ಅರಸೀಕೆರೆ: ತಾಲೂಕು ಬ್ರಾಹ್ಮಣ ಸಂಘ, ಸೀತಾ ಮಹಿಳಾ ಸಂಘ ಬ್ರಾಹ್ಮಣ ಯುವಕ ಸಂಘ, ಗಾಯತ್ರಿ ಪತ್ತಿನ ಸಹಕಾರ ಸಂಘ, ಚಂದ್ರಶೇಖರ ಭಾರತಿ ವಿದ್ಯಾ ಸಂಸ್ಥೆ, ವಿಪ್ರ ನೌಕರರ ಒಕ್ಕೂಟ ಆಶ್ರಯದಲ್ಲಿ ಜೂನ್ 8ರಂದು ಸಂಜೆ 6ಕ್ಕೆ ಪಟ್ಟಣದ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ನೂತನ ಶಾಸಕರಾಗಿ ಆಯ್ಕೆಯಾಗಿರುವ ಶಿವಲಿಂಗೇಗೌಡ ಮತ್ತು ಕಡೂರು ಶಾಸಕ ವೈ.ಎಸ್. ವಿ.ದತ್ತ ಹಾಗೂ ಬೆಂಗಳೂರಿನ ರವಿ ಸುಬ್ಮಹ್ಮಣ್ಯ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.
ಸತತ 2ನೇ ಬಾರಿಗೆ ಕ್ಷೇತ್ರದಿಂದ ಆಯ್ಕೆಯಾಗಿರುವ ರಾಜಕಾರಣಿ, ಅಭಿವೃದ್ಧಿಯ ಹರಿಕಾರ ಕೆ.ಎಂ.ಶಿವಲಿಂಗೇಗೌಡ ಮತ್ತು ಕಡೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ವೈ.ಎಸ್.ವಿ.ದತ್ತ, ಮತ್ತು ಬೆಂಗಳೂರು ಬಸವನಗುಡಿ ಕ್ಷೇತ್ರದಿಂದ 2ನೇ ಬಾರಿಗೆ ಆಯ್ಕೆಯಾಗಿರುವ ರವಿ ಸುಬ್ರಹ್ಮಣ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ರಮೇಶ್, ಕಾರ್ಯದರ್ಶಿ ಎಚ್.ಎಂ.ರಾಮಚಂದ್ರರಾವ್ ತಿಳಿಸಿದ್ದಾರೆ. ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಬಾಂಧವರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.