ಲಂಚ: ಅರಣ್ಯ ಇಲಾಖೆ ಮೂವರು ಸಿಬ್ಬಂದಿ ಲೋಕಾಯುಕ್ತ ಬಲೆಗೆ
ಹಾಸನ: ಜಮೀನು ವರ್ಗೀಕರಣ ವಿಷಯವಾಗಿ ಲಂಚ ಪಡೆಯುತ್ತಿದ್ದ ಅರಣ್ಯ ಇಲಾಖೆಯ ಮೂವರು ನೌಕರರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ. ಅರಣ್ಯ ಸಿಬ್ಬಂದಿ ಸಿದ್ಧಯ್ಯ, ಸುಮನ್ ಹಾಗೂ ವ್ಯವಸ್ಥಾಪಕ ಮಹಾಲಿಂಗಪ್ಪ ಎಂಬುವರೇ ಲೋಕಾಯುಕ್ತ ಬಲೆಗೆ ಬಿದ್ದವರು.
ಅರಸೀಕೆರೆ ತಾ. ಅತೀಕ್ಪಾಷ ತನ್ನ ಜಮೀನಿನ ವರ್ಗೀಕರಣಕ್ಕಾಗಿ ಅರಣ್ಯ ಇಲಾಖೆಯಿಂದ ಎನ್ಓಸಿ ಪಡೆಯುವುದಕ್ಕಾಗಿ ಅರ್ಜಿ ನೀಡಿದ್ದರು. ಅರಣ್ಯಾಧಿಕಾರಿ ಶಿಫಾರಸ್ಸಿನಡಿ ಡಿಸಿಎಫ್ ಕಚೇರಿಗೆ ಕಳುಹಿಸಲು ಸಹಿ ಮಾಡಿಸುವುದಕ್ಕಾಗಿ ಡಿಸಿಎಫ್ ಹೆಸರನ್ನು ಈ ಮೂವರು ಸಿಬ್ಬಂದಿ ದುರ್ಬಳಕೆ ಮಾಡಿದ್ದಾರೆ.
ಅಲ್ಲದೇ ಈ ಮೂವರು 25 ಸಾವಿರ ಲಂಚ ಕೇಳಿದ್ದಾರೆ. ಲಂಚಕೊಡಲು ಇಷ್ಟವಿಲ್ಲದ ಪಾಷ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಸೋಮವಾರ ರಾತ್ರಿ ಸಮಯದಲ್ಲಿ ಲಂಚ ಸ್ವೀಕರಿಸುವಾಗ ಎಸ್ಪಿ ವೇದಮೂರ್ತಿ, ಡಿವೈಎಸ್ಪಿ ಶಿವಬಸಪ್ಪ ಮಾರ್ಗದರ್ಶದಲ್ಲಿ ಎಸ್ಐ ಶಾಂತಿನಾಥ್ ಹೊನ್ನೂರು ಮತ್ತು ನರಸಿಂಹರ್ಮೂ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಮೂವರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ದಾಖಲೆ ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.