಡಲೇ ಈ ಕಾಮಗಾರಿಯನ್ನೂ ಪ್ರಾರಂಭಿಸುವಂತೆ ಶಾಸಕರನ್ನು ಒತ್ತಾಯಿಸಿದರು.
ಶಾಸಕ ರುದ್ರೇಶಗೌಡ, ಅರಸೀಕೆರೆ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್, ಜಿಪಂ ಎಂಜಿನಿಯರ್ ರಾಮಚಂದ್ರಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಶೀಘ್ರವೇ ಬಡಾವಣೆಯ ಸ್ವಚ್ಛತೆ, ಟ್ಯಾಂಕ್ ದುರಸ್ತಿ ಹಾಗೂ ಯಗಚಿ ನೀರು ಸರಬರಾಜು ವ್ಯವಸ್ಥೆ ಮಾಡಿಸುವಂತೆ ಆದೇಶಿಸಿದರು.  
ಉಳಿದ ಅನುದಾನ ಬಿಡುಗಡೆ ಮಾಡುವಂತೆ ಹಾಗೂ ರಾಮಮಂದಿರದ ಕಾಮಗಾರಿ ಕೂಡಲೇ ಪ್ರಾರಂಭಿಸುವಂತೆ ಎಂಜಿನಿಯರ್ ಅವರಿಗೆ ಸೂಚಿಸಿದರು.
ಜಿಪಂ ಮಾಜಿ ಸದಸ್ಯ ಭಾಗ್ಯಾರಾಜೇಗೌಡ, ಯಶೋಧರಕುಮಾರ್, ಗ್ರಾಪಂ ಸದಸ್ಯೆ ಮಾಲಾ, ಮಾಜಿ ಅಧ್ಯಕ್ಷ ಧನಂಜಯ ಕೃಷ್ಣೇಗೌಡ, ಮಾಜಿ ಸದಸ್ಯ ನರಸಿಂಹಸ್ವಾಮಿ, ಗ್ರಾಮದ ದೊಡ್ಡಯ್ಯ, ಚಿದಾನಂದ, ಮಂಜೇಗೌಡ, ಚಂದ್ರಪ್ಪ, ಅಣ್ಣಪ್ಪ, ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement